ಮಹಾನಗರ ಪಾಲಿಕೆಯಿಂದ ಸಾರ್ವಜನಿಕರ ಆಸ್ತಿ ದಾಖಲೆಯಲ್ಲಿ ಯಾವ ಬದಲಾವಣೆ ಆಗಿಲ್ಲ…
ಭೂಮಾಪನ ಇಲಾಖೆಯ ದಾಖಲೆ ಹಾಗೂ ಪಾಲಿಕೆಯ ನಿಬಂಧನೆಗಳಂತೆ ಆಸ್ತಿ ದಾಖಲೆ ನೀಡುತ್ತಿದ್ದೇವೆ..
ಸಾರ್ವಜನಿಕರು ಹಾಗೂ ಸರ್ಕಾರಕ್ಕೆ ಯೋಗ್ಯವೆನಿಸುವ ಕಾರ್ಯ ಸಿಬ್ಬಂದಿಯಿಂದ ನಡೆಯುತ್ತಿದೆ..
ಪಾಲಿಕೆ ಅಧಿಕಾರಿಗಳ ಸ್ಪಷ್ಟನೆ..
ಬೆಳಗಾವಿ : ಕಳೆದ ಕೆಲ ದಿನಗಳಿಂದ ನಗರದ ತಿಳಕವಾಡಿಯ (ಮೊದಲಿನ 7 ಮತ್ತು 15 ವಾರ್ಡ) ಕೆಲ ಪ್ರದೇಶಗಳ ಸಾರ್ವಜನಿಕರು ಮಹಾನಗರ ಪಾಲಿಕೆಯಿಂದ ತಮಗೆ ಅನ್ಯಾಯ ಆಗುತ್ತಿದೆ, ತಮ್ಮ ಆಸ್ತಿ ದಾಖಲೆಯ ಮಾಲಿಕತ್ವದ ಸ್ಥಳದಲ್ಲಿ ಪಾಲಿಕೆಯ ಹೆಸರು ನಮೂದಿಸಿ ಕೊಡುತ್ತಿದ್ದಾರೆ ಎಂಬ ತಮ್ಮ ಸಮಸ್ಯಯನ್ನು ಪಾಲಿಕೆ ಸಿಬ್ಬಂದಿಗಳ ಮುಂದೆ ಹೇಳಿಕೊಂಡು, ಕೊನೆಗೆ ಕೆಲ ಮಾದ್ಯಮದಲ್ಲಿಯೂ ಈ ವಿಷಯ ಪ್ರಕಟವಾಗಿತ್ತು..
ನಂತರ, ಈ ವಿಷಯದ ಸತ್ಯಾಸತ್ಯತೆ ತಿಳಿಯಬೇಕೆಂದು ಮಾಹಿತಿ ಸಂಗ್ರಹ ಮಾಡಿದಾಗ, ಪಾಲಿಕೆ ಸಿಬ್ಬಂದಿಯು ಸರ್ಕಾರದ ದಾಖಲೆಯ ನಿಯಮದಂತೆ ತಮ್ಮ ಕಾರ್ಯ ಮಾಡುತ್ತಿದ್ದು, ಯಾವುದೇ ಸಾರ್ವಜನಿಕರ ಆಸ್ತಿಯಲ್ಲಿ ಮಹಾನಗರ ಪಾಲಿಕೆಯ ಹೆಸರು ಸೇರಿಸುತ್ತಿಲ್ಲ ಎಂಬ ಸತ್ಯ ತಿಳಿದುಬಂದಿದೆ..

