ಬೆಳಗಾವಿ ಹಾಗೂ ಖಾನಾಪೂರ ತಾಲೂಕುಗಳನ್ನು ಕೈಬಿಟ್ಟಿದ್ದಕ್ಕೆ ರೈತರ ಆಕ್ರೋಶ..!!!
ಬೆಳಗಾವಿ : ಸೋಮವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆಯಲ್ಲಿ ತೊಡಗಿದ ಬೆಳಗಾವಿ ಹಾಗೂ ಖಾನಾಪೂರ ತಾಲ್ಲೂಕಿನ ರೈತರು ಹಾಗೂ ರೈತ ಮುಖಂಡರು ಇತ್ತೀಚೆಗೆ ರಾಜ್ಯ ಸರ್ಕಾರ ಹೊರಡಿಸಿರುವ ಬರಪೀಡಿತ ತಾಲ್ಲೂಕುಗಳ ಪಟ್ಟಿಯಲ್ಲಿ ಮೇಲಿನ ಎರಡು ತಾಲ್ಲೂಕುಗಳು ಇಲ್ಲದಿರುವುದಕ್ಕೆ ಇಂದು ತಾಲೂಕಿನವರು ಜಿಲ್ಲಾಧಿಕಾರಿಗಳ ಕಚೇರಿ ಎದುರಿಗೆ ಪ್ರತಿಭಟನೆಯಲ್ಲಿ ತೊಡಗಿದ್ದರು..

ಈ ವೇಳೆ ಪ್ರತಿಭಟನೆಯ ಮುಂದಾಳತ್ವ ವಹಿಸಿ ಮಾತನಾಡಿದ ನೇಗಿಲ ಯೋಗಿ ರೈತ ಸೇವಾ ಸಂಘದ ರಾಜ್ಯಾಧ್ಯಕ್ಷರಾದ ಆರ್ ಬಿ ಪಾಟೀಲ್ ಅವರು ಮಾತನಾಡಿ, ಜಿಲ್ಲೆಯ ಪೈಕಿ 13 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ, ಬೆಳಗಾವಿ ಮತ್ತು ಖಾನಾಪುರ ತಾಲ್ಲೂಕುಗಳನ್ನು ಏಕೆ ಬಿಟ್ಟಿದ್ದೀರಿ, ಇಲ್ಲಿಯೂ ಮಳೆಯ ಅಭಾವದಿಂದ ಬೆಳೆಯೆಲ್ಲಾ ನಾಶವಾಗಿದೆ, ನೀವು ಸಮೀಕ್ಷೆ ಮಾಡದೇ ವರದಿ ನೀಡಿದ್ದು ತಪ್ಪು ಎಂದರು..

ನೀರು ಸಂಗ್ರಹ ತಾಣಗಳಲ್ಲಿ ಸ್ವಲ್ಪವೂ ನೀರಿಲ್ಲ, ಬತ್ತ ಕಬ್ಬು ಬೆಳೆಗಳು ಒಣಗಿ ಹೋಗಿವೆ, ಕಬ್ಬಿಗೆ ಮತ್ತು ಬತ್ತಕ್ಕೆ ಬಿಳಿ ಚುಕ್ಕೆ ರೋಗ ಆವರಿಸಿದೆ, ಬೆಳಗಾವಿ ತಾಲೂಕಿನಲ್ಲಿ ಆಲೂಗಡ್ಡೆ, ಗೆಣಸು, ಶೇಂಗಾ, ಮುಂತಾದ ರೈತನ ಬೆಳೆಯು ಒಣಗಿ ಹೋಗಿವೆ, ಇದರ ಜೊತೆ ವಿದ್ಯುತ್ ಸಮಸ್ಯೆಯೂ ಕೂಡಿಕೊಂಡು ರೈತರ ಸ್ಥಿತಿ ಸಂಕಟಮಾಯವಾಗಿದೆ ಎಂದರು..
ಜಾನುವಾರುಗಳನ್ನು ಸಾಕಲು ಕೂಡಾ ಕಷ್ಟದ, ಭಯದ ವಾತಾವರಣದಲ್ಲಿ ರೈತನಿದ್ದಾನೆ, ಆದ ಕಾರಣ ಈ ಎರಡೂ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ, ಯೋಗ್ಯ ಮಟ್ಟದ ಪರಿಹಾರ ನೀಡಬೇಕು ಎಂದು ಪ್ರತಿಭಟನೆ ಮೂಲಕ ಮನವಿ ಮಾಡಿಕೊಂಡರು..

ಇದಕ್ಕೆ ಸ್ಪಂದನೆ ನೀಡಿದ ಜಿಲ್ಲಾಧಿಕಾರಿಗಳು, ಈಗಾಗಲೇ ಈ ಎರಡೂ ತಾಲ್ಲೂಕುಗಳ ಬಹುತೇಕ ಭಾಗಗಳನ್ನು ಬರಪೀಡಿತ ಎಂದು ವರದಿ ಸಲ್ಲಿಸಿದ್ದೇವೆ, ನೀವು ಹೇಳಿದಂತೆ ನಾಳೆಯಿಂದ ಮತ್ತೆ ಕೃಷಿ ಹಾಗೂ ತೋಟಗಾರಿಕೆ ಇಲಾಖೆಯವರು ಸೇರಿ ಸರ್ವೇ ಮಾಡಿ, ವರದಿ ನೀಡಿ, ಬರ ಘೋಷಣೆಗೆ ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದರು..
ವರದಿ ಪ್ರಕಾಶ ಕುರಗುಂದ..