ಮರಾಠಿ ಭಾಷೆಯಲ್ಲೇ ಸಭೆಯ ಕಾರ್ಯಸೂಚಿ ಬೇಕೆಂದ ನಗರ ಸೇವಕರ ವಿರುದ್ಧ ಕರವೇ ಆಕ್ರೋಶ..
ಸರ್ಕಾರ ಶಿಸ್ತು ಕ್ರಮ ತಗೆದುಕೊಂಡು ಅವರ ಸದಸ್ಯತ್ವ ರದ್ದು ಮಾಡಬೇಕು..
ದೀಪಕ ಗುಡುಗೆನಟ್ಟಿ, ಜಿಲ್ಲಾಧ್ಯಕ್ಷರು ಕರವೇ ಬೆಳಗಾವಿ..
ಬೆಳಗಾವಿ : ಗುರುವಾರ ಜರುಗಿದ ಬೆಳಗಾವಿ ಪಾಲಿಕೆ ಪರಿಷತ್ ಸಭೆಯಲ್ಲಿ ಎಂಇಎಸ್ ಸದಸ್ಯರ ಮರಾಠಿ ಭಾಷೆಯಲ್ಲಿ ಸಭೆಯ ಕಾರ್ಯಸೂಚಿ ಬೇಕೆಂದು ಪುಂಡಾಟ ಮಾಡಿರುವುದನ್ನು ಖಂಡಿಸಿ ಕರವೇ ಕಾರ್ಯಕರ್ತರು ಪಾಲಿಕೆಗೆ ಮುತ್ತಿಗೆ ಹಾಕಿ ಎಂಇಎಸ್ ಸದಸ್ಯರನ್ನು ವಜಾ ಮಾಡಬೇಕೆಂದು ಆಗ್ರಹಿಸಿದರು.
ಎಂಇಎಸ್ ಪುಂಡ ಪಾಲಿಕೆ ಸದಸ್ಯರ ವಿರುದ್ಧ ಧಿಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪಾಲಿಕೆ ಪರಿಷತ್ ಸಭಾಂಗಣಕ್ಕೆ ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ನೇತೃತ್ವದಲ್ಲಿ ಮುತ್ತಿಗೆ ಯತ್ನಿಸಿದರು. ಈ ವೇಳೆ ಪೊಲೀಸರು ಕರವೇ ಕಾರ್ಯಕರ್ತರನ್ನ ತಡೆದರು.
ಎಂಇಎಸ್ ಸದಸ್ಯ ರವಿ ಸಾಲುಂಕೆ ಅವರನ್ನು ಅಮಾನತು ಮಾಡಲು ಕರವೇ ಒತ್ತಾಯಿಸಿದರು.
ಎಂಇಎಸ್ ಸದಸ್ಯರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿ ನಾಡದ್ರೋಹಿ ಎಂಇಎಸ್ ಪುಂಡರ ಮೇಲೆ ಶಿಸ್ತು ಕ್ರಮ ಜರುಗಿಸಿ, ಅವರನ್ನು ಗಡಿ ಪಾರು ಮಾಡಲು ಒತ್ತಾಯಿಸಿದರು.
ಮಹಾನಗರ ಪಾಲಿಕೆ ಕಚೇರಿ ಮುಂಭಾಗದಲ್ಲಿ ಧರಣಿ ಕುಳಿತ ಕರವೇ ಕಾರ್ಯಕರ್ತರನ್ನ ಕೊನೆಗೂ ಪಾಲಿಕೆಯ ಕಚೇರಿಯಿಂದ ಹೊರ ಕರೆದುಕೊಂಡು ಹೋಗುವಲ್ಲಿ ಪೊಲೀಸರು ಯಶಸ್ವಿಯಾದರು.