ಈ ವಿಷಯಕ್ಕೆ ಸಂಭಂದಿಸಿದಂತೆ ಪಾಲಿಕೆಯ ಆಯುಕ್ತರು, ಉಪ ಆಯುಕ್ತರು ಆಡಳಿತ, ಕಂದಾಯ ಆಯುಕ್ತರು ಮಾಹಿತಿ ನೀಡಿದ್ದು, ಮಹಾನಗರ ಪಾಲಿಕೆಯಿಂದ
ಅವಧಿಯ ನಿಗದಿ ಮಾಡದೇ, ಲೀಸ್ (ಉಪಯೋಗಕ್ಕೆ) ಅಂತಾ ಆಸ್ತಿಯನ್ನು ನೀಡಿದ್ದು, ಸಾರ್ವಜನಿಕರು ಅದನ್ನು ಹಿಂದಿನಿಂದಲೂ ಉಪಯೋಗಿಸಿಕೊಂಡು ಬರುತ್ತಿದ್ದುದು ಗೊತ್ತಿರುವ ವಿಚಾರವೆ..
ಈಗ ಇ ಆಸ್ತಿಗಳ ಪ್ರಕ್ರಿಯೆಯಲ್ಲಿ, ಆಸ್ತಿಗಳನ್ನು ತಾಂತ್ರಿಕವಾಗಿ ನಮೂದಿಸಿ ದಾಖಲಿಸಲಾಗುತ್ತಿದ್ದು, ಎಲ್ಲವನ್ನೂ ಪರಿಶೀಲನೆ ಮಾಡಿಯೇ ಸಿಬ್ಬಂದಿ ಕೆಲಸ ಮಾಡುತ್ತಿದೆ, ಸಾರ್ವಜನಿಕರ ಯಾವ ಆಸ್ಥಿಯಲ್ಲಿಯೂ ಪಾಲಿಕೆ ತನ್ನ ಹೆಸರು ಸೆರಿಸುತ್ತಿಲ್ಲ, ಸರ್ಕಾರಿ ದಾಖಲಾತಿಯಲ್ಲಿ ಪಾಲಿಕೆ ಅಂತಾ ಇದ್ದರೆ ಅದರಲ್ಲಿ ಪಾಲಿಕೆ ಅಂತಾ ನಮೂದು ಮಾಡುವುದು ಸಹಜವೇ ಎಂಬ ಸ್ಪಷ್ಟನೆ ನೀಡಿದ್ದಾರೆ..
ಇದಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ಭೂಮಾಪನ ಇಲಾಖೆಯ ಅಧಿಕಾರಿಗಳಾದ ಎಡಿಎಲ್ಆರ್ ಅವರು ಮಾಹಿತಿ ನೀಡಿದ್ದು, ತಿಲಕವಾಡಿ ಪ್ರದೇಶದ ಕೆಲ ಆಸ್ತಿಗಳಲ್ಲಿ ಮಹಾನಗರ ಪಾಲಿಕೆಯ ಮಾಲೀಕತ್ವವೇ ಇದ್ದಿದ್ದು, ಲೀಸ್ ಆಧಾರದಲ್ಲಿ ಆ ಆಸ್ತಿಗಳನ್ನು ಉಪಯೋಗಿಸಲು ನೀಡಲಾಗಿದೆ ಎಂಬ ಮಾಹಿತಿ ನೀಡಿದ್ದಾರೆ..

ಕಾರಣ ಪಾಲಿಕೆಯ ಸಿಬ್ಬಂದಿಗಳು ಸರ್ಕಾರದ ದಾಖಲೆಯ ಪ್ರಕಾರ ಹಾಗೂ ಮೇಲಾಧಿಕಾರಿಗಳ ಮಾರ್ಗದರ್ಶನದಂತೆ ಆಸ್ತಿ ದಾಖಲೆಗಳನ್ನು ನಮೂದು ಮಾಡುವ ತಮ್ಮ ಕಾರ್ಯವನ್ನು ಸಹಜವಾಗಿ ಹಾಗೂ ನಿರ್ಭಿತವಾಗಿ ಮಾಡಿಕೊಂಡು ಹೋಗುವ ಸೂಚನೆ ಲಭಿಸಿದಂತಾಗಿದೆ ಎನ್ನಬಹುದು..
ವರದಿ ಪ್ರಕಾಶ ಕುರಗುಂದ…