ಮಹಾಪುರುಷರನ್ನು ಒಂದೇ ಜಾತಿಗೆ ಸೀಮಿತಗೊಳಿಸಬೇಡಿ..
ಕೃಷ್ಣ ಜನ್ಮಾಷ್ಟಮಿಯಲ್ಲಿ ಮಲಗೌಡ ಪಾಟೀಲ ಸಲಹೆ..
ಬೆಳಗಾವಿ: ಮಹಾಪುರುಷರ ಜಯಂತಿಗಳನ್ನು ಒಂದೇ ಸಮುದಾಯಗಳು ಆಚರಿಸದೆ ಎಲ್ಲ ಸಮುದಾಯಗಳು ಆಚರಿಸಬೇಕು ಎಂದು ಕೆಪಿಸಿಸಿ ಸದಸ್ಯ ಹಾಗೂ ಸಚಿವ ಸತೀಶ ಜಾರಕಿಹೊಳಿ ಅವರ ಆಪ್ತ ಸಹಾಯಕರಾದ ಮಲಗೌಡ ಪಾಟೀಲ ಅವರು ಸಲಹೆ ನೀಡಿದರು.

ತಾಲೂಕಿನ ಅಗಸಗೆ ಗ್ರಾಮದಲ್ಲಿ ಗುರುವಾರ ಕೃಷ್ಣ ಯುವಕ ಮಂಡಳ ಆಯೋಜಿಸಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇಂದು ದೇಶದಲ್ಲಿ ಮಹಾಪುರುಷರನ್ನು ಕೇವಲ ಒಂದು ಜಾತಿ ಮತ್ತು ಧರ್ಮಕ್ಕೆ ಸೀಮಿತ ಗೊಳಿಸಿ ಜನತೆ ತಮ್ಮ ಸಣ್ಣತನ ತೋರಿಸುತ್ತಿದ್ದಾರೆ. ಮಹಾಪುರುಷರು ಎಲ್ಲಾ ಜಾತಿ, ಧರ್ಮದ ಜನರ ಏಳಿಗೆಗಾಗಿ ಶ್ರಮಿಸಿದ್ದಾರೆ. ಮಹಾ ಭಾರತದಲ್ಲಿ ಶ್ರೀ ಕೃಷ್ಣ ಸರ್ವಜನ ರ ಏಳಿಗೆಗಾಗಿ ಸತ್ಯದ ಪರ ನಿಂತು ಹೋರಾಟ ಮಾಡಿದ್ದಾರೆ. ಇಂದು ನಾವೆಲ್ಲ ಸತ್ಯದ ಪಥದ ಮೇಲೆ ನಡೆಯಬೇಕಾಗಿದೆ ಎಂದರು.

ಸೇಫ್ ವಾರ್ಡ ಸಂಸ್ಥೆ ಅಧ್ಯಕ್ಷ ಸಂತೋಷ ಮೇತ್ರಿ ಮಾತನಾಡಿ ತಳ ಸಮುದಾಯದಲ್ಲಿ ಹುಟ್ಟಿದ ಮಹಾಪುರುಷರ ಇತಿಹಾಸವನ್ನು ಈ ದೇಶದ ಮನುವಾದಿಗಳು ತಿರುಚಿ ಅವರ ಚಾರಿತ್ರ್ಯಕ್ಕೆ ಧಕ್ಕೆ ತರುವ ಪ್ರಯತ್ನ ಮಾಡಿದ್ದಾರೆ. ಇದಕ್ಕೆ ಶ್ರೀ ಕೃಷ ಅವರೂ ಹೊರತಾಗಿಲ್ಲ. ಇಂದಿನ ಯುವ ಜನಾಂಗ ದೇಶದಲ್ಲಿನ ಮಹಾಪುರುಷರ ನೈಜ ಇತಿಹಾಸ ಅಧ್ಯಯನ ಮಾಡುವ ಅಗತ್ಯ ಇದೆ ಎಂದರು.

ಈ ಕಾರ್ಯಕ್ರಮದಲ್ಲಿ ಅಗಸಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಅಮೃತ ಮುದ್ದನ್ನವರ, ಉಪಾಧ್ಯಕ್ಷ ಶೋಭಾ ಕುರೆನ್ನವರ, ಅಪ್ಪಯ್ಯಗೌಡ ಪಾಟೀಲ, ಕೆಂಪಣ್ಣ ಚುನಾರಿ, ಲಕ್ಷ್ಮಣ ಕಂಗ್ರಾಲ್ಕರ, ಸುಧೀರ್ ಗಡ್ಕರಿ, ವಿಲಾಸ ಪಾಟೀಲ, ಸಂತೋಷ ಲಾಡ, ಶಿವಪುತ್ರ ಕೋಲಕಾರ, ಲಗಮಾ ಸನದಿ ಇತರರು ಉಪಸ್ಥಿತರಿದ್ದರು. ಚಂದು ಸನದಿ ನಿರೂಪಿಸಿ, ವಂದಿಸಿದರು.
ವರದಿ: ಸಂತೋಷ ಮೇತ್ರಿ, ಸಮಾಜಮುಖಿ ಸುದ್ದಿ..