ಮಹತ್ವದ ಸ್ಥಾನಗಳಿಗೆ ಅನರ್ಹರ, ಅಸಮರ್ಥರ ನಿಯೋಜನೆ ಯಾಕೆ ??

ಸಚಿವರ ಕನಸಿಗೆ, ಪಾಲಿಕೆಯ ಅಧಿಕಾರಿಗಳೇ ಅಡ್ಡಿಯಾದರೆ ??

ಗುಣಮಟ್ಟದ ಆಡಳಿತವನ್ನು ಗಾಳಿಗೆ ತುರುತ್ತಿರುವ ಅನುಮಾನ..

ಮಹತ್ವದ ಸ್ಥಾನಗಳಿಗೆ ಅನರ್ಹರ, ಅಸಮರ್ಥರ ನಿಯೋಜನೆ ಯಾಕೆ ??

ಬೆಳಗಾವಿ : ಮಹಾನಗರದ ಆಡಳಿತ ಶಕ್ತಿ ಕೇಂದ್ರವಾದ ಪಾಲಿಕೆಯಲ್ಲಿ ಉತ್ತಮ, ಜನಾನುಕೂಲ, ಪಾರದರ್ಶಕ ಹಾಗೂ ಶಿಸ್ತಿನ ಆಡಳಿತ ನಡೆಯಬೇಕು, ಆಮೂಲಕ ಸಾರ್ವಜನಿಕರಿಗೆ ಅನುಕೂಲ ಆಗಿ ಪಾಲಿಕೆಗೂ ಉತ್ತಮ ಹೆಸರು ಬರಬೇಕೆಂದು, ತಮ್ಮ ಸರ್ಕಾರ ಬಂದ ನಂತರ ಜಿಲ್ಲೆಯ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಆಡಳಿತದಲ್ಲಿ ಕೆಲ ಬದಲಾವಣೆ ತಂದಿದ್ದರು.

ಆದರೆ ಸಚಿವರು ಕಂಡ ಕನಸಿನ ತದ್ವಿರುದ್ದವಾಗಿ ಈಗಿನ ಅಧಿಕಾರಿಗಳು ತಮ್ಮ ಕಾರ್ಯ ಮಾಡುತ್ತಿದ್ದು, ಬೆಳಗಾವಿ ಪಾಲಿಕೆ ಅಶಿಸ್ತಿನ ಆಗರವಾಗಿದೆಯೇ ಎಂಬ ಅನುಮಾನ ಮೂಡುತ್ತಿದೆ, ಆಡಳಿತದ ನಿಬಂಧನೆಗಳು, ಇತಿಮಿತಿಗಳನ್ನು ಗಣನೆಗೆ ತೆಗೆದುಕೊಳ್ಳದೇ ಕೆಲ ಆದೇಶ ಮಾಡುತ್ತಿರುವುದನ್ನು ನೋಡಿದರೆ, ಇವರು ಜನರು ಸೇವೆ ಮಾಡಲು ಬಂದಿರುವರೂ ಅಥವಾ ಸರ್ವಾಧಿಕಾರಿ ಆಡಳಿತ ಮಾಡಲು ಬಂದಿರುವರೂ ಎಂಬ ಸಂಶಯ ಕಾಡುತ್ತದೆ..

ಒಬ್ಬ ದ್ವಿತೀಯ ದರ್ಜೆಯ ಸಹಾಯಕನನ್ನು (SDA) ಪ್ರಥಮ ದರ್ಜೆ ಕಂದಾಯ ನಿರೀಕ್ಷಕನನ್ನಾಗಿ ಮಾಡುವ ಅವಸರ, ಅಧಿಕಾರ ಇವರಿಗೆ ಹೇಗೆ ಬಂತು ಗೊತ್ತಿಲ್ಲ, ಯಾವ ಆಮಿಶವೂ, ಯಾರ ಪ್ರಭಾವವೋ ಗೊತ್ತಿಲ್ಲ ಇಂತಹ ಅಸಮರ್ಥರು ಮಹತ್ವದ ಸ್ಥಾನದಲ್ಲಿ ಕುಳಿತಾಗ ಸಾರ್ವಜನಿಕರ ಕೆಲಸ ಕಾರ್ಯಗಳಲ್ಲಿ ಕುಂಠಿತ ಆಗುವದಂತು ನಿಶ್ಚಿತವೆ..

