ಮತದಾರ ಪಟ್ಟಿ ಮ್ಯಾಪಿಂಗ್ ಹಾಗೂ ನೋಂದಣಿ ಸಿಬ್ಬಂದಿಗೆ ಜಿಲ್ಲಾಧಿಕಾರಿಗಳಿಂದ ಖಡಕ್ ಸೂಚನೆ..

ಮತದಾರ ಪಟ್ಟಿ ಮ್ಯಾಪಿಂಗ್ ಹಾಗೂ ನೋಂದಣಿ ಸಿಬ್ಬಂದಿಗೆ ಜಿಲ್ಲಾಧಿಕಾರಿಗಳಿಂದ ಖಡಕ್ ಸೂಚನೆ..

ಕಥೆ ಹೇಳದೆ, ಸ್ಥಳಕ್ಕೆ ಹೋಗಿ ಪರಿಶೀಲಿಸಿ ಫಲಿತಾಂಶ ನೀಡಿ..

ಸಭೆಯಲ್ಲಿ ಬಿಎಲ್ಓ ಗಳ ಕೆಲ ಸಮಸ್ಯೆಗಳಿಗೂ ಪರಿಹಾರ ನೀಡಿದ ಡಿಸಿ..

ಬೆಳಗಾವಿ : ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಮತದಾರರ ಪಟ್ಟಿಯ ಮ್ಯಾಪಿಂಗ್ ಹಾಗೂ ಹೊಸ ನೋಂದಣಿ ಕಾರ್ಯ ಆರಂಭವಾಗಿದ್ದು, ಅದರಲ್ಲಿ ಬೆಳಗಾವಿ ನಗರದ ಪ್ರಗತಿ ಸ್ವಲ್ಪ ನಿಧಾನ ಆಗಿದ್ದು, ಆದರಿಂದ ಜಿಲ್ಲಾಧಿಕಾರಿಗಳು ಮೇಲಿಂದ ಮೇಲೆ ಸಭೆಯನ್ನು ಕರೆದು, ಮತದಾರರ ಮ್ಯಾಪಿಂಗ್ ಹಾಗೂ ನೋಂದಣಿ ಕಾರ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿಗಳಿಗೆ ಸಲಹೆ ಸೂಚನೆ ನೀಡುತ್ತಿದ್ದು, ಇನ್ನೆರಡು ದಿನಗಳಲ್ಲಿ ಶೇಕಡಾ 50ಕ್ಕಿಂತ ಹೆಚ್ಚಿನ ಫಲಿತಾಂಶವನ್ನು ನೀಡುವತ್ತ ಎಲ್ಲಾ ಸಿಬ್ಬಂದಿಗಳು ಕಾರ್ಯ ನಿರ್ವಹಿಸಬೇಕು ಎಂಬ ಸೂಚನೆ ನೀಡಿದ್ದಾರೆ.

ಶನಿವಾರ ದಿನಾಂಕ 21/02/2026ರಂದು ಜಿಲ್ಲಾಧಿಕಾರಿ ಕಚೇರಿಯ ಸಭಾಭವನದಲ್ಲಿ, ಮರದಾರರ ಪಟ್ಟಿಯ ಮ್ಯಾಪಿಂಗ್ ಹಾಗೂ ಹೊಸ ಸೇರ್ಪಡೆಯ ಕಾರ್ಯಕ್ಕೆ ನಿಯೋಜನೆಗೊಂಡ ಮತದಾರ ನೊಂದನಾಧಿಕಾರಿಗಳು, ಚುನಾವಣಾ ವಿಭಾಗದ ಸಿಬ್ಬಂದಿಗಳು, ಮೇಲ್ವಿಚಾರಕರು ಹಾಗೂ ಶೇಕಡಾ 50 ಕ್ಕಿಂತ ಕಡಿಮೆ ಪ್ರಗತಿ ಹೊಂದಿದ ಪ್ರದೇಶಗಳ ಬಿಎಲ್ಓ ಗಳ ಜೊತೆಗೆ ಸಭೆ ನಡೆಸಿದ ಜಿಲ್ಲಾಧಿಕಾರಿಗಳು, ಈ ವರೆಗೆ ಆಗಿರುವ ಪ್ರಗತಿ, ಅಲ್ಲಿಯ ಸಮಸ್ಯೆಗಳು ಹಾಗೂ ಅದರ ಪರಿಹಾರೊಪಾಯಗಳನ್ನು ಸಭೆಯಲ್ಲಿ ವಿಸ್ತರವಾಗಿ ಚರ್ಚೆ ಮಾಡಿದ್ದಾರೆ.

