ಬೆಳಗಾವಿ ಮೇಯರ್ ಹಾಗೂ ಮತ್ತೊಬ್ಬ ನಗರ ಸೇವಕರ ಸದಸ್ಯತ್ವ ರದ್ದು..
ನಗರ ಸೇವಕರ ಮೇಲ್ಮನವಿ ತಿರಸ್ಕರಿಸಿ ಆದೇಶ ನೀಡಿದ ನಗರಾಭಿವೃದ್ಧಿ ಇಲಾಖೆ..
ಬೆಳಗಾವಿ : ಬೆಳಗಾವಿ ಪಾಲಿಕೆಯ ಹಾಲಿ ಮೇಯರ್ ಮಂಗೇಶ್ ಪವಾರ್ ಹಾಗೂ ಮತ್ತೊಬ್ಬ ನಗರ ಸೇವಕ ಜಯಂತ ಜಾಧವ ಅವರ ಸದಸ್ಯತ್ವವನ್ನು ರದ್ದುಗೊಳಿಸಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ..
ಬೆಳಗಾವಿಯ ತಿನಿಸು ಕಟ್ಟೆಯ ಮಳಿಗೆಯಲ್ಲಿ ಇಬ್ಬರೂ ನಗರ ಸೇವಕರು ತಮ್ಮ ಪತ್ನಿಯರ ಹೆಸರಿನಲ್ಲಿ ಅಂಗಡಿ ಪಡೆದಿದ್ದು, ಪಾಲಿಕೆ ಸದಸ್ಯತ್ವದ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಸುಜಿತ್ ಮುಳಗುಂದ ಅವರು ಪ್ರಾದೇಶಿಕ ಆಯುಕ್ತರಿಗೆ ದೂರು ನೀಡಿದ್ದರು, ಆಗ ಪ್ರಾದೇಶಿಕ ಆಯುಕ್ತರು ಇಬ್ಬರ ಸದಸ್ಯತ್ವ ರದ್ದುಗೊಳಿಸಿ ಆದೇಶ ನೀಡಿದ್ದರು. ಇದರ ವಿರುದ್ಧ ಮೇಲ್ಮನವಿ ಹೋಗಿದ್ದ ಇಬ್ಬರು ನಗರ ಸೇವಕರ ವಿರುದ್ಧ ಇಂದು ಆದೇಶ ಬಂದಿದ್ದು, ಕೆಎಂಸಿ ಆಕ್ಟ್ 1976 ಸೆಕ್ಸೆನ್ – 26(3) ಪ್ರಕಾರ ಮೇಲ್ಮನವಿಯನ್ನು ತಿರಸ್ಕರಿಸಿ, ನಗರ ಸೇವಕರ ಸದಸ್ಯತ್ವವನ್ನು ರದ್ದುಗೊಳಿಸಲಾಗಿದೆ.