ಬೆಳಗಾವಿ ಸಂಜೀವಿನಿ ಶಾವಿಗೆ ಬ್ರ್ಯಾಂಡನ ಜನಪ್ರಿಯತೆ..
ಶಾವಿಗೆಯ ಗುಣಮಟ್ಟಕ್ಕೆ ಮೆಚ್ಚುಗೆ ಸೂಚಿಸಿದ ಸಚಿವ ಸತೀಶ ಜಾರಕಿಹೊಳಿ..
ಬೆಳಗಾವಿ : ಕೌಶಲ್ಯಾಅಭಿವೃದ್ಧಿ, ಉದ್ಯಮಶೀಲತಾ ಮತ್ತು ಜೀವನೋಪಾಯ ಇಲಾಖೆಯ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಡೇ-ಎನ್. ಆರ್. ಎಲ್.ಎಂ ಯೋಜನೆಯಡಿ ಬೆಳಗಾವಿ ಜಿಲ್ಲೆಯಲ್ಲಿ ಸುಮಾರು 26,000 ಸ್ವ-ಸಹಾಯ ಸಂಘಗಳು ರಚನೆ ಮಾಡಲಾಗಿದ್ದು, ಇದರಲ್ಲಿ ಸುಮಾರು ಸ್ವ ಸಹಾಯ ಸಂಘ ಸದಸ್ಯರು ಕೃಷಿ ಮತ್ತು ಕೃಷಿಯೇತರ ಚಟುವಟಿಕೆಯಲ್ಲಿ ಕಾರ್ಯಾರತರಾಗಿದ್ದು. ಜಿಲ್ಲೆಯ ಸುಮಾರು 204 ಸಂಘ ಸದಸ್ಯರು ಶಾವಿಗೆ ತಯಾರಿಸುವ ಉದ್ಯೋಗದಲ್ಲಿ ತೊಡಗಿದ್ದು, ಶಾವಿಗೆ ತಯಾರಿಸುತ್ತಿರುವ ಸಂಘ ಸದಸ್ಯರಿಗೆ ರಾಜ್ಯ ಮತ್ತು ರಾಷ್ಟ್ರಾದ್ಯಂತ ಒಳ್ಳೆಯ ಮಾರುಕಟ್ಟೆ ಸೌಲಭ್ಯ ಒದಗಿಸುವ ಉದ್ದೇಶದಿಂದ ಬೆಳಗಾವಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹ ಅಧಿಕಾರಿಗಳು ರಾಹುಲ್ ಶಿಂದೆ (ಆಯ್.ಎ.ಎಸ್.) ಇವರು ಡೇ-ಎನ್. ಆರ್. ಎಲ್.ಎಂ. ಯೋಜನೆಯಡಿ ಜಿಲ್ಲೆಯ ಸ್ವ-ಸಹಾಯ ಸಂಘದ ಸದಸ್ಯರು ತಯಾರಿಸುತ್ತಿರುವ ಶಾವಿಗೆಗೆ ಒಂದು ಯೋಜನೆ ರೂಪಿಸಿ “ಬೆಳಗಾವಿ ಸಂಜೀವಿನಿ ಶಾವಿಗೆ” ಹೆಸರಿನಲ್ಲಿ ಬ್ರ್ಯಾಂಡ್ ತಯಾರಿಸಿದ್ದು, ಸದರಿ “ಬೆಳಗಾವಿ ಸಂಜೀವಿನಿ ಶಾವಿಗೆ” ಬ್ರಾಂಡನ ಸಿ.ಇ.ಒ. ರಾಹುಲ ಶಿಂದೆ ಇವರ ಕಾರ್ಯಕ್ಕೆ ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ ಜಾರಕಿಹೊಳಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಚಿವರು ಸದರಿ ಶಾವಿಗೆಗೆ ಮಾರುಕಟ್ಟೆಗೆ ಚಾಲನೆ ನೀಡಿದ್ದು, ಗೊಕಾಕನ ತಮ್ಮ ನಿವಾಸದಲ್ಲಿ “ಬೆಳಗಾವಿ ಸಂಜೀವಿನಿ ಶಾವಿಗೆ” ಗೆ ಮಾರುಕಟ್ಟೆಗೆ ಚಾಲನೆ ನೀಡಿ ಮಾತನಾಡಿದರು. ಈ ಸಂದರ್ಭದಲ್ಲಿ ಮಾತನಾಡುವಾಗ ಸಚಿವರು ಜಿಲ್ಲೆಯಲ್ಲಿ ಸ್ವ-ಸಹಾಯ ಸಂಘ ಸದಸ್ಯರ ಶಾವಿಗೆ ಉತ್ಪನ್ನ ಬಹಳಷ್ಟ ಇದ್ದು ಇದರಂದ ಸಣ್ಣ ಕುಟುಂಬಗಳು ತಮ್ಮ ಉಪಜೀವನವನ್ನು ನಡೆಸಿಕೊಂಡು ಹೊಗುತ್ತಿದ್ದು ಜಿಲ್ಲಾ ಪಂಚಾಯತ ಅಧಿಕಾರಿಗಳು ಶಾವಿಗೆ ತಯಾರಿಸುತ್ತಿರುವ ಸಂಘ ಸದಸ್ಯರಿಗೆ ಗುಣಮಟ್ಟದ ತರಬೇತಿ ನಿಡಿ ಒಂದು ಒಳ್ಳೆಯ “ಬೆಳಗಾವಿ ಸಂಜೀವಿನಿ ಶಾವಿಗೆ” ಹೆಸರಿನಲ್ಲಿ ಬ್ರ್ಯಾಂಡ್ ಮಾಡಿದ್ದು, ಇದರಿಂದ ಸಂಘ ಸದಸ್ಯರ ಆದಾಯ ದ್ವಿಗುಣ ಆಗುವುದರ ಜೊತೆಗೆ ಆರ್ಥಿಕವಾಗಿ ಸ್ವಾವಲಂಬಿಗಳಾಗಿ ತಮ್ಮ ಜೀವನವನ್ನು ಸುಧಾರಿಸಕೊಳ್ಳ ಬಹುದು ಎಂದಿದ್ದಾರೆ.