ನಗರದಲ್ಲಿ ಕಡಿಮೆ ಪ್ರಗತಿ ಸಾಧಿಸಿದ ಕ್ಯಾಂಪ್ (ಮಿಲಿಟರಿ) ಪ್ರದೇಶ ಹಾಗೂ ಕೆಎಲ್ಇ ವಸತಿ ಪ್ರದೇಶಗಳ ಬಿಎಲ್ಓಗಳನ್ನು ಕರೆಸಿ, ಅವರಿಂದ ಅಲ್ಲಿನ ಮಾಹಿತಿ ಪಡೆದುಕೊಂಡು, ಅಲ್ಲಿನ ಸಮಸ್ಯೆಗಳನ್ನು ಆಲಿಸಿದ್ದಾರೆ, ಮೇಲಿನ ಪ್ರದೇಶಗಳಲ್ಲಿ ಬಹುತೇಕ ಹೊರರಾಜ್ಯದವರು ಇದ್ದಿದ್ದು, ಅವರ ಶಿಕ್ಷಣ ಹಾಗೂ ತರಬೇತಿಯ ಕಲಾವದಿ ಮುಗಿದ ನಂತರ ಅವರು ತಮ್ಮ ರಾಜ್ಯಕ್ಕೆ ಹೋಗಿರಬಹುದು, ಈ ಎರಡು ಸ್ಥಳಗಳಲ್ಲಿ ನಮಗೆ ಯಾರು ಸರಿಯಾಗಿ ಸ್ಪಂದನೆ ನೀಡುತ್ತಿಲ್ಲ, ಇಲ್ಲಿ ಕೆಲಸ ಕಠಿಣವಾಗಿದೆ ಎಂದಾಗ,

ಸಭೆಯಲ್ಲಿ ಭಾಗಿಯಾದ ಬೆಳಗಾವಿ ದುಂಡು ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರಿಗೆ, ಜಿಲ್ಲಾಧಿಕಾರಿಗಳು ಈ ಸಮಸ್ಯೆ ತಿಳಿಸಿ, ಕ್ಯಾಂಪ್ ಪ್ರದೇಶದಲ್ಲಿ ತಮ್ಮ ಚುನಾವಣಾ ಸಿಬ್ಬಂದಿಗಳಿಗೆ ಸುಗಮವಾಗಿ ಕಾರ್ಯ ಮಾಡಲು ಸಹಕಾರ ತೋರಬೇಕು ಎಂದಾಗ ಅದರ ವ್ಯವಸ್ಥೆಯನ್ನು ಮಾಡುತ್ತೇವೆ ಎಂದು ದುಂಡುಮಂಡಳಿಯ ಸಿಇಓ ಭರವಸೆ ನೀಡಿದರು, ಇನ್ನು ಕೆಎಲ್ಇ ವಸತಿ ಪ್ರದೇಶದಲ್ಲಿ ತಾವು ಖುದ್ದಾಗಿ ಹೋಗಿ ಪರಿಶೀಲನೆ ಮಾಡಿ, ಹೊರಗೆ ನಿಂತು ಹೇಳುವದಲ್ಲ, ಮೇಲ್ವಿಚಾರಕರನ್ನು ಜೊತೆಯಲ್ಲೇ ಕರೆದುಕೊಂಡು ಹೋಗಿ, ಒಂದು ವೇಳೆ ಶಿಫ್ಟ್ ಆಗಿದ್ದರೆ ಶಿಫ್ಟ್ ಅಂತಾ ನಮೂದು ಮಾಡಿ, ಆದರೆ ಮೊದಲು ತಾವು ಅಲ್ಲಿ ಹೋಗಿ ಪರೀಕ್ಷಿಸಿ, ಇನ್ನು 48 ಗಂಟೆಗಳಲ್ಲಿ ಶೇಕಡಾ 50ರಷ್ಟು ನೋಂದಣಿ ಕಾರ್ಯ ಆಗಬೇಕು ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ದುಂಡು ಮಂಡಳಿಯ ಸಿಇಓ, ನಗರ ಪೊಲೀಸ್ ಉಪಆಯುಕ್ತರು, ಅಪರ ಜಿಲ್ಲಾಧಿಕಾರಿಗಳು, ಬೆಳಗಾವಿ ಉತ್ತರ ಹಾಗೂ ದಕ್ಷಿಣ ಮತದಾರ ನೊಂದನಾಧಿಕಾರಿಗಳು, ಮೇಲ್ವಿಚಾರಕರು, ಬಿಎಲ್ಓಗಳು ಹಾಗೂ ಚುನಾವಣಾ ವಿಭಾಗದ ಸಿಬ್ಬಂದಿಗಳು ಹಾಜರಿದ್ದರು.

ವರದಿ ಪ್ರಕಾಶ್ ಬಿ ಕೆ..

Leave a Reply

Your email address will not be published. Required fields are marked *