ಬೆಳಗಾವಿ ಶಿಕ್ಷಣ ಸಂಸ್ಥೆಯ ಎನ್ಎಸ್ ಪೈ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟದ ಸಂಬ್ರಮ…
ಬೆಳಗಾವಿ : ಯೋಗ ಪರಿಣಿತರಾದ ಶ್ರೀ ಅಮರೇಂದ್ರ ಕಾನಗೋ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಧ್ವಜಾರೋಹಣ ನೆರವೇರಿಸಿದ್ದು, ಪಾರಿವಾಳ ಹಾರಿಸುವ ಮೂಲಕ ಶಾಲೆಯ ವಾರ್ಷಿಕ ಕ್ರೀಡಾಕೂಟ ಉದ್ಘಾಟನೆಯನ್ನು ಮಾಡಿದರು,
ರಾಮದೇವ್ ಬಾಬಾ ಅವರ ಅನುಯಾಯಿಗಳಾದ ಪತಾಂಜಲಿ ಯೋಗ ಕೇಂದ್ರದಲ್ಲಿ ತರಬೇತಿ ಹೊಂದಿದ ಅನುಭವಿಗಳು ಆದ ಅವರು ಮಕ್ಕಳಿಗೆ ಸಂಸ್ಕಾರದ ಬಗ್ಗೆ ಬಹಳ ಸರಳವಾಗಿ ಮಾರ್ಗದರ್ಶನ ಮಾಡಿದ್ದಾರೆ.

ದಿನಾಲು ತಂದೆ ತಾಯಿ ಹಾಗೂ ಗುರು ಹಿರಿಯರಿಗೆ ಕೈ ಜೋಡಿಸಿ ತಲೆಬಾಗಿ ನಮಸ್ಕರಿಸುವ ಮೂಲಕ ಅಭ್ಯಾಸವನ್ನು ನಿಯಮಿತವಾಗಿ ಮಾಡಬೇಕು, ನಮಸ್ಕರಿಸುವುದು ಯೋಗದ ಒಂದು ಭಾಗ ಹಾಗೂ ಯೋಗ ಅಭ್ಯಾಸವನ್ನು ತಪ್ಪದೇ ನಿಯಮಿತವಾಗಿ ಮಾಡುವ ರೂಢಿ ಇದ್ದಲ್ಲಿ ಸದೃಢ ಆರೋಗ್ಯವಾಗಿ ಅಧ್ಯಯನ ತನ್ನಿಂದ ತಾನೇ ಕರಗತವಾಗುತ್ತದೆ ಎಂದು ಬಹಳ ಮಾರ್ಮಿಕವಾಗಿ ಮಕ್ಕಳಿಗೆ ಹೇಳಿದರು..

ಅಧ್ಯಕ್ಷ ಸ್ಥಾನವನ್ನು ವಹಿಸಿದ ಸಹ ಕಾರ್ಯದರ್ಶಿಗಳಾದ ಅರವಿಂದ್ ಹುನಗುಂದರವರು ಮಕ್ಕಳು ಆಟ, ಊಟ, ಹಾಗೂ ಪಾಠ ಇವು ಮೂರನ್ನು ರೂಡಿಸಿಕೊಳ್ಳಬೇಕು ಎಂದು ಹಾಸ್ಯ ಚಟಾಕಿಗಳ ಮೂಲಕ ರಂಜಿಸಿ ಮಾತನಾಡಿದರು..

ಶಾಲೆಯ ಮುಖ್ಯೋಪಾಧ್ಯಾಯನಿ ಶ್ರೀಮತಿ ರಾಧಿಕಾ ನಾಯಕ್ ಅತಿಥಿ, ಅಧ್ಯಕ್ಷರನ್ನು ಪರಿಚಯಿಸಿ ಸ್ವಾಗತಿಸಿದರು, ದೈಹಿಕ ಶಿಕ್ಷಕಿ ಶ್ರೀಮತಿ ಸವಿತಾ ನಾಯ್ಕರ್ ನಿರೂಪಣೆ ಮಾಡಿದರು, ಶಿಕ್ಷಕರಾದ ಶ್ರೀ ಶ್ರೀಕಾಂತ್ ಮಲಶೆಟ್ಟಿ ವಂದನಾರ್ಪಣೆ ಮಾಡಿದ್ದು, ಮಕ್ಕಳು ತುಂಬಾ ಉತ್ಸಾಹದಿಂದ ಪಥ ಸಂಚಲನೆ ಮಾಡಿ ಗೌರವ ವಂದನೆ ಸಲ್ಲಿಸಿದರು.

ಕ್ರೀಡಾ ಪ್ರತಿಜ್ಞಾವಿಧಿಯನ್ನು ಸ್ವೀಕರಿಸಿದ ಶಾಲಾ
ಮಕ್ಕಳ ಕ್ರೀಡಾ ಸ್ಪರ್ಧೆಗಳು ಮೂರು ದಿನ ಹುರುಪಿನಿಂದ ಭಾಗಿಯಾಗುವ ನಿರೀಕ್ಷೆ ಇದ್ದು, ವಿಜೇತ ಮಕ್ಕಳಿಗೆ ಪ್ರಶಸ್ತಿ ಪತ್ರ ಮೆಡಲ್ ಗಳನ್ನು
ನೀಡಿ ಸತ್ಕರಿಸಲಾಗುವುದು.
ವರದಿ ಪ್ರಕಾಶ ಕುರಗುಂದ..