ಮಹಾನಗರ ಪಾಲಿಕೆಯಿಂದ ನನ್ನ ದೇಶ ನನ್ನ ಮಣ್ಣು ಅಭಿಯನಕ್ಕೆ ಚಾಲನೆ..

ಮಹಾನಗರ ಪಾಲಿಕೆಯಿಂದ ನನ್ನ ದೇಶ ನನ್ನ ಮಣ್ಣು ಅಭಿಯಾನಕ್ಕೆ ಚಾಲನೆ..

ಬೆಳಗಾವಿ : ಬುಧವಾರ ದಿನಾಂಕ 17/08/2023ರಂದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿರ್ದೇಶನದಂತೆ “ನನ್ನ ಮಣ್ಣು ನನ್ನ ದೇಶ” ಎಂಬ ದೇಶಾಭಿಮಾನದ ಅಭಿಯಾನದ ಅಡಿಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯ ವತಿಯಿಂದ ಕೋಟೆಕೆರೆ ಆವರಣದಲ್ಲಿ ಶಿಲಾಫಲಕ (ಸ್ಮಾರಕ) ಸಮರ್ಪಣೆ ಕಾರ್ಯಕ್ರಮವನ್ನು ಅತ್ಯಂತ ಅರ್ಥಪೂರ್ಣವಾಗಿ ನೆರವೇರಿಸಲಾಯಿತು..

ಪಾಲಿಕೆಯ ಮಹಾಪೌರರು, ಲೋಕಸಭಾ ಸದಸ್ಯರು, ಉಪಮಹಾಪೌರರು, ಆಯುಕ್ತರು, ಪಾಲಿಕೆಯ ನಗರ ಸೇವಕರುಗಳು, ಪಾಲಿಕೆಯ ಶಾಖಾ ಮುಖ್ಯಸ್ಥರುಗಳು ಹಾಗೂ ಸಿಬ್ಬಂದಿವರ್ಗದವರು, ಜಿಲ್ಲಾ ಮಟ್ಟದ ಅಧಿಕಾರಿಗಳು, ಪೌರಕಾರ್ಮಿಕರು, ಮಾಳಿಗಳು ಶಾಲಾ ಮಕ್ಕಳು, ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದವರು, ಬೀದಿ ಬದಿ ವ್ಯಾಪಾರಿಗಳ ಪ್ರತಿನಿಧಿಗಳು ಹಾಗೂ ಎಸ್.ಹೆಚ್.ಜಿ ಪ್ರತಿನಿಧಿಗಳು ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿದರು..

ತದನಂತರ ಬೆಳಗಾವಿ ಮಹಾನಗರ ಪಾಲಿಕೆಯ ವತಿಯಿಂದ ಕೋಟೆಕೆರೆ ಆವರಣದಲ್ಲಿ ನಿರ್ಮಿಸಿದ ಶಿಲಾಫಲಕದ (ಸ್ಮಾರಕ) ಹತ್ತಿರ ಸರ್ಕಾರದ ನಿರ್ದೇಶನದಂತೆ “ನನ್ನ ಮಣ್ಣು ನನ್ನ ದೇಶ” (ಮೇರಿ ಮಾಟಿ ಮೇರಿ ದೇಶ್) ಅಭಿಯಾನದ ಅಡಿಯಲ್ಲಿ ಅಮೃತ ವಾಟಿಕಾ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲಾಯಿತು.

ಪಾಲಿಕೆಯು, ಬೆಳಗಾವಿಯ ಅರಣ್ಯ ಇಲಾಖೆಯ ಸಹಯೋಗದೊಂದಿಗೆ 75 ಔಷಧಿಯ ಹಾಗೂ ಸ್ಥಳೀಯ ಸಸಿಗಳನ್ನು ಮಹಾಪೌರರು, ಮಾನ್ಯ ಲೋಕಸಭಾ ಸದಸ್ಯರು, ಉಪಮಹಾಪೌರರು, ಆಯುಕ್ತರು, ಪಾಲಿಕೆಯ ನಗರ ಸೇವಕರುಗಳು, ಪಾಲಿಕೆಯ ಶಾಖಾ ಮುಖ್ಯಸ್ಥರುಗಳು ಹಾಗೂ ಸಿಬ್ಬಂದಿವರ್ಗದವರು, ಜಿಲ್ಲಾ ಮಟ್ಟದ ಅಧಿಕಾರಿಗಳು, ಪೌರಕಾರ್ಮಿಕರು, ಮಾಳಿಗಳು ಶಾಲಾ ಮಕ್ಕಳುಗಳು, ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದವರು, ಬೀದಿ ವ್ಯಾಪಾರಿಗಳ ಪ್ರತಿನಿಧಿಗಳು ಹಾಗೂ ಎಸ್.ಹೆಚ್.ಜಿ ಪ್ರತಿನಿಧಿಗಳು ಸಸಿಗಳನ್ನು ನೆಡುವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿಯಾಗಿಸಿದರು..

ವರದಿ ಪ್ರಕಾಶ ಕುರಗುಂದ..