ಪ್ರಸ್ತುತ ಕೊಣವಾಳ ಗಲ್ಲಿಯ ಕಚೇರಿಯಲ್ಲಿ (ಎಫಜಿಆರ್ ಐ) ಕಂದಾಯ ನಿರೀಕ್ಷಕ ಆಗಿದ್ದ ವ್ಯಕ್ತಿಯನ್ನು ತಗೆದು, ಆ ಹುದ್ದೆಗೆ ಮುಖ್ಯ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ (sda) ಸಿಬ್ಬಂದಿಯನ್ನು ವರ್ಗಾವಣೆ ಮಾಡಿದ್ದು, ಚರ್ಚೆಗೆ ಕಾರಣವಾಗಿದೆ.
ಹಿಂದೆ ಪಾಲಿಕೆಯ ಆಯುಕ್ತರಾದ ರುದ್ರೇಶ್ ಗಾಳಿ ಅವರು ಈ (sda) ವ್ಯಕ್ತಿಯ ಮೇಲೆ ಅಮಾನತ್ತಿನ ಆದೇಶ ಹೊರಡಿಸುವ ಹಂತಕ್ಕೆ ಹೋಗಿದ್ದು, ಸುಮಾರು 500 ಆಸ್ತಿಗಳ ಖಾತಾ ಬದಲಾವಣೆಯನ್ನು ನಿಗಧಿತ ಸಮಯದಲ್ಲಿ ಮಾಡದೇ ಇದ್ದುದ್ದರಿಂದ ಈ SDA ಮೇಲೆ ಕ್ರಮಕ್ಕೆ ಮುಂದಾಗಿದ್ದರು, ಕೆಲಸದ ಒತ್ತಡ ಹಾಗೂ ಮೇಲಿನಿಂದ ವಿಚಾರಣೆ ಬಂದಾಗಲೆಲ್ಲ ದೀರ್ಘಾವಧಿ ರಜೆಯ ಮೇಲೆ ಹೋಗುವ ಇಂತಹ ವ್ಯಕ್ತಿಯನ್ನು, ಮಹತ್ವದ ಕಂದಾಯ ನಿರೀಕ್ಷಕ ಹುದ್ದೆಯಲ್ಲಿ ಇಟ್ಟರೆ ಹೇಗೆ??

ಇನ್ನು ಅಶೋಕ್ ನಗರದ ಕಂದಾಯ ವಿಭಾಗದ ARO ಕೂಡಾ ಆ ವಿಭಾಗಕ್ಕೆ ಅನರ್ಹ ವ್ಯಕ್ತಿ ಆಗಿದ್ದು, ಅವರು ಆರೋಗ್ಯ, ಕಾರ್ಯದರ್ಶಿ ವಿಭಾಗದಲ್ಲಿ ಸೇವೆಯಲ್ಲಿದ್ದವರು, ಅವರ ಮೇಲೆಯೂ ಕೂಡಾ ಅನೇಕ ದೂರುಗಳಿರುವ ವಿಷಯಗಳು ಖಾಸಗಿ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗಿದ್ದರೂ ಕೂಡಾ ಅದರ ವಿಷಯವಾಗಿಯೂ ಯಾವುದೇ ಬೆಳವಣಿಗೆ ಆಗಿಲ್ಲ, ನಿಷ್ಟಾವಂತ, ಸಮರ್ಥ, ಸರ್ಕಾರದಿಂದ ಕಂದಾಯ ವಿಭಾಗಕ್ಕೆ ಆಯ್ಕೆಯಾದ ಹಲವಾರು, ಬಿಲ್ ಕಲೆಕ್ಟರ್, ಕಂದಾಯ ನಿರೀಕ್ಷಕರು ಇದ್ದಾರೆ, ಅವರಿಗೆ ಹೆಚ್ಚಿನ ಜವಾಬ್ದಾರಿ ನೀಡಿ, ಮುಂಬಡ್ತಿ ನೀಡಿದರೆ ಅವರೇ ಉತ್ತಮ ಕೆಲಸ ಮಾಡಿ ತಮಗೂ, ಪಾಲಿಕೆಗೆ ಉತ್ತಮ ಹೆಸರು ತರುವರು ಎಂಬ ನಿರೀಕ್ಷೆಯಿದೆ..

ಮಾನ್ಯ ಅಧಿಕಾರಿಗಳೇ ಇನ್ನಾದರೂ ಸೂಕ್ತ ವ್ಯಕ್ತಿಗಳನ್ನು ಸೂಕ್ತ ಸ್ಥಾನಕ್ಕೆ ನಿಯೋಜಿಸಿ, ಉತ್ತಮ ಆಡಳಿತ ಯಂತ್ರ ನಡೆಯಲು ಸಹಕಾರಿಯಾಗಿ, ಯಾಕಂದ್ರೆ ತಾವೂ ಕೂಡ ಸರ್ಕಾರದ ಸೇವೆಯಲ್ಲಿ ಇದ್ದೀರಿ, ನಾವು ಮನುಷ್ಯರು, ಋಣ ತೀರಿಸುವ ಕೆಲಸ ಮಾಡುವುದು ಮನುಷ್ಯ ಧರ್ಮ, ಬರೀ ಲೌಕಿಕ ಆಸೆಗೆ ಬಲಿಯಾಗಿ ಕರ್ತವ್ಯನಿಷ್ಠೆ ಮರೆತರೆ ಆ ದೇವರು ಮೆಚ್ಚುವನೆ??

ವರದಿ ಪ್ರಕಾಶ ಕುರಗುಂದ..