ಭಗವಾನ್ ಶ್ರೀ ಬಿರ್ಸಾ ಮುಂಡಾರವರ 150ನೇ ಜಯಂತಿ 2025..

ಭಗವಾನ್ ಶ್ರೀ ಬಿರ್ಸಾ ಮುಂಡಾರವರ 150ನೇ ಜಯಂತಿ 2025..

ಭಾರತೀಯ ಮೂಲ ಸಂಸ್ಕೃತಿಯ ರಕ್ಷಣೆಗೆ ಬ್ರಿಟಿಷರ ವಿರುದ್ಧ ಕ್ರಾಂತಿ ಮಾಡಿದ 24ರ ಯುವಕ..

ವಿದ್ಯಾರ್ಥಿಗಳು ಬಿರ್ಸಾ ಮುಂಡಾರ ದೇಶಭಕ್ತಿಯ ವಿಚಾರಧಾರೆ ಮೈಗೂಡಿಸಿಕೊಳ್ಳಬೇಕು..

ರಾಮನಗೌಡ ಕನ್ನೊಳ್ಳಿ, ಜಂಟಿ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಬೆಳಗಾವಿ..

ಬೆಳಗಾವಿ : 24 ವರ್ಷದಲ್ಲೇ ಭಗವಾನ ಎಂದು ಕರೆಸಿಕೊಂಡಿರುವ, ದೈವತ್ವದ ಗುಣ ಹೊಂದಿರುವ ಭಗವಾನ ಶ್ರೀ ಬಿರ್ಸಾ ಮುಂಡಾ ಅವರ ದೇಶಭಕ್ತಿಯ, ತಮ್ಮ ಮೂಲ ಹಕ್ಕುಗಳಿಗಾಗಿ ಹೋರಾಟ ಮಾಡುವ ಹಾಗೂ ಕ್ರಾಂತಿಕಾರಕ ವಿಚಾರಗಳನ್ನು ಮೈಗೂಡಿಸಿಕೊಳ್ಳುವ ಆ ಮೂಲಕ ಸಮರ್ಥ ಸಮಾಜವನ್ನು ಕಟ್ಟುವ ನಿಟ್ಟಿನಲ್ಲಿ ಮಕ್ಕಳನ್ನು ಜಾಗೃತಗೊಳಿಸುವ ಕಾರ್ಯವನ್ನು ನಾವೆಲ್ಲ ಮಾಡಬೇಕಿದೆ ಎಂದು ಬೆಳಗಾವಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ರಾಮನಗೌಡ ಕೆನ್ನೊಳ್ಳಿ ಹೇಳಿದ್ದಾರೆ.

ಶನಿವಾರ ದಿನಾಂಕ 15/11/2025 ರಂದು ನಗರದ ಕುಮಾರ ಗಂಧರ್ವ ರಂಗ ಮಂದಿರದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯವರ ಆಯೋಜನೆ ಮಾಡಿದ ಭಗವಾನ ಶ್ರೀ ಬಿರ್ಸಾ ಮುಂಡಾರವರ 150ನೇ ಜಯಂತಿಯನ್ನು “ಜನ ಜಾತೀಯ ಗೌರವ ದಿವಸ ಆಚರಣೆ 2025” ರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿರ್ಸಾ ಮುಂಡಾ ಅವರ ಬಗ್ಗೆ ಇಂದಿನ ಮಕ್ಕಳು ತಿಳಿಯುವದು ತುಂಬಾ ಅವಶ್ಯಕತೆ ಇದೆ ಎಂದಿದ್ದಾರೆ..

