ಮಕ್ಕಳಲ್ಲಿಯ ವಿಶೇಷವಾದ ಪ್ರತಿಭೆಗಳ ಕಡೆಗೆ ಪೋಷಕರು ಶಿಕ್ಷಕರು ಗಮನ ನೀಡಬೇಕು..
ವೈವಿದ್ಯಮಯವಾದ ಜಗತ್ತಿಗೆ ಮಕ್ಕಳನ್ನು ಸಿದ್ದಗೊಳಿಸುವ ಕಾರ್ಯವನ್ನು ಶಾಲೆಗಳು ಮಾಡಬೇಕು..
ನಾಗತಿಹಳ್ಳಿ ಚಂದ್ರಶೇಖರ್, ಸಾಹಿತಿ ಹಾಗೂ ಚಿತ್ರ ನಿರ್ದೇಶಕರು..
ಬೆಳಗಾವಿ : ಈ ಜೀವ ಜಗತ್ತು ಹಲವಾರು ವೈವಿಧ್ಯಗಳಿಂದ ತುಂಬಿದೆ, ಇದರಲ್ಲಿ ಕಲೆ, ಕ್ರೀಡೆ, ಕೃಷಿ, ವಿಜ್ಞಾನ ತಂತ್ರಜ್ಞಾನ, ರಂಜನೆ, ಪರಿಸರ, ಶಿಕ್ಷಣ, ಇತಿಹಾಸ, ಸಂಸ್ಕೃತಿಯಂತಹ ವೈವಿಧ್ಯಮಯ ಅಂಶಗಳಿಂದ ನಮ್ಮ ಸಮಾಜ ತುಂಬಿದೆ, ಇಂತಹ ವೈವಿಧ್ಯಮಯವಾದ ಜಗತ್ತಿಗೆ ಮಕ್ಕಳನ್ನು ತೆರೆದುಕೊಳ್ಳುವದಕ್ಕೆ ಶಾಲೆಗಳು ಕೆಲಸ ಮಾಡಬೇಕು ಎಂದು ಸಾಹಿತಿ ಹಾಗೂ ಕನ್ನಡ ಚಿತ್ರಗಳ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ..
ಶುಕ್ರವಾರ ದಿನಾಂಕ 26/12/2025ರಂದು ನಗರದ ಬಿ ಕೆ ಮಾಡೆಲ್ ಶಾಲೆಯ ಎಂಟು ದಿನಗಳ ಶತಮಾನೋತ್ಸವದ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅಥಿತಿಗಳಾಗಿ ಭಾಗಿಯಾಗಿ ಮಾತನಾಡಿದ ಅವರು, ಎಲ್ಲರು ತಮ್ಮ ಮಕಳನ್ನು ಕೇವಲ ಡಾಕ್ಟರ್ ಹಾಗೂ ಇಂಜಿನಿಯರ್ ಆಗಲಿ ಎಂಬ ಆಸೆಯಿಂದ ಓದಿಸುತ್ತಾರೆ, ಶಿಕ್ಷಕರು ಕೂಡಾ ಅದೇ ಹಾದಿಯಲ್ಲಿ ಮಕ್ಕಳನ್ನು ಕಾಣುತ್ತಾರೆ, ಆದರೆ ಸಮಾಜಕ್ಕೆ ಕೇವಲ ಡಾಕ್ಟರ್ ಹಾಗೂ ಇಂಜಿನೀಯರ್ ಅಷ್ಟೇ ಬೇಕಾಗಿಲ್ಲ, ಉಳಿದ ಹಲವಾರು ಕ್ಷೇತ್ರಗಳಿವೆ, ಮಕ್ಕಳ ಒಳಗಿರುವ ಹಲವಾರು ವಿಶೇಷವಾದ ಪ್ರತಿಭೆಗಳನ್ನು ಹೊರತರುವಲ್ಲಿ ಪೋಷಕರು ಹಾಗೂ ಶಿಕ್ಷಕರು ಗಮನ ಹರಿಸಬೇಕು ಎಂದರು..

ಮಾಧ್ಯಮಿಕ ಶಿಕ್ಷಣ ಎನ್ನುವದು ವಿದ್ಯಾರ್ಥಿ ಜೀವನದ ಸಂಕ್ರಮಣದ ಕಾಲ, ಇದಾದ ನಂತರ ಅವರು ಬದುಕಿನ ಬಹಳ ಮುಖ್ಯವಾದ ನಿರ್ಣಯಗಳನ್ನು ತಗೆದುಕೊಳುತ್ತಾರೆ, ಅದು ನನ್ನ ಜೀವನದಲ್ಲಿಯೂ ಅದೇ ಆಗಿದೆ, ನಾನು ಎಂಟನೇ ತರಗತಿ ಇದ್ದಾಗಲೇ ನನ್ನ ಒಂದು ಲೇಖನ ಪತ್ರಿಕೆಯಲ್ಲಿ ಪ್ರಕಟವಾಗಿ ನನಗೆ ಹಾಗೂ ನಾ ಓದುವ ಶಾಲೆಗೆ ತುಂಬಾ ಹೆಸರು ತಂದಿತ್ತು, ಅಷ್ಟು ಹೆಸರು ಬರುತ್ತೆ ಎಂದು ನನಗೆ ನಂಬಿಕೆ ಇರಲಿಲ್ಲ, ಆಗಲೇ ನನಗೆ ಸಾಹಿತ್ಯದಲ್ಲಿ ಏನಾದರೂ ಮಾಡಬೇಕು ಎಂದು ಹಠ, ಸ್ಫೂರ್ತಿ ಮನಸ್ಸಿನಲ್ಲಿ ಮೂಡಿತು..
