ಬೆಳಗಾವಿ ವಸತಿ ನಿಲಯದ ಅವ್ಯವಸ್ಥೆಗೆ ಆಕ್ರೋಶ ವ್ಯಕ್ತಪಡಿಸಿದ ಜಿಪಂ ಅಧಿಕಾರಿ..
ದಾಸ್ತಾನು ದಾಖಲೆ ನೀಡದ ನಿಲಯಪಾಲಕರಿಗೆ ತರಾಟೆ..
ಓದುವ ವಿಧ್ಯಾರ್ಥಿಗಳಿಗೆ ಉತ್ತಮ ವ್ಯವಸ್ಥೆ ಕಲ್ಪಿಸಬೇಕು..
ಪರಶುರಾಮ ದುಡಗುಂಟಿ, ಮುಖ್ಯ ಲೆಕ್ಕಾಧಿಕಾರಿಗಳು ಜಿಪಂ ಬೆಳಗಾವಿ..
ಬೆಳಗಾವಿ : ಶನಿವಾರ ದಿನಾಂಕ 31/08/2024ರಂದು ಮುಂಜಾನೆ ಸಮಯದಲ್ಲಿಯೇ, ಜಿಪಂ ಮುಖ್ಯ ಲೆಕ್ಕಾಧಿಕಾರಿಗಳಾದ ಪರಶುರಾಮ ದುಡಗುಂಟಿ ಅವರು ತಮ್ಮ ಕಚೇರಿಯ ಸಿಬ್ಬಂದಿಗಳೊಂದಿಗೆ ನಗರದ ವಸತಿ ನಿಲಯಕ್ಕೆ ಬೇಟಿ ನೀಡಿ, ಅಲ್ಲಿರುವ ಕೆಲ ವ್ಯವಸ್ಥೆಯನ್ನು ಸುಧಾರಿಸಲು ಸೂಚನೆ ನೀಡಿದ್ದರೆ..

ಸಂಗಮೇಶ್ವರ ನಗರದಲ್ಲಿರುವ, ಸಮಾಜ ಕಲ್ಯಾಣ ಇಲಾಖೆಯ ಡಾ ಬಿ ಆರ್ ಅಂಬೇಡ್ಕರ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಕ್ಕೆ ಬೇಟಿ ನೀಡಿದ ಜಿಪಂ ಮುಖ್ಯಲೆಕ್ಕಾಧಿಕಾರಿ ಪರಶುರಾಮ ದುಡಗುಂಟಿ ಅವರು, ಅಲ್ಲಿಯ ನಿಲಯ ಪಾಲಕರಿಗೆ ಹಾಗೂ ಸಂಬಂದಿಸಿದ ಅಧಿಕಾರಿಗಳಿಗೆ ವಸತಿ ನಿಲಯದ ಸುಧಾರಣೆಗಾಗಿ ಸೂಚನೆ ನೀಡಿದ್ದು, ಕೆಲ ಸಮಸ್ಯೆಗಳ ಕುರಿತಾಗಿ ಅಧಿಕಾರಿಗಳ ನಡೆಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ..
ವಿಧ್ಯಾರ್ಥಿಗಳ ಸ್ನಾನಗೃಹ ಶೌಚಾಲಯ, ಕೊಠಡಿಗಳು, ಅಡುಗೆ ಕೋಣೆ, ಆಹಾರ ಸಾಮಗ್ರಿಯ ದಾಸ್ತಾನುಗಳನ್ನು ವೀಕ್ಷಿಸಿದ ಅಧಿಕಾರಿಗಳು, ಸ್ವಚ್ಛತೆ ಇಲ್ಲದ ಕಾರಣ ವಾರ್ಡನ್ ಅವರನ್ನು ಪ್ರಶ್ನಿಸಿದ್ದಾರೆ, ಆಹಾರದ ದಾಸ್ತಾನುಗಳ ಬಗ್ಗೆ ಮಾಹಿತಿ ಕೇಳಿದಾಗ, ವಾರ್ಡನ್ ಮಾಹಿತಿ ನೀಡದೆ ಸುಮ್ಮನೆ ನಿಂತಾಗ, ನಿಲಯ ಪಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ..