ಅನೇಕ ಸ್ವತಂತ್ರ ಹೋರಾಟಗಾರರ ಬಗ್ಗೆ ನಾವು ಓದಿದ್ದೇವೆ ಅದರಲ್ಲಿ ಬಿರ್ಸಾ ಮುಂಡಾ ಅವರನ್ನು ಭಗವಾನ್ ಎಂದು ಕರೆದಿದ್ದಾರೆ, ಅತೀ ಕಿರಿಯ ವಯಸ್ಸಿನಲ್ಲಿ ಅತೀ ಹಿರಿಮೆಯ ಸಾಧನೆ ಮಾಡಿದ ಸಾಧಕರ ಮುಖ್ಯ ಪಟ್ಟಿಯಲ್ಲಿ ಇವರು ಇರುತ್ತಾರೆ, ಸ್ವತಂತ್ರ ಹೋರಾಟ ಮಾಡುತ್ತಾ, ರಾಂಚಿಯ ಸೆಂಟ್ರಲ್ ಜೈಲಿನಲ್ಲಿಯೇ 25 ವಯಸ್ಸಿಗಿಂತ ಕಡಿಮೆ ಇರುವಾಗಲೇ ದೇಶಕ್ಕಾಗಿ ತನ್ನ ಪ್ರಾಣ ಕಳೆದುಕೊಂಡವರು ಇವರು, 25 ವರ್ಷಕ್ಕೆ ಇಂದು ನಾವು ಮಾರ್ಕ್ಸ್ ಗಳಿಸಲಿಕ್ಕೆ ಕಷ್ಟ ಪಡುತ್ತಿದ್ದೇವೆ ಆದರೆ ಬಿರ್ಸಾ ಮುಂಡಾ ಅವರು ದೇಶದ ಸ್ವತಂತ್ರಕ್ಕಾಗಿ ಕಷ್ಟ ಪಟ್ಟಿದ್ದರು ಎಂದಿದ್ದಾರೆ.

ಬುಡಕಟ್ಟು ಜನಾಂಗದಿಂದ ಬಂದ ಒಬ್ಬ ಯುವಕ ಬ್ರಿಟಿಷ ಅಧಿಪತ್ಯದ ಬಗ್ಗೆ ಗೀಳು ಹಚ್ಚಿಕೊಂಡು ಒಂದು ಸ್ಲೋಗನ ರೆಡಿ ಮಾಡಿಕೊಂಡು, “ಬ್ರಿಟಿಷ್ ರಾಣಿಯ ಅಧಿಪತ್ಯವನ್ನು ಅಂತ್ಯಗೊಳಿಸಿ ನಮ್ಮ ಅಧಿಪತ್ಯ ಸಾಧಿಸಬೇಕು” ಎಂಬ ಘೋಷವಾಕ್ಯವನ್ನು ಮಾಡಿಕೊಂಡರು, ಭಾರತೀಯರ ಮೂಲ ಸಂಸ್ಕೃತಿಯನ್ನು ಮುಚ್ಚುವದು ಬ್ರಿಟಿಷರ ಉದ್ದೇಶವಾಗಿತ್ತು, ಅದೇ ರೀತಿ ಮುಂಡಾ ಸಂಸ್ಕೃತಿಯನ್ನು ಹತ್ತಿಕ್ಕುವ ಪ್ರಯತ್ನ ಮಾಡಿದಾಗ ಸಮುದಾಯದ ಈ ಯುವಕ ಬ್ರಿಟಿಷರ ವಿರುದ್ಧ ಸಿಡಿದೇಳುತ್ತಾನೆ, ಮುಂಡಾ ಅಥವಾ ಸ್ಥಳೀಯ ಸಂಸ್ಕೃತಿಯನ್ನು ಕಾಪಾಡಲು ಹೋರಾಟಕ್ಕೆ ಇಳಿಯುತ್ತಾನೆ.

ಲ್ಯಾಂಡ್ ರೈಟಗಾಗಿಯೂ ಕೂಡಾ ಬಿರ್ಸಾ ಮುಂಡಾ ಬ್ರಿಟಿಷರ ವಿರುದ್ಧ ನಿಲ್ಲುತ್ತಾರೆ, ಸಮಾಜದಲ್ಲಿ ಒಂದು ಸಮುದಾಯ, ಒಂದು ಕುಟುಂಬ ಅಸ್ತಿತ್ವ ಪಡೆಯುವಲ್ಲಿ ಜಮೀನು ಬೇಕು, ಅಂತಹ ಮಹತ್ವದ ವಿಚಾರವನ್ನು 24 ವಯಸ್ಸಿನ ಯುವಕನಲ್ಲಿ ಬಂದಿದ್ದಕ್ಕೆ ಇವರನ್ನು ಇಡೀ ಸಮುದಾಯ “ಫಾದರ್ ಆಫ್ ಅರ್ಥ” ಎಂದು ಕರೆದರು, ಇದೇ ವಯಸ್ಸಕ್ಕೆ ಅವರನ್ನು ಭಗವಾನ್ ಎಂದು ಕೂಡಾ ಕರೆದಿದ್ದಾರೆ, ಅದಕ್ಕೆ ಕಾರಣ ಅವರಲ್ಲಿದ್ದ ದೈವತ್ವದ ಗುಣ, ಇಂದು ನಾವು, ನಮ್ಮ ನಾಯಕರು, ಯುವಕರು, ವಿದ್ಯಾರ್ಥಿಗಳು ಇಂತಹ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದಿದ್ದಾರೆ.

