ಬೆಳಗಾವಿ ವಿತಾವಿಯ 23ನೆಯ ವಾರ್ಷಿಕ ಘಟಿಕೋತ್ಸವ..
ಬೆಳಗಾವಿ : ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿಯ 23ನೇ ವಾರ್ಷಿಕ ಘಟಿಕೋತ್ಸವ ಇದೇ ಮಂಗಳವಾರ, ದಿನಾಂಕ 01/08/2023 ರಂದು ಪೂರ್ವಾಹ್ನ 11-30ಕ್ಕೆ ವಿ ತಾ ವಿ “ಜ್ಞಾನ ಸಂಗಮ” ಆವರಣದ ಡಾ, ಎ ಪಿ ಜೆ ಅಬ್ದುಲ್ ಕಲಾಂ ಸಂಭಾಂಗಣದಲ್ಲಿ ನಡೆಯಲಿದೆ ಎಂಬ ಮಾಹಿತಿಯನ್ನು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ ವಿದ್ಯಾಶಂಕರ ಎಸ್ ಅವರು ಸುದ್ದಿಗೋಷ್ಟಿಯಲ್ಲಿ ನೀಡಿದ್ದಾರೆ..
ಇದಕ್ಕೂ ಮುಂಚೆ ಅವರು, 28 ವರ್ಷಗಳಲ್ಲಿ ವಿಶ್ವವಿದ್ಯಾಲಯದಿಂದ ಅತೀ ಕಡಿಮೆ ಅವಧಿಯಲ್ಲಿ ಪರೀಕ್ಷೆ ಪಲಿತಾಂಶ ನೀಡಿದ್ದು, ಹಾಗೂ ಪ್ರಮಾಣಪತ್ರ ನೀಡಿದ್ದು ನಮಗೆಲ್ಲಾ ತುಂಬಾ ಹೆಮ್ಮೆ ಎನಿಸುತ್ತದೆ ಎಂದರು..
ಈ ಮಹತ್ವಪೂರ್ವ ಘಟಿಕೋತ್ಸವದಲ್ಲಿ ಕರ್ನಾಟಕ ರಾಜ್ಯದ ರಾಜ್ಯಪಾಲರಾದ ಥಾವರಚಂದ ಗೆಹ್ಲೋಟ್ ಅವರು ಅಧ್ಯಕ್ಷತೆ ವಹಿಸಲಿದ್ದು, ಉನ್ನತ ಶಿಕ್ಷಣ ಇಲಾಖೆಯ ಸಚಿವರಾದ ಡಾ ಎಂ ಸಿ ಸುಧಾಕರ ಅವರು ಉಪಸ್ಥಿತರಿದ್ದು, ಭಾರತೀಯ ತಂತ್ರಜ್ಞಾನ ಸಂಸ್ಥೆ ಮದ್ರಾಸ್ ಇದರ ನಿರ್ದೇಶಕರಾದ ಪ್ರೊ, ವಿ, ಕಾಮಕೋಟಿ ಅವರು ಅತಿಥಿಗಳಾಗಿ ಭಾಗಿಯಾಗಿ, ಘಟಿಕೋತ್ಸವದ ಭಾಷಣ ಮಾಡುವರು ಎಂಬ ಮಾಹಿತಿ ನೀಡಿದ್ದಾರೆ.
ಇನ್ನು ಈ ಘಟಿಕೋತ್ಸವದಲ್ಲಿ ಮೂವರು ಮಹನೀಯರಿಗೆ “ಡಾಕ್ಟರ್ ಆಫ್ ಸೈನ್ಸ್” ಗೌರವ ಪದವಿ ಪ್ರಧಾನ ಮಾಡುತ್ತಿದ್ದು, ಮೊದಲಿಗೆ ಜಗದ್ಗುರು ಶ್ರೀ ಡಾ ನಿರ್ಮಲಾನಂದನಾಥ ಮಹಾಸ್ವಾಮೀಜಿ, ಡಾ ಎ ವಿ ಎಸ್ ಮೂರ್ತಿ ಹಾಗೂ ಶ್ರೀ ಎಚ್ ಎಸ್ ಶೆಟ್ಟಿ ಅವರಿಗೆ ಅವರ ಕ್ಷೇತ್ರಗಳ ಸಾಧನೆಯ ಆಧಾರದ ಮೇಲೆ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಲಾಗುವುದು ಎಂಬ ಮಾಹಿತಿ ನೀಡಿದ್ದಾರೆ..
ಇನ್ನು ವಿಶ್ವವಿದ್ಯಾಲಯದ ಪದಕ ವಿಜೇತರ ಬಗ್ಗೆ ಮಾಹಿತಿ ನೀಡಿದ ಅವರು, ಬೆಂಗಳೂರಿನ ಟೆಕ್ನಾಲಜಿ ಸಂಸ್ಥೆಯ ವಿದ್ಯಾರ್ಥಿಯಾದ ಕುಮಾರ ಮದಕಶಿರಾ ಚಿನ್ಮಯ ವಿಕಾಸ ಎಂಬ ವಿಧ್ಯಾರ್ಥಿ 13 ಚಿನ್ನದ ಪದಕ ಪಡೆದರೆ, ಮೆಕ್ಯಾನಿಕಲ್ ಎಂಜಿನಿಯರ್ ವಿಭಾಗದಲ್ಲಿ (bit) ಬೆಂಗಳೂರು ಸಂಸ್ಥೆಯ ವಿದ್ಯಾರ್ಥಿ ಕುಮಾರ ಅಭಿಷೇಕ್ ಜಿ ಎಂಬುವರು 07 ಚಿನ್ನದ ಪದಕ ಪಡೆದಿದ್ದಾರೆ..
ಇನ್ನು ಕುಮಾರ ಗುಡಿಕಲ್ ಸಾಯಿ ವಂಶಿ, ಕೆ ಆರ್ ಸಂಪತ್ ಕುಮಾರ, ಕುಮಾರಿ ಪಾರ್ವತಿ ಸಲೇರಾ, ಕುಮಾರಿ ಆವಂತಿಕಾ, ಹೀಗೆ ಹತ್ತು ಹಲವಾರು ವಿಧ್ಯಾರ್ಥಿಗಳು ಚಿನ್ನದ ಪದಕ ಪಡೆದು ಸಾಧನೆ ಮಾಡಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ..
ಇನ್ನು ಘಟಿಕೋತ್ಸವದ ದಿವಸ ವಿಧ್ಯಾರ್ಥಿ ಹಾಗೂ ಪಾಲಕರಿಗೆ ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣದಿಂದ ಬಸ್ಸಿನ ವ್ಯವಸ್ಥೆ ಮಾಡಲಾಗಿದ್ದು, ಸರ್ವರಿಗೂ ಆದರದ ಸ್ವಾಗತಕ್ಕಾಗಿ ವಿಶ್ವವಿದ್ಯಾಲಯದಿಂದ ಸಕಲ ವ್ಯವಸ್ಥೆ ಮಾಡಲಾಗಿದೆ ಎಂಬ ಮಾಹಿತಿ ನೀಡಿದರು..
ಈ ಸುದ್ದಿಗೋಷ್ಠಿಯಲ್ಲಿ ಉಪಕುಲಪತಿಗಳಾಗಿ ಕುಲಸಚಿವರು, ಕುಲಸಚಿವರು ಮೌಲ್ಯಮಾಪನ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು..
ವರದಿ ಪ್ರಕಾಶ ಕುರಗುಂದ..