ಬೆಳಗಾವಿ ಮಹಾನಗರ ಪಾಲಿಕೆಯ ಮಹಾಪೌರ ಹಾಗೂ ಉಪಮಹಾಪೌರ ಚುನಾವಣೆ..

ಬೆಳಗಾವಿ ಮಹಾನಗರ ಪಾಲಿಕೆಯ ಮಹಾಪೌರ ಹಾಗೂ ಉಪಮಹಾಪೌರ ಚುನಾವಣೆ..

ಮಂಗೇಶ ಪವಾರ್ ಮೇಯರ, ವಾಣಿ ಜೋಶಿ ಉಪಮೇಯರ.

ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದಕ್ಕೆ ಸುಣ್ಣ ಬಳೀದ ಬೆಳಗಾವಿ ಬಿಜೆಪಿ..

ಬೆಳಗಾವಿ : ಬೆಳಗಾವಿಯ 23ನೇ ಅವಧಿಯ ಮೇಯರ್ ಆಗಿ ಮಂಗೇಶ ಪವಾರ ಹಾಗೂ‌ ಉಪಮೇಯರ್ ಆಗಿ ವಾಣಿ‌ ವಿಲಾಸ ಜೋಶಿ‌ ಶನಿವಾರ ಪ್ರಚಂಡ ಬಹುಮತದಿಂದ ಆಯ್ಕೆಯಾದರು.

ಮೇಯರ್ ಸ್ಥಾನ ಸಾಮಾನ್ಯ ಹಾಗೂ ಉಪಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. 40 ಸದಸ್ಯರನ್ನು ಹೊಂದಿರುವ ಬಿಜೆಪಿ ಗುಂಪು ಮತ್ತೊಮ್ಮೆ ಪಾಲಿಕೆ‌ ಚುಕ್ಕಾಣಿ ‌ಹಿಡಿಯಿತು.

ಮರಾಠಿಗರಾದ ಮಂಗೇಶ 41ನೇ ವಾರ್ಡಿನ ಸದಸ್ಯ, ಕನ್ನಡತಿಯಾದ ವಾಣಿ 43ನೇ ವಾರ್ಡಿನ ಸದಸ್ಯೆಯಾಗಿದ್ದಾರೆ.

ಈ ಎರಡೂ‌ ವಾರ್ಡುಗಳು ದಕ್ಷಿಣ ವಿಧಾನಸಭಾ‌ ಕ್ಷೇತ್ರಕ್ಕೆ ಬರುತ್ತವೆ. ಪಾಲಿಕೆ ಮೇಲೆ ಹಿಡಿತ ಸಾಧಿಸಿರುವ ಶಾಸಕ ಅಭಯ ಪಾಟೀಲ ಈ ಅಯ್ಕೆಗೆ ಮುಂಚೂಣಿ ನಾಯಕತ್ವ ವಹಿಸಿದ್ದು, ಉತ್ತರದಲ್ಲಿಯೂ ಸಮಾನ ಸಂಖ್ಯೆಯ ನಗರಸೇವಕರಿದ್ದು, ದಕ್ಷಿಣದಲ್ಲಿಯೇ ಮೇಯರ್ ಹಾಗೂ ಉಪ ಮೇಯರ್ ಎರಡೂ ಸ್ಥಾನವನ್ನು ನೀಡಿ, ಉತ್ತರಕ್ಕೆ ಏನೂ ಇಲ್ಲದೇ, ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದಕ್ಕೆ ಸುಣ್ಣ ನೀಡುವ ಕಾರ್ಯ ಬೆಳಗಾವಿಯ ಬಿಜೆಪಿಯಿಂದ ಆಗಿದೆ ಎಂಬುದು ಉತ್ತರ ಮತಕ್ಷೇತ್ರದ ಜನರ ಅಭಿಪ್ರಾಯವಾಗಿದೆ..