ಸದರಿ ಬ್ರಾಡ್ ದಿಂದ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಶಾವಿಗೆಗೆ ಮಾರುಕಟ್ಟೆ ಸೌಲಭ್ಯ ಪಡೆದುಕೊಳ್ಳಬಹುದ ಎಂದರು. ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರು ರವೀಂದ್ರ ಎನ್. ಬಂಗಾರೆಪ್ಪನವರ, ಡೇ-ಎನ್.ಆರ್.ಎಲ್.ಎಂ. ಯೋಜನೆಯ ಡಿ.ಪಿ.ಎಂ. ಮರಿಗೌಡ ಎಮ. ಆರ್., ಜಿಲ್ಲಾ ವ್ಯವಸ್ಥಾಪಕರು (ಕೌಶಲ್ಯ) ಕಿರಣ ಶಿಂದೆ, ಗೊಕಾಕ ತಾಲೂಕು ಪಂಚಾಯತ ಸಹಾಯಕ ನಿರ್ದೇಶಕರು ವಿನಯಕುಮಾರ ನಾಯ್ಡು, ಗೊಕಾಕ ಸಂಜೀವಿನಿ ತಾಲೂಕು ಅಭಿಯಾನ ನಿರ್ವಹಣ ಘಟಕದ ವಲಯ ಮೇಲ್ವಿಚಾರಕರು ಮಹೇಶ್ ಗಾಯಕವಾಡ, ಅಶೋಕ ಪೂಜಾರ, ಬಸವರಾಜ ಚಿನಗುಡಿ, ಶುಭಮ ಸಿಂಗ್ ಮತ್ತು ಇತರರು ಈ ಸಂದರ್ಭದಲ್ಲಿ ಉಪಸ್ಥಿತ ಇದ್ದರು.
ಬೆಳಗಾವಿ ಸಂಜೀವಿನಿ ಶಾವಿಗೆ ಬಗ್ಗೆ ಜಿಪಂ ಅಧಿಕಾರಿಗಳ ಅಭಿಮತ..
(ರಾಹುಲ್ ಶಿಂಧೆ,
ಸಿಇಒ, ಜಿಪಂ ಬೆಳಗಾವಿ..)
ಬೆಳಗಾವಿ ಜಿಲ್ಲಾ ಪಂಚಾಯತ ಬೆಳಗಾವಿ, ಕೃಷಿ ಇಲಾಖೆ, ಕೈಗಾರಿಕೆ ಇಲಾಖೆ, ಆಹಾರ ಸುರಕ್ಷತೆ ಗುಣಮಟ್ಟ ಪ್ರಾಧಿಕಾರ, ಸೆಲ್ಕೋ ಸೋಲಾರ ಕಂಪನಿ ಇವರ ಸಹಯೋಗದೊಂದಿಗೆ ಶಾವಿಗೆ ತಯಾರಿಸುತ್ತಿರುವ ಸಂಘಗಳಿಗೆ ಪ್ರೋಸ್ತಾಹಿಸುವದರ ಜೊತೆಗೆ ಪಿ.ಎಂ.ಎಫ್.ಎಮ.ಇ. ಯೋಜನೆಯಿಂದ ಶೇ. 60 ರಷ್ಟು ಸಹಾಯಧನದಲ್ಲಿ ಜಿಲ್ಲೆಯ ಅರ್ಹ ಸ್ವ ಸಹಾಯ ಸಂಘಗಳಿಗೆ ಸೋಲಾರ ಸಹಿತ ಯಂತ್ರೋಪಕರಣಗಳನ್ನು ಖರಿದಿಸಲು ಪ್ರಯತ್ನ ಮಾಡಲಾಗುತ್ತಿದೆ.
(ರವೀಂದ್ರ ಎನ್. ಬಂಗಾರೆಪ್ಪನವರ, ಯೋ.ನಿ. ಜಿ.ಪಂ. ಬೆಳಗಾವಿ)
ರಾಜ್ಯಾದ್ಯಂತ ಇರುವ ಅಕ್ಕಕೆಫೆಗಳಲ್ಲಿ ಸಾರಿಗೆ ಬಸ್ ನಿಲ್ದಾಣ, ರೈಲು ನಿಲ್ದಾಣ, ವಿಮಾನ ನಿಲ್ದಾಣದ ಮಾರಾಟ ಮಳಿಗೆಗಳು, ಸಂಜೀವಿನಿ ಮಾರಾಟ ಮಳಿಗೆಗಳು, ಸರ್ಕಾರಿ ಕಟ್ಟಡಗಳಲ್ಲಿರುವ ಮಾರಾಟ ಮಳಿಗೆಗಳಲ್ಲಿ ಖಾಸಗಿ ಕಂಪನಿಗಳ ಮ್ವಾಲಗಳಲ್ಲಿ, ಗ್ರಾ.ಪಂ, ತಾ.ಪಂ, ಜಿ.ಪಂ ಮಾಲೀಕತ್ವದ ಮಾರಾಟ ಮಳಿಗೆಗಳಲ್ಲಿ ಬೆಳಗಾವಿ ಶಾವಿಗೆಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿಕೊಡಲಾಗುತ್ತಿದೆ.
ವರದಿ ಪ್ರಕಾಶ ಬಸಪ್ಪ ಕುರಗುಂದ..