ಬೆಳಗಾವಿ ಮಿಡಿಯಾ ಹಾಗೂ ಜಿಪಂ ತಂಡಗಳ ನಡುವೆ ರೋಚಕ ಪಂದ್ಯ..

ಡಾ ಸತೀಶ ಜಾರಕಿಹೊಳಿ ಕ್ರಿಕೆಟ್ ಪಂದ್ಯಾವಳಿ.

ಬೆಳಗಾವಿ ಮಿಡಿಯಾ ಹಾಗೂ ಜಿಪಂ ತಂಡಗಳ ನಡುವೆ ರೋಚಕ ಪಂದ್ಯ..

ಜಿದ್ದಾಜಿದ್ದಿ ಪಂದ್ಯದಲ್ಲಿ ಗೆದ್ದು ಬಿಗೀದ ಬೆಳಗಾವಿ ಮೀಡಿಯಾ ತಂಡ..

ಬೆಳಗಾವಿ : ವೀಕೆಂಡ್ ಮೂಡಿನ ಶನಿವಾರದಂದು ನಗರದ ಸರ್ದಾರ ಮೈದಾನದಲ್ಲಿ ಅತ್ಯಂತ ರೋಚವಾದ ಕ್ರಿಕೆಟ್ ಪಂದ್ಯ ನಡೆದಿದ್ದು, ಜಿಪಂ ಇಲೆವೆನ್ ಹಾಗೂ ಬೆಳಗಾವಿ ಎಲೆಕ್ಟ್ರೋನಿಕ್ ಮೀಡಿಯಾ ತಂಡಗಳ ಮದ್ಯ ಪೈಪೋಟಿಯ ಪ್ರದರ್ಶನ ಪಂದ್ಯದಲ್ಲಿ ಎರಡೂ ತಂಡದ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದು, ಕೊನೆಯಲ್ಲಿ ಬೆಳಗಾವಿ ಎಲೆಕ್ಟ್ರಾನಿಕ್ ಮೀಡಿಯಾ ತಂಡ ಜಯಭೇರಿ ಬಾರಿಸಿದ್ದಾರೆ.

ಪಂದ್ಯದ ಮೊದಲ ಇನ್ನಿಂಗ್ಸನಲ್ಲಿ ಬೆಳಗಾವಿ ಎಲೆಕ್ಟ್ರಾನಿಕ್ ಮೀಡಿಯಾ ತಂಡ ಎಂಟು ಓವರುಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 98 ರನ್ಸಗಳನ್ನು ಗಳಿಸಿದ್ದು, ಸಹದೇವ ಮಾನೆ ಅವರು 22, ಪ್ರವೀಣ್ ಶಿಂಧೆ ಅವರ 14, ರಾಹುಲ್ 11, ಮೈಲಾರಿ ಕೇವಲ ಒಂದೇ ಬಾಲನಲ್ಲಿ 6 ರನ್ಸಗಳ ಗಳಿಕೆಯ ಅತ್ಯುತ್ತಮ ಕೊಡುಗೆಯಿತ್ತು.

ಇನ್ನು 99 ರನ್ನುಗಳ ಗುರಿ ಬೆನ್ನತ್ತಿದ ಜಿಪಂ ಇಲೆವೆನ್ ತಂಡ ಪ್ರಾರಂಭದಲ್ಲೇ ತಮ್ಮ ನಿರಾಶಾದಾಯಕ ಪ್ರದರ್ಶನದಿಂದ ಮೊದಲಿನ ನಾಲ್ಕು ಒವರುಗಳಲ್ಲಿ ತನ್ನ ಪ್ರಮುಖ ಆರು ವಿಕೆಟಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು..

ಬೆಳಗಾವಿ ಎಲೆಕ್ಟ್ರಾನಿಕ್ ಇಲೆವೆನ್ ತಂಡದ ಎಲ್ಲಾ ಬಾಲರಗಳು ಉತ್ತಮ ಪ್ರದರ್ಶನ ನೀಡಿದ್ದು, ರಾಹುಲ್ ಹಾಗೂ ಶಂಕರ ತಲಾ ಮೂರು ವಿಕೆಟ್, ಮೈಲಾರಿ, ಪ್ರಮೋದ, ತಲಾ ಒಂದು ವಿಕೆಟ್ ಪಡೆಯುವದರ ಮೂಲಕ ಬೆಳಗಾವಿ ಎಲೆಕ್ಟ್ರಾನಿಕ್ ಮೀಡಿಯಾ ತಂಡ ಭರ್ಜರಿ 62 ರನ್ನುಗಳ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಸತೀಶ್ ಜಾರಕಿಹೊಳಿ ಟೂರ್ನಮೆಂಟ್ ನಲ್ಲಿ ತನ್ನ ಛಾಪು ಮೂಡಿಸಿದೆ.

ಕೊನೆಯಲ್ಲಿ ಪಂದ್ಯದ ಇಂಪ್ಯಾಕ್ಟ್ ಪ್ಲೇಯರ್ ಆಗಿ ಜಿಪಂ ತಂಡದ ಪರಶುರಾಮ ದುಡಗುಂಟಿ ಅವರು, ಪಂದ್ಯಶ್ರೇಷ್ಠರಾಗಿ ಎಲೆಕ್ಟ್ರಾನಿಕ್ ಮೀಡಿಯಾ ತಂಡದ ರಾಹುಲ್ ಭಾಜನರಾಗಿದ್ದು, ಜಿಪಂ ತಂಡದ ಪರಶುರಾಮ ದುಡಗುಂಟಿ ಅವರ ಏಕಾಂಗಿ ಹೋರಾಟ ಕೊನೆಯಲ್ಲಿ ವ್ಯರ್ಥವಾಗಿದೆ.

ವರದಿ ಪ್ರಕಾಶ್ ಬಸಪ್ಪ ಕುರಗುಂದ..