ಬೆಳಗಾವಿ ಹಿರಿಯ ನಾಗರಿಕರಿಗೊಂದು ಆಶಾಕಿರಣ ಆಗಲಿರುವ ಸುವಿಧಾಶ್ರಮ…

ಬೆಳಗಾವಿ ಹಿರಿಯ ನಾಗರಿಕರಿಗೊಂದು ಆಶಾಕಿರಣ ಆಗಲಿರುವ ಸುವಿಧಾಶ್ರಮ..

ಗೋಪಾಲ ಜಿನಗೌಡಾ ಫೌಂಡೇಶನ ವತಿಯಿಂದ ಸುವಿಧಾಶ್ರಮ ಆರಂಭ..

ವೃದ್ಧರ ಆಶಾಕಿರಣವಾದ ವೃದ್ಧಾಶ್ರಮ ನಾಳೆಯಿಂದ ಅಲಾರವಾಡದಲ್ಲಿ ಪ್ರಾರಂಭ..

ಬೆಳಗಾವಿ : ಇಂದಿನ ಆಧುನಿಕ ಯಾಂತ್ರಿಕ ಜೀವನದಲ್ಲಿ ಸ್ತ್ರೀ ಪುರುಷರು ತಮ್ಮ ಕೆಲಸದ ಒತ್ತಡದಲ್ಲಿ ವ್ಯಸ್ತವಾಗಿದ್ದು, ಆಧುನಿಕ ಭರಾಟೆಯಲ್ಲಿ ಮಾನವ ಸಂಬಂಧಗಳು ಕುಸಿಯುತ್ತಿವೆ, ಜೊತೆಗೆ ಅವಿಭಕ್ತ ಕುಟುಂಬಗಳು ಕೂಡಾ ನಶಿಸುತ್ತಿವೆ ಆದಕಾರಣ ಹಿರಿಯ ನಾಗರಿಕರ ಪಾಲನೆ ಪೋಷಣೆಗಾಗಿ ಸಮಾಜದಲ್ಲಿ ವೃದ್ಧಾಶ್ರಮಗಳ ಅತೀ ಅವಶ್ಯಕಯಿದೆ ಎಂದು ಗೋಪಾಲ ಜಿನಗೌಡ ಅವರು ಹೇಳಿದ್ದಾರೆ.

ಶನಿವಾರ ನಗರದ ಖಾಸಗಿ ಹೋಟೆಲಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೋಪಾಲ ಜಿನಗೌಡ್ ಪೌಂಡೇಶನ್ನಿನ ಅಧ್ಯಕ್ಷರಾದ ಗೋಪಾಲ ಜಿನಗೌಡ ಅವರು ಇಂದಿನ ಆಧುನಿಕ ಸಮಾಜದಲ್ಲಿ ವೃದ್ಧಾಶ್ರಮಗಳ ಅವಶ್ಯಕತೆ ಕುರಿತು ಅದೇ ಕಾರಣಕ್ಕಾಗಿ ತಾವು ಸುವಿಧಾಶ್ರಮವನ್ನು ಸ್ಥಾಪಿಸಿರುವ ಕಾರಣವದ ಬಗ್ಗೆ ಮಾತನಾಡಿದ್ದಾರೆ.

ತಮ್ಮ ಸ್ನೇಹಿತನೊಬ್ಬ ದಕ್ಷಿಣ ಭಾರತದ ಖ್ಯಾತ ವೈದ್ಯನಾಗಿದ್ದು ಆತನ ಮುಪ್ಪಿನಾವಸ್ಥೆಯಲ್ಲಿ ಆತನನ್ನು ಯಾರು ನೋಡದೆ ಒಬ್ಬಂಟಿಯಾಗಿ ಇರುವ ಸ್ಥಿತಿಯನ್ನು ನೋಡಲಾರದೆ ಇಂದು ನಾನು ವೃದ್ಧಾಶ್ರಮ ಸ್ಥಾಪನೆ ಮಾಡುತ್ತಿದ್ದೇನೆ ಎಂದು ಹೇಳಿ, ಈಗಾಗಲೇ ಸಮಾಜ ಸೇವಾ ಮನೋಭಾವನೆಯಿಂದ ಬೆಳಗಾವಿ ನಗರದಲ್ಲಿ ಶೈಕ್ಷಣಿಕ ಹಾಗೂ ಔದ್ಯೋಗಿಕ ಕ್ಷೇತ್ರದಲ್ಲಿ ಕಾರ್ಯನಿರತ ಆಗಿರುವ ಗೋಪಾಲ ಜಿನಗೌಡ ಪೌಂಡೇಶನ್ ವತಿಯಿಂದ ನಿರ್ಮಿತವಾದ ಈ ಸುವಿಧಾಶ್ರಮ ಹಿರಿಯ ನಾಗರಿಕರಿಗೆ ಒಂದು ವರದಾನವಾಗಲಿದೆ ಎಂದಿದ್ದಾರೆ.

