ಮಹಾಪೌರರ ಸ್ವಂತ, ಸಮಚಿತ್ತದ ಆಡಳಿತ ಬಯಸುವ ನಗರವಾಸಿಗಳು…

ಸಾಮಾಜಿಕ ನ್ಯಾಯಕ್ಕೆ ಮಾದರಿಯಾದ ಮೇಯರ ಆಯ್ಕೆ..

ಮಹಾಪೌರರ ಸ್ವಂತ, ಸಮಚಿತ್ತದ ಆಡಳಿತ ಬಯಸುವ ನಗರವಾಸಿಗಳು..

ಬೆಳಗಾವಿ : ಮಹಾನಗರ ನೂತನ ಮೇಯರ್ ಆಗಿ ಸವಿತಾ ಕಾಂಬಳೆ ಅವಿರೋಧ ಅಯ್ಕೆಯಾಗಿದ್ದಾರೆ, ಐದು ವರ್ಷಗಳ ಬಳಿಕ ಬೆಳಗಾವಿ ಮಹಾನಗರಕ್ಕೆ ಕನ್ನಡ ಭಾಷಿಕ ಮೇಯರ್ ಆಯ್ಕೆ ಹಾಗೂ ಬಿಜೆಪಿಯ ಮೊದಲ ಕನ್ನಡ ಭಾಷಿಕ ಮೇಯರ್ ಎಂಬ ಕೀರ್ತಿಗೂ ಪಾತ್ರವಾದ ಸವಿತಾ ಕಾಂಬಳೆ ಅವರು ಪ್ರಾದೇಶಿಕ ಆಯುಕ್ತ ಸಂಜಯ್ ಶೆಟ್ಟೆಣ್ಣವರ ಅವರಿಂದ ನೂತನ ಮೇಯರ್ ‌ಎಂದು ಘೋಷಣೆ ಮಾಡಿದ್ದಾರೆ..

ಪಾಲಿಕೆ ಸದಸ್ಯೆ ಆಗುವ ಮೊದಲು ವಿವಿಧ ಕಂಪನಿಗಳಲ್ಲಿ ಸಾಮಾನ್ಯ ಕಾರ್ಮಿಕರಾಗಿ ಸೇವೆ ಸಲ್ಲಿಸಿದ್ದ ಸವಿತಾ ಕಾಂಬಳೆಯವರ ಮನೆತನದ ಹಿನ್ನೆಲೆ ಕಡುಬಡತನದಾಗಿದ್ದು ಗಮನಾರ್ಹ..

ಬೆಳಗಾವಿ ಮಹಾನಗರ ನೂತನ ಡೆಪ್ಯುಟಿ ಮೇಯರ್ ಆಗಿ ಬಿಜೆಪಿಯ ಆನಂದ ಚೌಹ್ವಾನ್ ಆಯ್ಕೆಯಾಗಿದ್ದು, ಕಾಂಗ್ರೆಸ್‌ನ ಜ್ಯೋತಿ ಕಡೋಲ್ಕರ್ ವಿರುದ್ಧ 20 ಮತಗಳ ಅಂತರದಿಂದ ಆನಂದ ಗೆಲುವು ಸಾಧಿಸಿದ್ದು, ಬಿಜೆಪಿಯ‌ ಆನಂದ ಚೌಹ್ವಾನ್‌ಗೆ 39 ಹಾಗೂ ಕಾಂಗ್ರೆಸ್‌‌ನ ಜ್ಯೋತಿ ಕಡೋಲ್ಕರ್‌ಗೆ 20 ಮತಗಳು ಲಭಿಸಿದ್ದು, ಈ ಮೂಲಕ ಎರಡನೇ ಅವಧಿಗೂ ಮರಾಠಾ ಬಾಷಿಕರಿಗೆ ಬೆಳಗಾವಿ ಡೆಪ್ಯುಟಿ ಮೇಯರ್ ಸ್ಥಾನ ಒಲಿದಂತಾಗಿದೆ..

ಲೋಕಸಭೆ ‌ಚುನಾವಣೆ ಹೊತ್ತಲ್ಲಿ ಬಿಜೆಪಿಯಿಂದ ಕನ್ನಡ ಹಾಗೂ ಮರಾಠಾ ಸಮುದಾಯಗಳ ಓಲೈಕೆ ಮಾಡಿದಂತಿದ್ದು, ಕನ್ನಡ ಭಾಷಿಕ ಸವಿತಾಗೆ ಮೇಯರ್ ಹಾಗೂ ಮರಾಠಾ ಭಾಷಿಕ ಆನಂದ ಚೌಹ್ವಾನ್‌ಗೆ ಡೆಪ್ಯುಟಿ ಮೇಯರ್ ಸ್ಥಾನ ಕೊಟ್ಟ ಬಿಜೆಪಿ ಸಮತಲವನ್ನು ಕಾಯ್ದುಕೊಂಡಿದೆ..

ಮಾಧ್ಯಮಗಳಿಗೆ ನೂತನ ಮೇಯರ್ ಸವಿತಾ ಕಾಂಬಳೆ ಮಾತನಾಡಿದ್ದು,
ಬೆಳಗಾವಿ ಜನತೆ ಅವಕಾಶ ಕೊಟ್ಟಿದ್ದಕ್ಕೆ ಕೃತಜ್ಞತೆ ಹೇಳುತ್ತೆನೆ,
ಕೇವಲ ಅಭಿವೃದ್ದಿ ಕೆಲಸದ ವಿಚಾರ ನಾನು ಮಾಡ್ತಿನಿ,
ನಾನೋರ್ವ ಕಾರ್ಮಿಕ ಮಹಿಳೆ ಮಹಾಪೌರ ಆಗಿದ್ದಿನಿ ನನಗೆ ಹೆಮ್ಮೆ ಅನಿಸುತ್ತದೆ, ಎಲ್ಲರ ಸಹಕಾರ ತೆಗೆದುಕೊಂಡು ನಾನು ಕೆಲಸ ಮಾಡ್ತಿನಿ ಎಂದು ತಮ್ಮ ಸಂತಸದ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ..

ವರದಿ ಪ್ರಕಾಶ ಕುರಗುಂದ..