ಬೆಳಗಾವಿ ಲೋಕಾಯುಕ್ತ ಇಲಾಖೆಯಿಂದ ಜನಸಂಪರ್ಕ ಸಭೆ.

ಬೆಳಗಾವಿ ಲೋಕಾಯುಕ್ತ ಇಲಾಖೆಯಿಂದ ಜನಸಂಪರ್ಕ ಸಭೆ.

ಸಾರ್ವಜನಿಕರ ದೂರು ಅರ್ಜಿಗಳ ವಿಲೇವಾರಿಯಲ್ಲಿ ವಿಳಂಬ ಆಗಬಾರದು.

ಹನುಮಂತರಾಯ, ಪೊಲೀಸ್ ಅಧೀಕ್ಷಕರು ಲೋಕಾಯುಕ್ತ ಬೆಳಗಾವಿ..

ಬೆಳಗಾವಿ : ಸಾರ್ವಜನಿಕ ಆಡಳಿತಕ್ಕೆ ಸಂಬಂಧಿಸಿದಂತೆ ಜನರಿಂದ ದೂರು ಅರ್ಜಿಗಳು ಬಂದಲ್ಲಿ ಅವುಗಳಿಗೆ ಸಕಾಲದಲ್ಲಿ ಸ್ಪಂದನೆ ನೀಡಿ, ಪರಿಹಾರ ಸೂಚಿಸುವ ಕಾರ್ಯವನ್ನು ಎಲ್ಲಾ ಇಲಾಖೆಯ ಸಿಬ್ಬಂದಿಗಳ ಮಾಡಬೇಕು, ವಿನಾಕಾರಣ ವಿಳಂಬ ಮಾಡಬಾರದೆಂದು ಕರ್ನಾಟಕ ಲೋಕಾಯುಕ್ತ ಬೆಳಗಾವಿಯ ಪೊಲೀಸ್ ಅಧೀಕ್ಷಕರಾದ ಹನುಮಂತರಾಯ ಅವರು ಹೇಳಿದ್ದಾರೆ.

ಬುಧವಾರ ದಿನಾಂಕ 09/04//2025 ರಂದು ನಗರದ ತಾಲೂಕು ಪಂಚಾಯತಿಯ ಸಭಾಭವನದಲ್ಲಿ ನಡೆದ ಲೋಕಾಯುಕ್ತ ಇಲಾಖೆಯ ತಾಲೂಕು ಮಟ್ಟದ ಜನ ಸಂಪರ್ಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರಿನ ಉಪಲೋಕಾಯುಕ್ತರು ಬೆಳಗಾವಿ ಜಿಲ್ಲೆಗೆ ಬೇಟಿ ನೀಡುವವರಿದ್ದು, ಯಾವಾಗ ಯಾವ ಇಲಾಖೆಗೆ ಬೇಟಿ ನೀಡುತ್ತಾರೆ ಎಂದು ಹೇಳಲಾಗದು, ಆದ ಕಾರಣ ಜಿಲ್ಲೆಯ ಎಲ್ಲಾ ಇಲಾಖೆಯ ಕಚೇರಿಗಳು ವ್ಯವಸ್ಥಿತವಾಗಿ, ಸರಿಯಾದ ಮಾಹಿತಿಯೊಂದಿಗೆ ತಯಾರಿರಬೇಕು ಎಂದಿದ್ದಾರೆ.

ಕಚೇರಿಯ ದಾಖಲೆಗಳ ಅಚ್ಚುಕಟ್ಟಾದ ನಿರ್ವಹಣೆ, ಕಚೇರಿಯಲ್ಲಿ ಶಿಸ್ತು ಮತ್ತು ಸ್ವಚ್ಛತೆ ಕಾಪಾಡಿಕೊಂಡು ಹೋಗುವಂತೆ ಸೂಚನೆ ನೀಡಿದ್ದು, ಆಡಳಿತ ವಿಷಯದಲ್ಲಿ ಯಾವುದೇ ದೂರುಗಳು ಬಂದಲ್ಲಿ ನಿಗದಿತ ಅವಧಿಯಲ್ಲಿ ಆ ದೂರು ಅರ್ಜಿಗಳಿಗೆ ಉತ್ತರ ನೀಡಬೇಕು, ಕಾಲಹರಣ ಮಾಡಬಾರದು ಎಂದಿದ್ದಾರೆ.

ಬೆಳಗಾವಿ ತಾಲೂಕು ಪಂಚಾಯತಿಯ ಅಧಿಕಾರಿಗಳು ಈ ಸಭೆಯನ್ನು ಆಯೋಜನೆ ಮಾಡಿದ್ದು, ತಾಲೂಕಿನ ವಿವಿಧ ಇಲಾಖೆಗಳ ಸುಮಾರು 50 ಜನ ಅಧಿಕಾರಿ ಹಾಗೂ ಸಿಬ್ಬಂದಿಗಳು ಈ ಸಭೆಗೆ ಹಾಜರಿದ್ದು, ತಾಲೂಕಿನ ವಿವಿಧ ಭಾಗಗಳ 20 ಜನ ಸಾರ್ವಜನಿಕರು ಉಪಸ್ಥಿತರಿದ್ದು, ಅದರಲ್ಲಿ 12 ಜನರು ವಿವಿಧ ವಿಷಯಕ್ಕೆ ಸಂಬಂಧಿಸಿದಂತೆ ದೂರು ಅರ್ಜಿಗಳನ್ನು ನೀಡಿದ್ದು, ಅವು ಲೋಕಾಯುಕ್ತ ಅಧಿಕಾರಿಗಳ ಪರಿಶೀಲನೆಯ ಹಂತದಲ್ಲಿವೆ..

ಈ ಜನಸಂಪರ್ಕ ಸಭೆಯಲ್ಲಿ ಬೆಳಗಾವಿ ಲೋಕಾಯುಕ್ತ ಕಚೇರಿಯ ಅಧಿಕಾರಿಗಳಾದ ಹನುಮಂತರಾಯ, ಭರತ ಎಸ್ ರೆಡ್ಡಿ, ರವಿಕುಮಾರ ಧರ್ಮಟ್ಟಿ, ಬಿ ಎಸ್ ಪಾಟೀಲ್, ಅನ್ನಪೂರ್ಣ ಹುಲಗೂರ, ನಿರಂಜನ ಪಾಟೀಲ್, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು..

ವರದಿ ಪ್ರಕಾಶ್ ಬಸಪ್ಪ ಕುರಗುಂದ..