ಇನ್ನು ಸಂಸ್ಥೆಯ ಮತ್ತೊಬ್ಬ ಪದಾಧಿಕಾರಿಯಾದ ಅಭಯ ಅವಲಕ್ಕಿ ಅವರು ಸುವಿಧಾಶ್ರಮದ ವಿಶೇಷತೆಗಳ ಬಗ್ಗೆ ಮಾತನಾಡಿ, ಒಂದು ಎಕರೆ ಜಾಗದಲ್ಲಿ ವಿಶಾಲವಾಗಿ ನಿರ್ಮಿತವಾದ ಆಶ್ರಮ ಇದಾಗಿದ್ದು, ಪ್ರಾರ್ಥನಾ ಮಂದಿರ, ಸಂಗೀತ ಕೊಠಡಿ, ವ್ಯಾಯಾಮ, ಕ್ರೀಡಾ ಸಾಮಗ್ರಿ, ಸಮತೋಲನ ಸಸ್ಯಾಹಾರ, ವೈದ್ಯರ ಸೇವೆ, ರಾಷ್ಟ್ರೀಯ ಹಾಗೂ ಸಾಂಸ್ಕೃತಿಕ ಹಬ್ಬಗಳ ಆಚರಣೆ, ವ್ಯವಸ್ಥಿತ ಗ್ರಂಥಾಲಯ, ಸುಸಜ್ಜಿತ ಕೊಠಡಿಗಳು, ದೂರದರ್ಶನ ಸಭಾಂಗಣ, ಯೋಗಾಸನ ಕೇಂದ್ರ, ಶುದ್ಧ ಗಾಳಿ ಬೆಳಕು ನೀರು, ಏಕರೂಪ ಊಟದ ವ್ಯವಸ್ಥೆ, ಮಾನಸಿಕ ಆರೋಗ್ಯದ ಕಾಳಜಿ, ಸದಾ ಲಭ್ಯವಿರುವ ಸೇವಾ ಸಿಬ್ಬಂದಿ, ವಾಯುವಿಹಾರಕ್ಕೆ ಉದ್ಯಾನ ಇತ್ಯಾದಿ ಸೇವೆಗಳನ್ನು ಸುವಿಧಾಶ್ರಮದಲ್ಲಿ ನೀಡಲಾಗುತ್ತದೆ ಎಂಬ ಮಾಹಿತಿ ನೀಡಿದ್ದಾರೆ.

65 ವಯಸ್ಸು ಮೇಲ್ಪಟ್ಟ ಗಂಡುಮಕ್ಕಳಿಲ್ಲದ ವೃದ್ಧರು ಇಲ್ಲಿ ಸೇರಬಹುದು, ತಿಂಗಳಿಗೆ 12 ಸಾವಿರ ರೂಪಾಯಿಗಳ ಶುಲ್ಕವಿದ್ದು, ಅತ್ಯಂತ ಸುವ್ಯವಸ್ಥಿತ ಸೇವೆಯನ್ನು, ನೆಮ್ಮದಿಯ ಜೀವನವನ್ನು ಇಳಿವಯಸ್ಸಿನ ಹಿರಿಯರಿಗೆ ಈ ಸುವಿಧಾಶ್ರಮ ನೀಡುತ್ತದೆ ಎಂದಿದ್ದಾರೆ.

ವೃದ್ಧರು ಸ್ವತಂತ್ರವಾಗಿ ಸರ್ವದಾ ಸಂತೋಷದಿಂದ ಇರುವಂತೆ ನೋಡಿಕೊಳ್ಳಲು ಈ ವೃದ್ಧಾಶ್ರಮವು ನಾಳೆಯಿಂದ ಕಾರ್ಯ ನಿರ್ವಹಿಸುತ್ತಿದ್ದು, ಇದರ ಪ್ರವೇಶ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ವಿಳಾಸ, ಸಂತೋಷ ಜಿನಗೌಡ 9448578387,
ಅಭಯ ಅವಲಕ್ಕಿ, 9845442871,
ಕುಂತುಸಾಗರ ಹರದಿ, 9590541008 ಇವರನ್ನು ಸಂಪರ್ಕಿಸಬಹುದು..

ವರದಿ ಪ್ರಕಾಶ್ ಬಸಪ್ಪ ಕುರಗುಂದ