ಬೆಳಿಗ್ಗೆನೇ ಪೌರ ಕಾರ್ಮಿಕರೊಂದಿಗೆ “ಹರ ಘರ ತಿರಂಗಾ” ಅಭಿಯಾನ ನಡೆಸಿದ ಪಾಲಿಕೆ ಆಯುಕ್ತರು..!!!

ಬೆಳಿಗ್ಗೆನೇ ಪೌರ ಕಾರ್ಮಿಕರೊಂದಿಗೆ “ಹರ ಘರ ತಿರಂಗಾ” ಅಭಿಯಾನ ನಡೆಸಿದ ಪಾಲಿಕೆ ಆಯುಕ್ತರು..

ಸ್ವಚ್ಛತೆಯ ಬಗ್ಗೆ ನಿರ್ಲಕ್ಷ ತೋರಿದ ಗುತ್ತಿಗೆದಾರರಿಗೆ ದಂಡ ವಿಧಿಸಿದ ಆಯುಕ್ತರು..

ಬೆಳಗಾವಿ : ಸೋಮವಾರ ದಿನಾಂಕ 14/8/2023 ರಂದು ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತರಾದ ಅಶೋಕ್ ದುಡಗುಂಟಿ ಅವರು ಬೆಳಗ್ಗೆ 5.45 ಗಂಟೆಗೆ ಪಾಲಿಕೆಯ ಗ್ಯಾರೇಜಗಳಿಗೆ ಭೇಟಿ ನೀಡಿ, ಪಾಲಿಕೆಯ ಎಲ್ಲಾ ವಾಹನ ಚಾಲಕರ ಜೊತೆ ” ಹರ್ ಘರ ತಿರಂಗಾ” ಅಭಿಯಾನದಲ್ಲಿ ಭಾಗಿಯಾಗಿ, ಪೋಟೊ ತಗೆಸಿಕೊಂಡು, ಘನ ಸರ್ಕಾರದ ಆದೇಶದ ನಿಬಂಧನೆಗಳನ್ನು ಪೂರ್ಣಗೊಳಿಸಿದ್ದಾರೆ..

ನಂತರ ಕೋಟೆ ಕೆರೆ ಬೀಟ್ ಆಫೀಸ್ ಪೌರಕಾರ್ಮಿಕರ ಜೊತೆ ರಾಷ್ಟ್ರ ದ್ವಜದ ಜೊತೆ ಸೆಲ್ಫಿ ಪೋಟೊ ತಗೆಸಿದ ಆಯುಕ್ತರು, ನಂತರ ಮಹಾಂತೇಶ ನಗರದ ಇಂದಿರಾ ಕ್ಯಾಂಟೀನಗೆ ಭೇಟಿ ನೀಡಿ ಆಹಾರದ ಗುಣಮಟ್ಟ ಪರೀಕ್ಷೆ ಮಾಡಿದರು..

ನಂತರ ಓಲ್ಡ್ ಮತ್ತು ನೀವ್ ಗಾಂಧಿ ನಗರದ ವಾರ್ಡ್ ಕಾರ್ಪೋರೇಟರ್ ಆದ ಅಜೀಂ ಪಟ್ವೇಕರ ಜೊತೆ ಆಲ್ಲಿಯ ಸ್ವಚ್ಛತಾ, ಎಲೆಕ್ಟ್ರಿಕಲ್ ಹಾಗೂ ನಾಲಾ ಪರಿಶೀಲನೆಯ ಕಾರ್ಯಗಳನ್ನು ಪರಿವಿಕ್ಷಿಸಿದ ಅವರು, ಸರಿಯಾಗಿ ಸ್ವಚ್ಛತಾ ಕೆಲಸ ನಿರ್ವಹಿಸಲು ವಿಫಲವಾದ ಗುತ್ತಿಗೆದಾರರಿಗೆ ದಂಡ ಹಾಕಿ, ಅವರಿಗೆ ನೋಟಿಸ್ ನೀಡಲು ಅಧಿಕಾರಿಗಳಿಗೆ ಸೂಚಿಸಿದರು…

ಕೋಟೆ ಕೆರೆಯಲ್ಲಿ “ನಮ್ಮ ದೇಶ ನಮ್ಮ ಮಣ್ಣು” ಎಂಬ ಘನ ಸರ್ಕಾರದ ಯೋಜನೆಯ ಆದೇಶದಂತೆ 75 ಔಷಧೀಯ ಸಸಿ ನೆಡುವ ಜಾಗ ಪರಿಶೀಲನೆ ನಡೆಸಿ, ಅದಕ್ಕೆ ಸಂಬಂಧಿಸಿದಂತೆ ಕಾರ್ಯಪ್ರವರ್ತರಾಗಲು ಅಧಿಕಾರಿಗಳಿಗೆ ಸೂಚನೆ ನೀಡಿದರು..

ವರದಿ ಪ್ರಕಾಶ ಕುರಗುಂದ..