ಇವರಿಂದ ಆ ಸಮಯದಲ್ಲಿ ಮುಂಡಾ ಕ್ರಾಂತಿಯೇ ಉಂಟಾಗಿತ್ತು, ನಮ್ಮ ಶಿಕ್ಷಕರು ಮಕ್ಕಳಿಗೆ ಇಂತಹ ಕ್ರಾಂತಿಕಾರಿ ವಿಚಾರಗಳನ್ನು ತಿಳಿಸಬೇಕು, ಕೇವಲ ಮಾರ್ಕ್ಸ್ ತಗೊಂಡು, ಪಾಸ್ ಆಗಿ, ಹಣ ಸಂಪಾದನೆ ಮಾಡಿದರೆ ಸಾಲದು, ಕ್ರಾಂತಿಕಾರರ ರೋಚಕವಾದ, ಅರ್ಥಪೂರ್ಣವಾದ ವಿಚಾರಗಳು ಮಕ್ಕಳಿಗೆ ತಲುಪುವಂತೆ ಮಾಡಬೇಕು, ಅದಕ್ಕಾಗಿಯೇ ಇಂತಹ ಜಯಂತಿಗಳನ್ನು ಆಚರಣೆ ಮಾಡುತ್ತೇವೆ, ಮಕ್ಕಳಿಗೆ ಇಂತಹ ಮಹಾಪುರುಷರ ವಿಚಾರ ತಿಳಿಸುವ ಗಟ್ಟಿಗೊಳಿಸುವ ಕಾರ್ಯ ನಾವು ಮಾಡಬೇಕಾಗಿದೆ ಎಂದರು..

ಇನ್ನು ಸ್ವಾಗತ ಕೋರಿ ಪ್ರಸ್ತಾವಿಕವಾಗಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಬಸವರಾಜ ಕುರಿಹುಲಿ ಅವರು ಮಾತನಾಡಿ, ಬ್ರಿಟಿಷರ ದುರಾಡಳಿತ, ಕೆಟ್ಟ ಕೃತ್ಯಗಳು ಮತಾಂತರ, ಜಮೀನದಾರಿ ಪದ್ಧತಿ ವಿರುದ್ಧ ಹೋರಾಟ ಮಾಡಿ, ತಮ್ಮ 25 ನೇ ವಯಸ್ಸಿನಲ್ಲಿ ಮರಣ ಹೊಂದಿದ ಬಿರ್ಸಾ ಮುಂಡಾ ಅವರ ಕೊಡುಗೆಯನ್ನು ನಾವು ಯಾರು ಮರೆಯಬಾರದು, ಇವರು ಬುಡಕಟ್ಟು ಪಂಗಡದ ನಾಯಕರಾಗಿದ್ದು, 2021 ರಲ್ಲಿ ಭಾರತ ಸರ್ಕಾರವು ಬಿರ್ಸಾ ಮುಂಡಾ ಅವರ ಜನ್ಮ ದಿನಾಚರಣೆಯನ್ನು ಸಂಸತ್ತಿನಲ್ಲಿ ಆಚರಣೆ ಮಾಡಲು ತೀರ್ಮಾನಿಸಿ, ಈ ಜನ್ಮ ದಿನಾಚರಣೆಯನ್ನು “ಜನ ಜಾತೀಯ ಗೌರವ ದಿವಸ” ಎಂದು ಆಚರಣೆ ಮಾಡಬೇಕೆಂದು ಕರೆಕೊಟ್ಟದ್ದು, ಇಂದಿಗೆ ಐದು ವರ್ಷಗಳಾಗಿದ್ದು ದೇಶದೇಲ್ಲೆಡೆ ಆಚರಣೆ ಮಾಡುತ್ತಾರೆ ಎಂದರು..

