ಬೆಳಗಾವಿ ವಕೀಲರ ಬಹುದಿನಗಳ ಬೇಡಿಕೆಯ ಈಡೇರಿಕೆ..

ಬೆಳಗಾವಿ ವಕೀಲರ ಬಹುದಿನಗಳ ಬೇಡಿಕೆ ಈಡೇರಿಸಿದ ಸರ್ಕಾರ..

ರಾಜ್ಯ ಗ್ರಾಹಕರ ವ್ಯಾಜ್ಯಗಳ ಆಯೋಗದ ಸಂಚಾರಿ ಪೀಠಕ್ಕೆ ಅನುಮತಿ..

ಸಚಿವ ಸತೀಶ ಜಾರಕಿಹೊಳಿಯವರ ಸಾಪಲ್ಯ ಪ್ರಯತ್ನಕ್ಕೆ ಸಂತಸಗೊಂಡ ನ್ಯಾಯವಾದಿಗಳು..

ಬೆಳಗಾವಿ : ನಗರದಲ್ಲಿ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಂಚಾರಿ ಪೀಠವನ್ನು ಪ್ರಾರಂಭ ಮಾಡಲು ಸರ್ಕಾರ ಅನುಮತಿ ನೀಡಿದ್ದು, ಬೆಳಗಾವಿ ನ್ಯಾಯವಾದಿಗಳ ಹಾಗೂ ಗ್ರಾಹಕರ ಬಹುದಿನಗಳ ಬೇಡಿಕೆ ಇಂದು ಈಡೇರಿದ್ದು, ನ್ಯಾಯವಾದಿಗಳೆಲ್ಲ ಸೇರಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದ್ದಾರೆ..

ಈ ವೇಳೆ ಬೆಳಗಾವಿ ಜಿಲ್ಲಾ ಬಾರ್ ಅಸೋಸಿಯೇಷನ್ನಿನ ಅಧ್ಯಕ್ಷರಾದ ಎಸ್ ಎಸ್ ಕಿವಡಸಣ್ಣವರ ಮಾತನಾಡಿ, ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ನ್ಯಾಯಾಲಯವನ್ನು 1970ರಲ್ಲಿಯೇ ಬೆಳಗಾವಿಯಲ್ಲಿ ಸ್ಥಾಪಿಸಬೇಕೆಂದು ಮಂಜೂರಾಗಿತ್ತು, ಆದರೆ ಕಟ್ಟಡದ ಕೊರತೆ ಇದ್ದ ಕಾರಣ ಸಮಸ್ಯೆ ಹಾಗೆ ಉಳಿದಿತ್ತು.

ಈ ವಿಷಯವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರ ಗಮನಕ್ಕೆ ತಂದಾಗ, ಅವರು ಜಿಲ್ಲಾಧಿಕಾರಿ ಹಾಗೂ ಲೋಕೋಪಯೋಗಿ ಅಧಿಕಾರಿಗಳಿಗೆ ಕಟ್ಟಡ ಒದಗಿಸಲು ಸೂಚಿಸಿದರು, ಅದರಂತೆಯೇ ಆಟೋ ನಗರದಲ್ಲಿ ಇರುವ ಕೆ ಎಚ್ ಪಾಟೀಲ ಸಭಾ ಭವನದಲ್ಲಿ, ಬಾಡಿಗೆಯ ಆದರದ ಮೇಲೆ ಆಯೋಗದ ಸಂಚಾರಿ ಪೀಠವನ್ನು ಶುರು ಮಾಡುತ್ತಿದ್ದು ಇದು ಎಲ್ಲಾ ನ್ಯಾಯವಾದಿಗಳಿಗೆ ಹಾಗೂ ಗ್ರಾಹಕರಿಗೆ ಸಂತಸದ ವಿಷಯವಾಗಿದೆ ಎಂದಿದ್ದಾರೆ.

ಈ ಹಿಂದೆ ಇದೇ ವಿಷಯವಾಗಿ ನ್ಯಾಯವಾದಿಗಳಾದ ಎನ್ ಆರ್ ಲಾತೂರ್ ಅವರು ಬೆಳಗಾವಿಯಲ್ಲಿ ರಾಜ್ಯ ಗ್ರಾಹಕರ ವ್ಯಾಜ್ಯಗಳ ನಿವಾರಣಾ ಆಯೋಗದ ಸಂಚಾರಿ ಪೀಠವನ್ನು ಆರಂಭಿಸುವ ಸಲುವಾಗಿ, ಅನೇಕರನ್ನು ಬೇಟಿ ಆಗಿ, ಹಲವಾರು ಭಾರಿ ಮನವಿಗಳನ್ನು ನೀಡಿದ್ದು, ಕಳೆದ ಅಧಿವೇಶನ ಅವಧಿಯಲ್ಲಿ ಐದು ದಿನಗಳ ಕಾಲ ಧರಣಿ ಕುಳಿತಿದ್ದರು, ಅವರ ಪ್ರಯತ್ನಕ್ಕೆ ಈ ಸಲ ಪ್ರತಿಫಲ ದೊರೆತಿದ್ದು, ಉತ್ತರ ಕರ್ನಾಟಕದ ಒಂಬತ್ತು ಜಿಲ್ಲೆಗಳು ಇದರ ಲಾಭವನ್ನು ಪಡೆಯಲಿವೆ ಎಂದಿದ್ದಾರೆ..

ವರದಿ ಪ್ರಕಾಶ ಬಸಪ್ಪ ಕುರಗುಂದ..