ಚುನಾವಣಾ ಪ್ರಕ್ರಿಯೆ:

ಸರಿಯಾಗಿ 1 ಗಂಟೆಗೆ ಪ್ರಾದೇಶಿಕ ಆಯುಕ್ತ ಎಸ್.ಬಿ.ಶೆಟ್ಟೆನ್ನವರ ಚುನಾವಣಾ ಪ್ರಕ್ರಿಯೆ ಆರಂಭಿಸಿದರು.

ಮೇಯರ್ ಸ್ಥಾನಕ್ಕೆ ಬಿಜೆಪಿಯ ಮಂಗೇಶ ಪವಾರ್, ರಾಜು ಭಾತಖಾಂಡೆ, ಎಂಇಎಸ್ ನ ಬಸವರಾಜ ಮಾರುತಿ ಮೋದಗೇಕರ, ಎಐಎಂಐಎಂನ ಶಾಹಿದಖಾನ್ ಪಠಾಣ ತಲಾ 2 ನಾಮಪತ್ರ ಸಲ್ಲಿಸಿದರು.

2 ನಿಮಿಷ ಅವಕಾಶದ ಬಳಿಕ ರಾಜು ಭಾತಖಾಂಡೆ ಹಾಗೂ
ಶಾಹಿದಖಾನ್ ಪಠಾಣ ಉಮೇದುವಾರಿಕೆ ವಾಪಸ್ ಪಡೆದರು.

ಮಂಗೇಶ ಹಾಗೂ ಬಸವಾರಾಜ ಮಧ್ಯೆ ಚುನಾವಣೆ ನಡೆಯಿತು. ಮಂಗೇಶ ಪರವಾಗಿ 40 ವಿರುದ್ಧವಾಗಿ 5 ಮತಗಳು ಚಲಾವಣೆಯಾದವು. ತಟಸ್ಥವಾಗಿ ಇರುವ ಆಯ್ಕೆಗೆ ಯಾರೂ ಕೈ ಎತ್ತಲಿಲ್ಲ.

ಬಸವಾರಾಜ ಪರವಾಗಿ 20 ವಿರೋಧವಾಗಿ 40 ಮತಗಳು ಬಂದವು.
ಅತಿ ಹೆಚ್ಚು ಮತ ಪಡೆದ ಮಂಗೇಶ ಅವರನ್ನು ಮೇಯರ್ ಎಂದು ಘೋಷಿಸಲಾಯಿತು.

ಉಪಮೇಯರ್ ಸ್ಥಾನಕ್ಕೆ
ವಾಣಿ ವಿಲಾಸ ಜೋಶಿ, ದೀಪಾಲಿ ಟೊಪ್ಪಗಿ, ಶ್ರೀಮತಿ ಖುರ್ಷಿದ್ ಮುಲ್ಲಾ, ಲಕ್ಷ್ಮೀ ಲೋಕರಿ ತಲಾ 2 ನಾಮಪತ್ರ ಸಲ್ಲಿದರು. ಖುರ್ಷಿದ್ ಮುಲ್ಲಾ ಹಾಗೂ ದೀಪಾಲಿ ಉಮೇದುವಾರಿಕೆ ವಾಪಸ್ ಪಡೆದರು.

ಕಣದಲ್ಲಿ ಉಳಿದ ವಾಣಿ ವಿಲಾಸ ಜೋಶಿ ಪರವಾಗಿ 40 ವಿರೋಧವಾಗಿ‌ 19 ಮತಗಳು ಬಂದವು.
ಲಕ್ಷ್ಮೀ ಲೋಕರಿ ಪರವಾಗಿ 20 ವಿರೋಧವಾಗಿ 40 ಮತಗಳು ಬಂದಿದ್ದು
ಹೆಚ್ಚು ಮತ ಪಡೆದ ವಾಣಿ ಜೋಶಿ ಅವರನ್ನು ಉಪಮೇಯರ್ ಎಂದು‌ ಘೋಷಿಸಲಾಯಿತು.