ಇನ್ನು ವಾಲ್ಮೀಕಿ ಸಮಾಜದ ಮುಖಂಡರಾದ ಬಾವುಕಣ್ಣ ಬಂಗ್ಯಾಗೋಳ ಮಾತನಾಡಿ, ಬಿರ್ಸಾ ಮುಂಡಾ ಅವರ ಜಯಂತಿಯನ್ನು 2021 ರಿಂದ ಆಚರಣೆ ಮಾಡುತ್ತಿರುವದು ಸಂತಸದ ಸಂಗತಿ, ಕಳೆದ ವರ್ಷವೂ ನಾವೂ ಇಲಾಖೆಯ ಜೊತೆಯಾಗಿ ಅದ್ದೂರಿಯಾಗಿ ಜಯಂತಿ ಆಚರಣೆ ಮಾಡಿದ್ದೆವು, ನಾವು ವಾಲ್ಮೀಕಿ ಸಮುದಾಯದವರು ಹಿಂದೆ ಕಟ್ಟಿಗೆ ಕಡೆದು ಮಾರುವ ಕಸುಬು ಮಾಡಿಕೊಂಡು ಬಂದಿದ್ದು, ಕಾಲ ಕಳೆದಂತೆ ವಿವಿಧ ವೃತ್ತಿಯಲ್ಲಿ ಬೆಳೆದಿದ್ದೇವೆ, ಇನ್ನೂ ನಮ್ಮ ಸಮುದಾಯ ಶೈಕ್ಷಣಿಕಯ ಔದ್ಯೋಗಿಕ ಆರ್ಥಿಕ ರಾಜಕೀಯ ಸಂಸ್ಕೃತಿಕ ರಂಗಗಳಲ್ಲಿ ಪ್ರಗತಿ ಕಾಣಬೇಕಿದೆ ಎಂದಿದ್ದಾರೆ.

ಸಮಾಜದ ಮತ್ತೊಬ್ಬ ಪ್ರಮುಖರಾದ ಯಲ್ಲಪ್ಪ ಕೊಳೆಕರ ಮಾತನಾಡಿ, ಬಿರ್ಸಾ ಮುಂಡಾ ಅವರ ಸಾಧನೆ ಬಗ್ಗೆ ಇನ್ನೂ ಹೆಚ್ಚು ಜಾಗೃತಿ ಆಗಬೇಕು, ಹೋಬಳಿ ಮಟ್ಟದಲ್ಲಿ ಜಯಂತಿ ನಡೆಯಬೇಕು, ನಾಳಿನ ಪ್ರಜೆಗಳಗುವ ಮಕ್ಕಳು ಇವರ ಬಗ್ಗೆ ತಿಳಿಯಬೇಕು, ಆದರ್ಶನಿಯವಾದ, ಚಾರಿತ್ರ್ಯವಂತರ ಮಹಾಪುರುಷರ ಜಯಂತಿಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆಚರಣೆ ಮಾಡುವದು ಸಂತಸದ ವಿಷಯ, ಮಹನೀಯರ ವಿಚಾರಗಳು ಸಮಾಜಕ್ಕೆ ಸಂದೇಶ ನೀಡುವ ಕಾರಣಕ್ಕೆ ಇಂತಹ ಜಯಂತಿಗಳು ಅವಶ್ಯಕವಾಗಿವೆ ಎಂದಿದ್ದಾರೆ.

ಜಯಂತಿಯ ಈ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಬೆಳಗಾವಿಯ ಜಂಟಿ ನಿರ್ದೇಶಕರಾದ ರಾಮನಗೌಡ ಕನ್ನೊಳ್ಳಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳಾದ ಬಸವರಾಜ ಕುರಿಹುಲಿ, ತಾಲೂಕಾಧಿಕಾರಿ ಕೃಷ್ಣಾ ಹಕಾಡೆ, ಕಚೇರಿ ವ್ಯವಸ್ಥಾಪಕ ಮಳಗಲಿ, ಸಹಾಯಕ ನಿರ್ದೇಶಕ ಕುಲಕರ್ಣಿ, ಸಿಬ್ಬಂದಿಗಳಾದ ಮಹೇಶ ನಾವಿ, ನಿಂಗನಗೌಡ ಪಾಟೀಲ್, ರವಿ, ಕೋಲಕಾರ, ಸಮುದಾಯದ ಪ್ರಮುಖರಾದ ಬಾವುಕಣ್ಣ ಬಂಗ್ಯಾಗೋಳ, ಯಲ್ಲಪ್ಪ ಕೊಳೆಕರ, ವಿಜಯ ತಳವಾರ, ಮುರಾರ್ಜಿ ಶಾಲಾ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು..

ವರದಿ ಪ್ರಕಾಶ ಬಸಪ್ಪ ಕುರಗುಂದ.