ಬೆಳ್ಳಂಬೆಳಿಗ್ಗೆ ನಗರ ಸ್ವಚ್ಛತಾ ಕಾರ್ಯದ ಪರಿಶೀಲನೆಯಲ್ಲಿ ಮಹಾಪೌರ ಹಾಗೂ ಉಪಮಹಾಪೌರರು..

ಬೆಳ್ಳಂಬೆಳಿಗ್ಗೆ ನಗರ ಸ್ವಚ್ಛತಾ ಕಾರ್ಯದ ಪರಿಶೀಲನೆಯಲ್ಲಿ ಮಹಾಪೌರ ಹಾಗೂ ಉಪಮಹಾಪೌರರು..

ಪಾಲಿಕೆ ಸ್ವಚ್ಛತಾ ಸಿಬ್ಬಂದಿಗಳೊಂದಿಗೆ ಚರ್ಚೆ ಹಾಗೂ ಸಲಹೆ ಸೂಚನೆ..

ಬೆಳಗಾವಿ : ಪ್ರತಿ ವಾರ್ಡಗಳನ್ನು ಸ್ವಚ್ಛವಾಗಿ ಇಡುವಲ್ಲಿ ಪಾಲಿಕೆಯ ಎಲ್ಲಾ ಸ್ವಚ್ಛತಾ ಸಿಬ್ಬಂದಿಗಳು ಶ್ರದ್ದೆಯಿಂದ ಕಾರ್ಯ ನಿರ್ವಹಿಸಬೇಕು, ಸ್ವಚ್ಛತೆಯ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಪಾಲಿಕೆಯ ನಿಯಮಗಳನ್ನು ಮನವರಿಕೆ ಮಾಡಿ ಕೊಡಬೇಕು, ಜೊತೆಗೆ ತಮ್ಮ ಕೆಲಸದಲ್ಲಿ ತಮಗಿರುವ ಸಮಸ್ಯೆಗಳನ್ನು ಮುಕ್ತವಾಗಿ ಹೇಳಿಕೊಳ್ಳಬೇಕು ಎಂದು ಬೆಳಗಾವಿ ಪಾಲಿಕೆಯ ಮಹಾಪೌರ ಮಂಗೇಶ ಪವಾರ ಅವರು ಸೂಚನೆ ನೀಡಿದ್ದಾರೆ.

ಶುಕ್ರವಾರ ಬೆಳಿಗ್ಗೆನೇ ನಗರದ ವಿವಿಡೆದೆ ಸಂಚಾರ ನಡೆಸಿದ ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ ಮಾಂಗೇಶ ಪವಾರ ಹಾಗೂ ಉಪ ಮೇಯರ ವಾಣಿ ಜೋಶಿ ಅವರು ಪಾಲಿಕೆಯ ಸಿಬ್ಬಂದಿಗಳು ನಿರ್ವಹಿಸುವ ನಗರ ಸ್ವಚ್ಛತಾ ಕಾರ್ಯವನ್ನು ಪರಿಶೀಲನೆ ನಡೆಸಿದ್ದರು, ಈ ವೇಳೆ ಸ್ವಚ್ಛತಾ ಸಿಬ್ಬಂದಿಗಳೊಂದಿಗೆ ಸಹಜ ಚರ್ಚೆ ಮಾಡುತ್ತಾ ನಗರ ಸ್ವಚ್ಛತೆಯ ನಿಟ್ಟಿನಲ್ಲಿ ಅನೇಕ ಸಲಹೆ ಸೂಚನೆಗಳನ್ನು ನೀಡಿದ್ದಾರೆ..

ನಗರದ ಪ್ರಮುಖ ಸ್ಥಳಗಳಾದ ತಿಳಕವಾಡಿ ಹಾಗೂ ಅನಗೋಳದ ವಿವಿಧ ವಾರ್ಡುಗಳಿಗೆ ಬೇಟಿ ನೀಡಿ, ಅಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳ ಜೋತೆ ಮಾತನಾಡುತ್ತಾ, ಪ್ರತಿ ವಾರ್ಡಿನ ಪ್ರತಿ ಗಲ್ಲಿಯಲ್ಲಿಯೂ ಕಸ ಸಂಗ್ರಾಹಕ ವಾಹನ ಸಮಯಕ್ಕೆ ಸರಿಯಾಗಿ ತೆರಳಬೇಕು, ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆಯುವದನ್ನು ನಿಯಂತ್ರಿಸಬೇಕು, ಎಲ್ಲಾ ಪೌರ ಕಾರ್ಮಿಕರು ಹಾಜರಿರುವಂತೆ ನೋಡಿಕೊಳ್ಳಬೇಕು, ಪೌರ ಕಾರ್ಮಿಕರಿಗೆ ಸಮಯಕ್ಕೆ ಸರಿಯಾಗಿ ಉಪಹಾರ ನೀಡಬೇಕು ಎಂಬ ಸಲಹೆ ನೀಡಿದ್ದಾರೆ.

ಈ ವೇಳೆ ಪಾಲಿಕೆಯ ಆರೋಗ್ಯ
ಹಾಗೂ ಸ್ವಚ್ಛತಾ ವಿಭಾಗದ ಸಿಬ್ಬಂದಿಗಳಾದ ಪ್ರವೀಣ್ ಕಿಲಾರೆ (ಅಭಿಯಂತರರು), ರವಿ ಪುರೆಕರ, ಮೋಹಿತೆ, ಗಣಾಚಾರಿ ಹಾಗೂ ಪೌರ ಕಾರ್ಮಿಕರು ಉಪಸ್ಥಿತರಿದ್ದರು..

ವರದಿ ಪ್ರಕಾಶ್ ಬಿ ಕುರಗುಂದ..

Leave a Reply

Your email address will not be published. Required fields are marked *