ಇನ್ನು ವಿಧ್ಯಾರ್ಥಿಗಳ ಕೋಣೆಗಳಲ್ಲಿ ಅಡುಗೆ ಸಾಮಗ್ರಿಗಳು ಕಂಡಿದ್ದು, ಇವು ಇಲ್ಲಿಗೆ ಹೇಗೆ ಬಂದವು? ಯಾರು ನೀಡಿದ್ದಾರೆ? ಕೋಣೆಯಲ್ಲಿ ನೀವು ಯಾಕೆ ಅಡುಗೆ ಮಾಡಿಕೊಳ್ಳುವದು? ಎಂದು ವಿದ್ಯಾರ್ಥಿಗಳನ್ನು ಪ್ರಶ್ನಿಸಿದ್ದಾರೆ, ಜೊತೆಗೆ ಒಂದು ಕೋಣೆಯಲ್ಲಿ ಆರು, ಆರಕ್ಕಿಂತ ಅಧಿಕ ವಿಧ್ಯಾರ್ಥಿಗಳು ಇರುವದನ್ನು ಕಂಡು ಹೆಚ್ಚಿನ ವಿಧ್ಯಾರ್ಥಿಗಳು ಯಾಕೆ ಇರುವರು? ಇವರಿಗೆಲ್ಲ ಹೇಗೆ ಅನುಮತಿ ದೊರಕಿದೆ? ಇದರಿಂದ ಉಳಿದ ವಿದ್ಯಾರ್ಥಿಗಳಿಗೆ ತೊಂದರೆಯಾಗುವದಿಲ್ಲವೆ? ಎಂದು ನಿಲಯ ಪಾಲಕರನ್ನು ಪ್ರಶ್ನೆ ಮಾಡಿದ್ದಾರೆ..

ಹೊರಗಿನಿಂದ ಬರುವ ಒಬ್ಬ ವ್ಯಕ್ತಿಯು ಇಲ್ಲಿ ಸಮಯವಿಲ್ಲದ ಸಮಯದಲ್ಲಿ ಅಡುಗೆ ಮಾಡುವುದರ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು, ಆತ ವಸತಿ ನಿಲಯದ ಅಡುಗೆಯವನು ಅಲ್ಲಾ, ಆದರೂ ಇಲ್ಲಿ ಅಡುಗೆ ಮಾಡಲು ಏಕೆ ಬರುವನು? ಅವರು ಮಾಡಿದ ಆಹಾರ ಸೇವಿಸಿ ಮುಂದೆ ವಿಧ್ಯಾರ್ಥಿಗಳಿಗೆ ಏನಾದರೂ ಆದರೆ ಅದಕ್ಕೆ ಯಾರು ಹೊಣೆ? ಅಂತವರ ಮೇಲೆ ನೀವು ಕ್ರಮ ಯಾಕೆ ತೆಗೆದುಕೊಂಡಿಲ್ಲ? ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು..

ಆದಷ್ಟು ಬೇಗ ವಸತಿ ನಿಲಯದಲ್ಲಿ ಸ್ವಚ್ಛತೆ ಕಾಣಬೇಕು, ವಿಧ್ಯಾರ್ಥಿಗಳಿಗೆ ಸೂಕ್ತ ವ್ಯವಸ್ಥೆ ದೊರೆಯಬೇಕು, ವಸತಿ ನಿಲಯದ ಎಲ್ಲಾ ದಾಖಲೆಗಳು ಸರಿಯಾಗಿರಬೇಕು , ಅಧ್ಯಯನ ಮಾಡುವ ವಿಧ್ಯಾರ್ಥಿಗಳಿಗೆ ಅಡೆತಡೆಯಾಗುವ ಯಾವುದೇ ಅಂಶಗಳು ಇಲ್ಲಿ ಇರಬಾರದು ಎಂದು ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ..