ಆದರೆ ನನ್ನ ತಂದೆ ನನ್ನ ಬುದ್ದಿವಂತ ಅಂತಾ ತಪ್ಪಾಗಿ ಭಾವಿಸಿ ಪಿಯುಸಿಯಲ್ಲಿ ಸೈನ್ಸ್ ಮತ್ತು ಮಾಥ್ಸಗೆ ಹಾಕಿದರು, ನನಗೆ ಆಗೋಲ್ಲ ಎಂದರೂ ಕೇಳಲಿಲ್ಲ, ಅದರಲ್ಲೂ ಇಂಗ್ಲಿಷ್ ಮೀಡಿಯಂ ಬೇರೆ, ಅದು ಕಬ್ಬಿಣದ ಕಡಲೆ ಅದರಲ್ಲಿ ಡುಮಕಿ ಹೊಡದೆ, 35 ಅಂಕಗಳನ್ನು ನಾನು ತಗೆಯಲು ಆಗಲಿಲ್ಲ, ಆಗ ನಾನು ಅನುಭವಿಸಿದ ಸಂಕಟ ಅನೇಕ ಮಕ್ಕಳ ಸಂಕಟ ಆಗಿದೆ, ಅನೇಕ ಮಕ್ಕಳಲ್ಲಿ ಆ ಚಿಂತೆ ಇರುತ್ತದೆ, ನಾವು ಒತ್ತಾಯ ಪೂರ್ವಕವಾಗಿ ಮಕ್ಕಳನ್ನು ದೂಡುತ್ತೇವೆ, ಹೂವಿನ ಕುಂಡಗಳಲ್ಲಿ ಇಟ್ಟು ಮಕ್ಕಳನ್ನು ಬೆಳೆಸಬಾರದು, ಅವರು ಸಹಜ ಗಿಡಮರಗಳಾಗಿ ಬೆಳೆದರೆ ಸಾರ್ಥಕ ಜೀವನ ಅವರದ್ದಾಗುತ್ತದೆ ಎಂದರು..

ನಂತರ ನಾನು ಭಾಷಾ ವಿಷಯ, ಇತಿಹಾಸ, ಸಮಾಜ ವಿಜ್ಞಾನ ತಗೆದುಕೊಂಡು ಓದಿ, ಕೆಲಸಮಾಡಿದೆ ಯಶಸ್ವಿಯಾದೆ, ಇದು ನನ್ನ ಕೆಲಸ ಎಂದು ಆಗ ಗೊತ್ತಾಯಿತು, ಎಂಟನೇ ತರಗತಿಗೆ ಒಂದು ಲೇಖನಕ್ಕೆ ಪ್ರಶಸ್ತಿ ಬಹುಮಾನ ಪಡೆದ ನಾನು ಎಲ್ಲರಿಂದ ಹೊಗಳಿಕೆ ಪಡೆದಿದ್ದೆ, ಅದು ನನ್ನ ಮುಂದಿನ ಜೀವನಕ್ಕೆ ಸ್ಫೂರ್ತಿಯಾಗಿತ್ತು ಎಂದ ಅವರು ಒಂದು ಶಿಕ್ಷಣ ಸಂಸ್ಥೆ ನೂರು ವರ್ಷ ಸಂಭ್ರಮ ಆಚರಿಸುತ್ತಿದ್ದಿದ್ದು ತುಂಬಾ ಸಂತಸ, ಇಲ್ಲಿ ನನ್ನಂತ ಎಷ್ಟೋ ವಿದ್ಯಾರ್ಥಿಗಳು ಆಗಿ ಹೋಗಿದ್ದಾರೆ, ಆ ಹೆಮ್ಮೆ ಈ ಸಂಸ್ಥೆಗಿದೆ, ಇಂದು ಸಾಮಾಜಿಕ ಮಾಧ್ಯಮ ನಮ್ಮನ್ನು ತುಂಬಾ ಆವರಿಸಿದೆ, ಆದರೆ ನಾವು ಮಕ್ಕಳಿಗೆ ಪುಸ್ತಕದ ಗೀಳು ಹಚ್ಚಬೇಕಾಗಿದೆ, ಪುಸ್ತಕಗಳು ಮಕ್ಕಳನ್ನು ಚಿಂತನಾಶೀಲಾರನ್ನಾಗಿ ಮಾಡುತ್ತದೆ, ಇದು ಮನೆಯಿಂದ ಆಗಬೇಕು, ಮಕ್ಕಳು ಹೊರ ಜಗತ್ತಿನ ಜೊತೆ ಬೇರೆಯಬೇಕು ಎಂದರು.
ಈ ಶತಮಾನೋತ್ಸವ ಸಮಾರೋಪ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಅವಿನಾಶ್ ಪೋತದಾರ, ಸಂಸ್ಥೆಯ ಪಧಾಧಿಕಾರಿಗಳು ಹಾಗೂ ಸದಸ್ಯರು, ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿ, ಸಂಸ್ಥೆಯ ಭೋಧಕ ಭೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು..
ವರದಿ ಪ್ರಕಾಶ ಬಿ ಕುರಗುಂದ..