ಮಹಾನಗರ ಪಾಲಿಕೆಯಲ್ಲಿ ವಯೋನಿವೃತ್ತಿಯ ಕಾರ್ಯಕ್ರಮ…

ಮಹಾನಗರ ಪಾಲಿಕೆಯಲ್ಲಿ ವಯೋನಿವೃತ್ತಿಯ ಕಾರ್ಯಕ್ರಮ..

ಪಾಲಿಕೆ ನಿವೃತ್ತ ಸಿಬ್ಬಂದಿಗೆ ಬುಧವಾರದ ಭಾವನಾತ್ಮಕ ಬೀಳ್ಕೊಡುಗೆ..

ಬೆಳಗಾವಿ: ಮಹಾನಗರ ಪಾಲಿಕೆಯಲ್ಲಿ ಸೇವೆ ಸಲ್ಲಿಸಿ ದಿನಾಂಕ್ 31/07/2024 ರಂದು ವಯೋನಿವೃತ್ತಿ ಹೊಂದುರುವ ಸಿಬ್ಬಂದಿಗಳಿಗೆ ಪಾಲಿಕೆಯ ನೌಕರರ ಸಂಘಗಳ ವತಿಯಿಂದ ಬೀಳ್ಕೊಡುಗೆ ಸಮಾರಂಭವನ್ನು ಅತೀ ಅಚ್ಚುಕಟ್ಟಾಗಿ ಜರುಗಿಸಲಾಗಿದೆ..

ಪಾಲಿಕೆಯ ಉಪ ಆಯುಕ್ತರಾದ ಉದಯಕುಮಾರ ತಳವಾರ (ಆಡಳಿತ) ಇವರ ಅಧ್ಯಕ್ಷತೆಯಲ್ಲಿ ಇಂದು ಬುಧವಾರ ಸಾಯಂಕಾಲ 4.00 ಗಂಟೆಗೆ ಪಾಲಿಕೆಯ ಕೌನ್ಸಿಲ್ ಸಭಾ ಗೃಹದಲ್ಲಿ ಬೀಳ್ಕೊಡುಗೆಯ ಭಾವನಾತ್ಮಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು..

ಪಾಲಿಕೆಯ ಸಿಬ್ಬಂದಿಗಳಾದ ಮಲ್ಲಿಕ ಜಾನ್ ಕಾದ್ರಿ, ಪ್ರಕಾಶ ಕೋಲಕಾರ, ರಾಜೇಂದ್ರ ದೊಡ್ಡಮನಿ, ಅಟೆಂಡರಗಳು, ಹಾಗೂ ಪರಶುರಾಮ ಚೌಹಾಣ್ ಸಾ, ಸು. ಈ ಸಿಬ್ಬಂದಿಗಳಿಗೆ ಇವತ್ತು ವಯೋನಿವೃತ್ತಿ ಆಗಿದ್ದು ಗೌರವದ ಬೀಳ್ಕೊಡುಗೆ ನೆರವೇರಿದೆ..

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ವಿವಿಧ ವಿಭಾಗಗಳ ಅಧಿಕಾರಿ ಹಾಗೂ ಸಿಬ್ಬಂದಿಗಳು ಹಾಜರಿದ್ದು ನಿವೃತ್ತರಾದವರ ನಿವೃತ್ತಿ ಜೀವನ ಸುಖಮಯವಾಗಿರಲೆಂದು ಹಾರೈಸಿ, ಸಮಾರಂಭವನ್ನು ಯಶಸ್ವಿಗೊಳಿಸಿದರು..

ವರದಿ ಪ್ರಕಾಶ್ ಬಸಪ್ಪ ಕುರಗುಂದ..