ನಂತರ ಕಂಗ್ರಾಳಿ ಕೆಎಚ್ಚ ಗ್ರಾಮದ ಮರಾಠಿ ಹಿರಿಯ ಪ್ರಾಥಮಿಕ ಶಾಲೆಗೆ ಬೇಟಿ ನೀಡಿದ ಅಧಿಕಾರಿಗಳ ತಂಡ, ಅಲ್ಲಿಯ ಅಡುಗೆ ಕೋಣೆಯ ಅವ್ಯವಸ್ಥೆ, ಅಸ್ವಚ್ಛತೆ, ವಿಧ್ಯಾರ್ಥಿಗಳು ಕುಡಿಯುವ ಹಾಗೂ ಕೈತೊಳೆಯುವ ನೀರಿನ ಘಟಕಗಳಲ್ಲಿಯ ಆಸ್ವಚ್ಚತೆಯ ಬಗ್ಗೆ ಮುಖ್ಯ ಶಿಕ್ಷಕರನ್ನು ಪ್ರಶ್ನೆ ಮಾಡಿ, ತಮ್ಮ ಮನೆಯಲ್ಲಿಯೂ ಹೀಗೆ ಇಟ್ಟಿರುತ್ತಿರಾ? ಸಣ್ಣ ಮಕ್ಕಳು ಸೇವಿಸುವ ಆಹಾರ ಹಾಗೂ ನೀರಿನ ಬಗ್ಗೆ ಕಾಳಜಿ ಇಲ್ಲದ ನೀವು, ಎಂತಹ ಕೆಲಸ ಮಾಡುತ್ತಿದ್ದೀರಾ ಎಂದು ರೇಗಿದರು.

ಅದೇ ರೀತಿ ಸರ್ಕಾರದ ಮಹತ್ವದ ಹಾಗೂ ಕನಸಿನ ಯೋಜನೆಯಾದ ಸ್ಮಾರ್ಟ್ ಕ್ಲಾಸ್ ಯೋಜನೆಯಲ್ಲಿ ನಿರ್ಮಿಸಿದ ವರ್ಗಕೋಣೆಯನ್ನು ತೆರೆಯದೇ, ಅದನ್ನು ಉಪಯೋಗ ಮಾಡದೇ ಇದ್ದುದ್ದು, ಅಧಿಕಾರಿಗಳ ಅಸಮಾಧಾನಕ್ಕೆ ಕಾರಣವಾಗಿದ್ದು, ಶಾಲೆಯ ಎಲ್ಲಾ ವ್ಯವಸ್ಥೆಗಳು ಆದಷ್ಟು ಬೇಗ ಸುಧಾರಣೆ ಆಗಿ ವಿಧ್ಯಾರ್ಥಿಗಳು ಲಭ್ಯವಾಗಬೇಕು, ಇಲ್ಲವಾದರೆ ತಮ್ಮ ಮೇಲೆ ಕ್ರಮ ಜರುಗಿಸಬೇಕಾಗಿತ್ತದೆ ಎಂದು ಎಚ್ಚರಿಸಿದ್ದಾರೆ..

ಈ ಬೇಟಿ ವೇಳೆಯಲ್ಲಿ ಅಧಿಕಾರಿ ಪರಶುರಾಮ ದುಡಗುಂಟಿ ಅವರ ಜೊತೆಗೆ, ಜಿಪಂ ಸಿಬ್ಬಂದಿಗಳಾದ ಶೀತಲ್ ಕುರಾಣಿ, ಶಶಿಧರ ನೇಸರಗಿ ಹಾಗೂ ಸುವರ್ಣಾ ಮಹೇಂದ್ರಕರ ಉಪಸ್ಥಿತರಿದ್ದರು..
ವರದಿ ಪ್ರಕಾಶ ಬಸಪ್ಪ ಕುರಗುಂದ..