ಬೆಳ್ಳಂಬೆಳಿಗ್ಗೆ ನಗರ ಸಂಚರಿಸಿ, ಸಿಬ್ಬಂದಿಗಳಿಗೆ ಕರ್ತವ್ಯ ಪ್ರಜ್ಞೆಯ ಅರಿವು ಮೂಡಿಸಿದ ಆಯುಕ್ತರು..!!!

ಬೆಳ್ಳಂಬೆಳಿಗ್ಗೆ ನಗರ ಸಂಚರಿಸಿ, ಸಿಬ್ಬಂದಿಗಳಿಗೆ ಕರ್ತವ್ಯ ಪ್ರಜ್ಞೆಯ ಅರಿವು ಮೂಡಿಸಿದ ಆಯುಕ್ತರು..

ಪಾಲಿಕೆಯಿಂದ ಆಗಬೇಕಾದ ಕಾರ್ಯಗಳ ಪರಿಶೀಲನೆ ಮತ್ತು ಸೂಚನೆ..

ಸಾರ್ವಜನಿಕರ ಮೆಚ್ಚುಗೆಗೆ
ಪಾತ್ರವಾದ, ಪಾಲಿಕೆ ಆಯುಕ್ತರ ನಡೆ..

ಬೆಳಗಾವಿ : ಸೋಮವಾರ ದಿನಾಂಕ 07/08/2023 ರಂದು ಮುಂಜಾನೆ 5-30 ಗಂಟೆಗೆ ಪಾಲಿಕೆಯ ಆಯುಕ್ತರಾದ ಅಶೋಕ್ ದುಡಗುಂಟಿ ಅವರು ಸದಾಶಿವ ನಗರದಲ್ಲಿನ ವಾಹನ ಶಾಖೆಗೆ ಸೈಕಲ್ಲಿನಲ್ಲಿ ತೆರಳಿ, ವಾಹನಗಳನ್ನು ಪರಿಶೀಲಿಸಿ, ವಾಹನ ಚಾಲಕರ ಹಾಜರಾತಿ ಪರಿಶೀಲನೆ ಮಾಡಿ, ಬಯೋಮೆಟ್ರಿಕ ಅಳವಡಿಸುವಂತೆ ಹಾಗೂ ಎಲ್ಲ ವಾಹನ ಚಾಲಕರಿಗೆ ಮತ್ತು ಕ್ಲೀನರ್ಸ ಇವರು ಬೆಳಿಗ್ಗೆ 5-30 ಕರ್ತವ್ಯಕ್ಕೆ ಹಾಜರಾಗಿ ಸರಿಯಾಗಿ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದರು..

ಸ್ವತ: ಪಾಲಿಕೆಯ ಕಸದ ವಾಹನದಲ್ಲಿ ಕುಳಿತುಕೊಂಡು, ಡಿಸಿಸಿ ಬ್ಯಾಂಕ್ ಹತ್ತಿರ ಕಸ ವಿಲೇವಾರಿ ಮಾಡುವಂತೆ ಸಂಬಂಧಿಸಿದ ನೈರ್ಮಲ್ಯ ನಿರೀಕ್ಷಕರಿಗೆ ನಿರ್ದೇಶನ ನೀಡಿ, ನಂತರ ವಾರ್ಡ ನಂಬರ 43 ರವರೆಗೆ ಸಂಚರಿಸಿ ಶ್ರೀಮತಿ ವಾಣಿ ವಿಲಾಸ ಜೋಶಿ ವಾರ್ಡ ನಂ 43 ರ ನಗರ ಸೇವಕರು ಹಾಗು ಅಧ್ಯಕ್ಷರು, ನಗರ ಯೋಜನೆ ಮತ್ತು ನಗರ ಅಭಿವೃಧ್ದಿ ಸ್ಥಾಯಿ ಸಮಿತಿ ಇವರೊಂದಿಗೆ ಅನಗೋಳ ಸ್ಮಶಾನದ ಸ್ಥಳ ಪರಿಶೀಲಿಸಿ ಅಲ್ಲಿ ಸ್ವಚ್ಜತೆ ಕಾಪಾಡುವಂತೆ ಹಾಗೂ ಗೀಡಗಳನ್ನು ನೆಡುವಂತೆ/ವಿದ್ಯುತ ದೀಪಗಳನ್ನು ಸರಿಪಡಿಸುವಂತೆ ಹಾಗು ಅಭಿವೃದ್ದಿಪಡಿಸುವಂತೆ ಸೂಚನೆಯನ್ನು ನೀಡಲಾಯಿತು.

ಅನಂತರ ವಾರ್ಡ ನಂ.43 ರ ವಾರ್ಡ ಸಂಚರಿಸಿ ಕಸ ವಿಲೇವಾರಿ ಕುರಿತು ಪರಿಶೀಲಿಸಿ, ಕಸ ವಿಲೇವಾರಿ ಸಮರ್ಪಕವಾಗಿ ನಿರ್ವಹಿಸುವಂತೆ ನೈರ್ಮಲ್ಯ ನಿರೀಕ್ಷಕರಿಗೆ ನಿರ್ದೇಶನ ನೀಡಿದರು ಮತ್ತು ಸಾರ್ವಜನಿಕರೊಂದಿಗೆ ಅವರ ಸಮಸ್ಯೆ ಬಗ್ಗೆ ಚರ್ಚಿಸಿ ಸೂಕ್ತ ಕ್ರಮ ವಹಿಸುವಂತೆ ನಿರ್ದೇಶನ ನೀಡಿದರು‌..

ಅತೀಕ್ರಮಣ ಮಾಡಿ ಕಟ್ಟಡ ಕಟ್ಟುತ್ತಿರುವ ಕಟ್ಟಡದ ಪರಿಶೀಲನೆ ಮಾಡಿ ಸಂಬಂಧಿತರಿಗೆ ವಿವರ ಸಲ್ಲಿಸುವಂತೆ ಸೂಚಿಸಿದರು, ಅಲ್ಲಿಂದ ಭಾಗ್ಯನಗರ 1&2 ನೇ ಕ್ರಾಸಗೆ ತೆರಳಿ, ಅಲ್ಲಿನ ಕಸ ವಿಲೇವಾರಿ/ನಾಲಾಗಳ ಸ್ವಚ್ಚತಾ/ಪಾಲಿಕೆಯ ಖುಲ್ಲಾ ಜಾಗೆಗಳ ಪರಿಶೀಲನೆ ಸಂಬಂಧಿಸಿದವರಿಗೆ ಕ್ರಮ ವಹಿಸುವಂತೆ ನಿರ್ದೇಶನ ನೀಡಿದರು.

ವರದಿ ಪ್ರಕಾಶ ಕುರಗುಂದ….