ಮಕ್ಕಳ ಶಿಕ್ಷಣಕ್ಕಾಗಿ ಮಾಡುವ ಕಾರ್ಯಕ್ರಮದ ಮಹತ್ವ ಬಹಳ ದೊಡ್ಡದ್ದು..

ಮಕ್ಕಳ ಶಿಕ್ಷಣಕ್ಕಾಗಿ ಇರುವ ಕಾರ್ಯಕ್ರಮದ ಮಹತ್ವ ಬಹಳ ದೊಡ್ಡದ್ದು..

ಮಕ್ಕಳಿಗೆ ಶಾಲಾ ಸಾಮಾಗ್ರಿ ವಿತರಣಾ ಕಾರ್ಯ ಎಲ್ಲರೂ ಮೆಚ್ಚುವಂತದ್ದು..

ಎಂ ಬಿ ಜಿರಲಿ, ಬಿಜೆಪಿಯ ಮುಖಂಡರು..

ಬೆಳಗಾವಿ : ನಗರದ ವಾರ್ಡ ಸಂಖ್ಯೆ 4ರ ನಗರ ಸೇವಕರಾದ ಜಯತೀರ್ಥ ಸವದತ್ತಿ ಅವರು ಮಕ್ಕಳ ಶಿಕ್ಷಣಕ್ಕೆ ಸಹಕಾರಿಯಾಗಲು ಶಾಲಾ ಸಾಮಗ್ರಿಗಳನ್ನು ವಿತರಿಸುವ ಈ ಕಾರ್ಯಕ್ರಮ ಅತೀ ಮಹತ್ವದ್ದಾಗಿದ್ದು, ಮಕ್ಕಳು ತಮ್ಮ ಜೀವನಪೂರ್ತಿ ನೆನಪಿಟ್ಟುಕೊಳ್ಳುವ ಕಾರ್ಯಕ್ರಮ ಇದಾಗಿದೆ ಎಂದು ಬಿಜೆಪಿ ಮುಖಂಡರಾದ ನ್ಯಾಯವಾದಿ ಎಂ ಬಿ ಜಿರಲಿ ಅವರು ಹೇಳಿದ್ದಾರೆ.

ಸೋಮವಾರ ದಿನಾಂಕ 07/07/2025 ರಂದು ನಗರದ ಕೋಣವಾಳ ಗಲ್ಲಿಯಲ್ಲಿ ನಡೆದ ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಗಣ್ಯರು ಮಕ್ಕಳಿಗೆ ಉಪದೇಶದ ಮಾತುಗಳನ್ನು ಹೇಳಿದ್ದಾರೆ, ಸುಮಾರು 70 ವಿದ್ಯಾರ್ಥಿಗಳು ಹಾಗೂ ಅವರ ಪಾಲಕರು ಭಾಗವಹಿಸಿ ಈ ಕಾರ್ಯಕ್ರಮದ ಲಾಭವನ್ನು ಪಡೆದುಕೊಂಡಿದ್ದಾರೆ.

ಈ ಕಾರ್ಯಕ್ರಮದಲ್ಲಿ ಮೇಲಿನ ಅತಿಥಿ ಗಣ್ಯರು ಭಾಗವಹಿಸಿ ಕಾರ್ಯಕ್ರಮಕ್ಕೆ ಶೋಭೆಯನ್ನು ತಂದು ಕೊಟ್ಟರು. ಈ ವೇಳೆ ಬಿಜೆಪಿ ಪ್ರಮುಖರಾದ ಎಂ ಬಿ ಜಿರ್ಲಿ ಅವರು ಮಾತನಾಡಿ ಮಕ್ಕಳಿಗೆ ವಿದ್ಯೆಯ ಜೊತೆಗೆ ಮನೆಯಲ್ಲಿಯೂ ಸಂಸ್ಕಾರವಂತರಾಗಬೇಕೆಂದು ಹಾಗೂ ತಮ್ಮ ಮನೆಯಲ್ಲಿಯ ಆಚರಣೆಗಳನ್ನು ರೂಢಿಸಿಕೊಳ್ಳಬೇಕೆಂದು ಹಾಗೂ ಕೈ ಬಳೆ ಕುಂಕುಮವನ್ನು ಇಟ್ಟುಕೊಂಡು ಶಾಲೆಗೆ ತೆರಳಬೇಕೆಂದು ಸೂಚಿಸಿದರು. ಮಾಜಿ ಶಾಸಕ ಅನಿಲ್ ಬೆನಕೆ ಅವರು ಹಾಗೂ ರಮೇಶ ದೇಶಪಾಂಡೆ ಅವರು ಕೂಡ ಮಕ್ಕಳಿಗೆ ಮಾರ್ಗದರ್ಶನವನ್ನು ನೀಡಿದರು. ಮುಖ್ಯ ಅತಿಥಿಗಳು ಬಂದಂತಹ ಎಲ್ಲ ವಿದ್ಯಾರ್ಥಿಗಳಿಗೆ ಪುಸ್ತಕ, ನೋಟ್ ಬುಕ್ಸ್, ಕಂಪಾ ಸೆಟ್, ಟಿಫಿನ್ ಬ್ಯಾಗ್, ಬಾಟಲ್ ಇತ್ಯಾದಿ ವಸ್ತುಗಳನ್ನು ವಿತರಿಸಿದರು. ಮೊದಲಿಗೆ ನಗರಸೇವಕರಾದ ಜಯತೀರ್ಥ ಸವದತ್ತಿ ಇವರು ಅತಿಥಿಗಳ ಸ್ವಾಗತ ಮಾಡಿ ಅವರ ಪರಿಚಯವನ್ನು ಮಾಡಿಸಿ ಶಾಲ್ ಹೊದಿಸಿ ಜೊತೆಗೆ ಹೋಗುಚ್ಚ ನೀಡಿ ಕಾರ್ಯಕರ್ತರು ಸತ್ಕರಿಸಿದರು.

ಈ ಕಾರ್ಯಕ್ರಮಕ್ಕೆ ಕೆಳಗೆ ಸೂಚಿಸಿದ ದಾನಿಗಳು ಕೂಡ ತಮ್ಮ ಸಹಾಯ ಹಸ್ತವನ್ನು ನೀಡಿದ್ದಾರೆ.
ಭಾಗ್ಯಾ ಅಂಬೇಕರ, ಸಂತೋಷ ವಾದ್ವ, ನಾಗೇಶ್ ನಾಯಕ್, ಭರತ, ಸುನಿಲ್ ಕಠಾರಿಯಾದ ಮೋಹನ್ ಭಟ್ ಹಾಗೂ ಆಶಿಶ.
ಈ ಕಾರ್ಯಕ್ರಮದಲ್ಲಿ ಯಶಸ್ಸಿಗೆ ಕುಮಾರಿ ಶಿಲ್ಪಾ ಕೆಕರೆ ಹಾಗೂ ಸಂಜಯ ಪಾಟೀಲ್ ಇವರು ಸಹಕರಿಸಿದರು…

Leave a Reply

Your email address will not be published. Required fields are marked *