ಮಹಾನಗರ ಪಾಲಿಕೆಯಲ್ಲಿ ನಗರಸೇವಕರ ಗಂಡ, ಮಕ್ಕಳ ದರ್ಬಾರ..
ಅಶೋಕ್ ನಗರದ ಕಂದಾಯ ಸಿಬ್ಬಂದಿಗಳು ಏಜೆಂಟಗಳಾಗಿದ್ದಾರೆ..
ನಗರ ಸೇವಕ ರವಿ ದೋತ್ರೆ ಬೇಸರ..

ಬೆಳಗಾವಿ : ಕಳೆದ ಕೆಲ ದಿನದ ಹಿಂದೆ ನಡೆದ ಪಾಲಿಕೆಯ ತೆರಿಗೆ ಮತ್ತು ಹಣಕಾಸು ಸ್ಥಾಯಿ ಸಮಿತಿಯ ಸಾಮಾನ್ಯ ಸಭೆಯಲ್ಲಿ, ಕಂದಾಯ ವಿಭಾಗದ ಸಿಬ್ಬಂದಿಗಳು ಮಾಡುವ ಬೇಜವಾಬ್ದಾರಿ ಕಾರ್ಯಗಳಿಗೆ ನಗರ ಸೇವಕರು ತಮ್ಮ ಬೇಸರ ಹಾಗೂ ಅಸಮಾಧಾನವನ್ನು ವಿವಿಧ ರೀತಿಯಲ್ಲಿ ವ್ಯಕ್ತಪಡಿಸಿದ್ದರು.

ಪಾಲಿಕೆಯ ಆಸ್ತಿಗಳನ್ನು ಕಾಯ್ದು, ಆದಾಯ ಹೆಚ್ಚಿಸುವ ಕಂದಾಯ ಸಿಬ್ಬಂದಿಯವರ ಬೇಜವಾಬ್ದಾರಿ ವರ್ತನೆಗೆ ಬೇಸರಗೊಂಡು, ಪಾಲಿಕೆಯನ್ನು ಕೂಡಾ ಮಾರಿಬಿಡಿ ಎಂದು ನಗರ ಸೇವಕರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ..
ಮುಖ್ಯವಾಗಿ ಕಂದಾಯ ವಿಭಾಗದಲ್ಲಿ ನಗರಸೇವಕರ ಗಂಡ ಮತ್ತು ಮಕ್ಕಳ ಹಸ್ತಕ್ಷೇಪ ಅತಿಯಾಗಿದ್ದು, ಅಶೋಕ ನಗರದಲ್ಲಿರುವ ಕಚೇರಿಯಲ್ಲಿ ಕಂತೆಗಟ್ಟಲೇ ಫೈಲಗಳನ್ನು ತಂದು, ತಾವೇ ಅಧಿಕಾರಿಗಳಂತೆ ವರ್ತಿಸುತ್ತಾರೆ, ಬೇರೆಯವರ ಫೈಲಗಳನ್ನೂ ಕೂಡಾ ಚೆಕ್ ಮಾಡುವರು, ಬಿಲ್ಲ ಕಲೆಕ್ಟರ್ ಹಾಗೂ ಕಂದಾಯ ನಿರೀಕ್ಷಕರು ಇವರ ಮಧ್ಯವರ್ತಿಗಳಂತೆ ಕಾಣುತ್ತಾರೆ, ಆಡಳಿತದಲ್ಲಿ ನಗರ ಸೇವಕರ ಗಂಡಂದಿರ ಹಾಗೂ ಮಕ್ಕಳ ಹಸ್ತಕ್ಷೇಪ ಆತಿಯಾಗಿದ್ದು ಕಟ್ಟುನಿಟ್ಟಾಗಿ ಅಧಿಕಾರಿಗಳು ಇದನ್ನು ನಿಯಂತ್ರಿಸಬೇಕು ಎಂದು ನಗರ ಸೇವಕ ರವಿ ದೋತ್ರೆ ಅವರು ಕೇಳಿಕೊಂಡರು..

ಪಿವ್ನ್ ಕೈಯಲ್ಲಿ ಪೈಲ್ ಕೊಟ್ಟು ಸಹಿ ಮಾಡಿಸಲು ಇಲ್ಲಿ ಮುಖ್ಯ ಕಚೇರಿಗೆ ಕಳಿಸುವರು, ನೀನ್ಯಾಕೆ ತಂದೆ ಎಂದರೆ ಕಂದಾಯ ನಿರೀಕ್ಷಕರು ಕೊಟ್ಟಿದ್ದಾರೆ ಎನ್ನುವರು, ಇಂತ ಕೆಟ್ಟ ಪದ್ಧತಿ ನಿಲ್ಲಬೇಕು, ಅಧಿಕಾರಿಗಳು ಶಿಸ್ತಿನ ಕ್ರಮ ಜರುಗಿಸಬೇಕು ಎಂದು ರವಿ ದೊತ್ರೆ ಅವರು ತಮ್ಮ ಅಸಮಾಧಾನ ಹೊರಹಾಕಿದರು..
ವರದಿ ಪ್ರಕಾಶ ಕುರಗುಂದ..