ಬೆಳಗಾವಿ ಸಬ್ ರೆಜಿಸ್ಟರ್ ಕಚೇರಿಗಳಲ್ಲಿ ಲೋಕಾಯುಕ್ತ ಪರಿಶೀಲನೆ..
ಕಚೇರಿಯಲ್ಲಿ ಇಂಚಿಚು ಶೋಧ ಕಾರ್ಯ..
ಬೆಳಗಾವಿ : ಸಬ್ ರಿಜಿಸ್ಟರ್ ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಬುಧವಾರ ದಿಢೀರ್ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಲೋಕಾಯುಕ್ತ ಅಧಿಕಾರಿಗಳು ಎರಡು ತಂಡಗಳಾಗಿ ಬೆಳಗಾವಿ ಉತ್ತರ ಹಾಗೂ ದಕ್ಷಿಣ ವಿಭಾಗದ ಕಚೇರಿಗಳ ಇಂಚಿಚೂ ಶೋಧ ಕಾರ್ಯಾಚರಣೆ ಮಾಡಿ ಪರಿಶೀಲಿಸಿದ್ದಾರೆ.
ಸಬ್ ರಿಜಿಸ್ಟರ್ ಕಚೇರಿಯ ಬಾಗಿಲು ಹಾಕಿಕೊಂಡು ಕಚೇರಿಯ ದಾಖಲಾತಿಯ ಮಾಹಿತಿ ಪಡೆದ ಲೋಕಾಯುಕ್ತ ಅಧಿಕಾರಿಗಳು ಕಚೇರಿಗೆ ಬಂದ ಜನರನ್ನು ತಾವು ಯಾವ ಕೆಲಸದ ನಿಮಿತ್ತ ಬಂದಿರುವಿರಿ ಎಂದು ವಿಚಾರಿಸಿ, ಕಚೇರಿಯ ಪ್ರತಿ ಸ್ಥಳಗಳನ್ನು ಸೂಕ್ಷ್ಮವಾಗಿ ಶೋಧನೆ ಮಾಡುವ ಚಿತ್ರಣ ಕಂಡುಬದಿದೆ.

ಸಬ್ ರಿಜಿಸ್ಟರ್ ಅಧಿಕಾರಿಗಳನ್ನು ಪರಿಶೀಲನೆ ನಡೆಸಿದಗ ದಕ್ಷಿಣ ವಿಭಾಗದ ಕಚೇರಿಯ ಕ್ಲಾಕ್೯ ಬಳಿ ಹಣ ಸಿಕ್ಕಿದೆ ಎಂದು ತಿಳಿದು ಬಂದಿರುವ ಮಾಹಿತಿ ಇದ್ದು, ಇದು ನಿರಂತರದ ಸಾಮಾನ್ಯ ಬೇಟಿ ಹಾಗೂ ಪರಿಶೀಲನೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.
ವರದಿ ಪ್ರಕಾಶ್ ಬಸಪ್ಪ ಕುರಗುಂದ..