ಬ್ರಹತ್ ಮೊತ್ತದ ಮಾದಕ ವಸ್ತುಗಳ ನಾಶಪಡಿಸಿದ ಅಬಕಾರಿ ಇಲಾಖೆ..
ಗಾಂಜಾ, ಚರಸ, ಅಫೀಮುಗಳಂತ ಮಾದಕ ವಸ್ತುಗಳನ್ನು ನಾಶಪಡಿಸಿದ ಅಬಕಾರಿ ಸಿಬ್ಬಂದಿ.
ಬೆಳಗಾವಿ : ಸೋಮವಾರ ದಿನಾಂಕ 03-03-2025 ರಂದು ಎಫ್ ಎಚ್ ಚಲವಾದಿ ಅಬಕಾರಿ ಜಂಟಿ ಆಯುಕ್ತರು, ಬೆಳಗಾವಿ ವಿಭಾಗ ಬೆಳಗಾವಿ ರವರ ನೇತೃತ್ವದಲ್ಲಿ ಹಾಗೂ ಡ್ರಗ್ ಡಿಸ್ಪೋಸಲ್ ಕಮಿಟಿಯ ಸದಸ್ಯರಾದ ವಿಜಯಪುರ ಜಿಲ್ಲೆಯ ಅಬಕಾರಿ ಉಪ ಆಯುಕ್ತರಾದ ಮುರಳೀಧರ, ಚಿಕ್ಕೋಡಿ ಜಿಲ್ಲೆಯ ಅಬಕಾರಿ ಉಪ ಆಯುಕ್ತರಾದ ಸ್ವಪ್ನ, ಬಾಗಲಕೋಟೆ ಜಿಲ್ಲೆಯ ಅಬಕಾರಿ ಉಪ ಆಯುಕ್ತರಾದ ಹಣಮಂತಪ್ಪ ಭಜಂತ್ರಿ ಅವರುಗಳ ಸಮಕ್ಷಮದಲ್ಲಿ ಅಕ್ರಮ ಮಾದಕ ದೃವ್ಯಗಳನ್ನು ನಾಶಪಡಿಸಲಾಗಿದೆ.

ಬೆಳಗಾವಿ ವಿಭಾಗ ವ್ಯಾಪ್ತಿಯಲ್ಲಿ ಬರುವ ಬೆಳಗಾವಿ ಉತ್ತರ ಜಿಲ್ಲೆ, ಚಿಕ್ಕೋಡಿಯ 421.168 ಕೆ ಜಿ ಗಾಂಜಾ ಹಾಗೂ 1.915 ಕೆ ಜಿ ಚರಸ್, ಬಾಗಲಕೋಟೆ ಜಿಲ್ಲೆಯ 78 ಕೆ ಜಿ ಗಾಂಜಾ ಹಾಗೂ ವಿಜಯಪುರ ಜಿಲ್ಲೆಯ 90.44 ಕೆ ಜಿ ಅಫೀಮ್ , 106.732 ಕೆ ಜಿ ಗಾಂಜಾ, 4 ಫೋಪಿ ಸೀಡ್ಸ್ ಅನ್ನು ಬೆಳಗಾವಿ ತಾಲ್ಲೂಕಿನ ನಾವಗೆ ಗ್ರಾಮದಲ್ಲಿರುವ ಎಸ್ ವಿ ಪಿ ಕೆಮಿಕಲ್ಸ್ ಘಟಕದಲ್ಲಿ ಪರಿಸರಕ್ಕೆ ಹಾಗೂ ಪ್ರಾಣಿಗಳಿಗೆ ಯಾವುದೇ ಹಾನಿಯಾಗದ ರೀತಿಯಲ್ಲಿ ನಾಶಪಡಿಸಲಾಗಿದೆ ಎಂಬ ಮಾಹಿತಿಯನ್ನು ಇಲಾಖೆಯ ಮೂಲಗಳಿಂದ ಖಚಿತಪಡಿಸಲಾಗಿದೆ.

ವರದಿ ಪ್ರಕಾಶ ಬಸಪ್ಪ ಕುರಗುಂದ.