ಮರಾಠಿ ಹಾಡಿಗೆ ಸಖತ್ ಸ್ಟೆಪ್ ಹಾಕಿದ ಪಾಲಿಕೆ ಆಯುಕ್ತರು..
ಗಣೇಶ್ ವಿಸರ್ಜನೆ ವೇಳೆ ಸಿಬ್ಬಂದಿಗಳ ಜೊತೆ ಮಸ್ತ ಡಾನ್ಸ್..
ಬೆಳಗಾವಿ : ಶನಿವಾರ ಶುರುವಾದ ಬೆಳಗಾವಿ ನಗರದ ಸಾರ್ವಜನಿಕ ಮಂಡಳಿಗಳ ಗಣೇಶ್ ವಿಸರ್ಜನೆಯ ಪ್ರಕ್ರಿಯೆಯು ರವಿವಾರ ತಡ ರಾತ್ರಿಯ ವರೆಗೂ ಮುಂದುವರೆದಿತ್ತು, ವಾಡಿಕೆಯಂತೆ ಮಹಾನಗರ ಪಾಲಿಕೆಯ ಗಣಪತಿಯೇ ಕೊನೆಯಲ್ಲಿ ವಿಸರ್ಜನೆ ಆಗುತ್ತಿದ್ದು ಈ ವೇಳೆ ಪಾಲಿಕೆ ಸಿಬ್ಬಂದಿಗಳ ಜೊತೆ ಪಾಲಿಕೆ ಆಯುಕ್ತೆ ಶುಭ ಬಿ ಅವರು “ಸೈರಾಟ್” ಎಂಬ ಮರಾಠಿ ಚಿತ್ರದ ಹಾಡಿಗೆ ಸಖತ್ ಸ್ಟೆಪ್ ಹಾಕಿದ್ದಾರೆ..
ಈ ಗಣೇಶ್ ವಿಸರ್ಜನೆ ವೇಳೆಯಲ್ಲಿ ಪಾಲಿಕೆ ಸಿಬ್ಬಂದಿಗಳು ಹಗಲು ರಾತ್ರಿಯೆನ್ನದೇ ಕರ್ತವ್ಯ ಮಾಡಿದ್ದು, ಯಶಸ್ವಿಯಾಗಿ ವಿಸರ್ಜನೆ ಕಾರ್ಯ ಮಾಡಿದ ಸಂತೋಷಕ್ಕಾಗಿ ಹಾಗೂ ಪಾಲಿಕೆಯ ಗಣಪತಿ ಕಳಿಸುವ ಖುಷಿಯಲ್ಲಿ ಆಯುಕ್ತರು ಸಿಬ್ಬಂದಿಗಳ ಜೊತೆ ನೃತ್ಯ ಮಾಡಿರಬಹುದು.
ಕನ್ನಡದ ಖರ್ಚಿನ ಕಾರ್ಯದಲ್ಲಿ ಮರಾಠಿ ಗೀತೆಯೊಂದಿಗೆ ಕನ್ನಡ ಹಾಡಿಗೂ ಆಯುಕ್ತರು ನೃತ್ಯ ಮಾಡಿದ್ದರೆ ಇನ್ನೂ ಚೆನ್ನಾಗಿ ಕಾಣುತ್ತಿತ್ತು ಎಂಬ ಆಶಯ ಕೆಲ ಕನ್ನಡದ ಮನಸ್ಸುಗಳದ್ದಾಗಿದೆ, ಕರ್ನಾಟಕದಲ್ಲಿ ಕನ್ನಡವೇ ಪ್ರಧಾನ್ಯತೆ ಪಡೆದಿರುವಾಗ ಪಾಲಿಕೆ ಆಯುಕ್ತರು ಕನ್ನಡದ ಹಾಡನ್ನು ಹಾಕಿಸಿ, ತಮ್ಮ ಸಿಬ್ಬಂದಿಗಳೊಂದಿಗೆ ಖುಷಿಯಲ್ಲಿ ನೃತ್ಯ ಮಾಡಿದ್ದರೆ ಅವರೆಲ್ಲರ ವೃತ್ತಿಗೆ ಸಾರ್ಥಕತೆ ಇರುತ್ತಿತ್ತೇನೋ ಎಂಬುದು ಕನ್ನಡಿಗರ ಭಾವನೆಯಾಗಿದೆ.
ವರದಿ ಪ್ರಕಾಶ ಬಸಪ್ಪ ಕುರಗುಂದ..