ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳಿಗೆ, ಜಿಲ್ಲಾಮಂತ್ರಿ ಸತೀಶ್ ಜಾರಕಿಹೊಳಿ ಅವರಿಂದ ಕ್ಲಾಸ್..
ಅಂಗನವಾಡಿಯ ನೇಮಕಾತಿ, ಸ್ವಂತ ಕಟ್ಟಡ, ಹಾಗೂ ಪೌಷ್ಟಿಕ ಆಹಾರದ ವಿಳಂಬಕ್ಕೆ ಅಸಮಾಧಾನ..
ಇಲಾಖೆಯ ಸೌಲಭ್ಯ ಸರಿಯಾದ ಸಮಯಕ್ಕೆ ಸಾರ್ವಜನಿಕರಿಗೆ ಒದಗಬೇಕು..
ಸಚಿವ ಸತೀಶ ಜಾರಕಿಹೊಳಿ..
ಬೆಳಗಾವಿ : ಶುಕ್ರವಾರ ದಿನಾಂಕ 01/03/2024ರಂದು ಬೆಳಗಾವಿಯ ಜಿಲ್ಲಾ ಪಂಚಾಯತ ಮತ್ತು ಜಿಲ್ಲಾಡಳಿತದ ಸಹಯೋಗದಲ್ಲಿ ತ್ರೈಮಾಸಿಕ ಕರ್ನಾಟಕ ಅಭಿವೃದ್ದಿ ಸಭೆ 2023-24, ಸುವರ್ಣ ವಿಧಾನ ಸೌಧದ ಸಭಾಭವನದಲ್ಲಿ, ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರ ಅಧ್ಯಕ್ಷತೆಯಲ್ಲಿ ಜರಗಿತು..

ಈ ಸಭೆಯಲ್ಲಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸಂಭಂದಿಸಿದಂತೆ ಜಿಲ್ಲೆಯ ಶಾಸಕರಾದ ಮಹಾಂತೇಶ್ ಕೌಜಲಗಿ, ದುರ್ಯೋಧನ ಐಹೊಳೆ ಅವರು ಕೆಲ ಪ್ರಶ್ನೆಗಳನ್ನು ಕೇಳಿದಾಗ ಇಲಾಖೆಯ ಉಪನಿರ್ದೇಶಕರಾದ ನಾಗರಾಜ್ ಅವರು ಸ್ಪಷ್ಟ ಉತ್ತರ ನಿಡದಿದ್ದಾಗ, ರಾಯಭಾಗ ಶಾಸಕ ದುರ್ಯೋಧನ ಐಹೊಳೆ ಅವರು ಅಧಿಕಾರಿಯ ವಿರುದ್ಧ ವಾಗ್ದಾಳಿ ನಡೆಸಿದರು, ರಾಜ್ಯದ ಎಲ್ಲಾ ಕಡೆಗೆ ಆಹಾರ ಧಾನ್ಯ ಪೂರೈಕೆ ಆಗುವಾಗ ನನ್ನ ಕ್ಷೇತ್ರಕ್ಕೆ ಯಾಕೆ ಇಲ್ಲ? ನಿಮ್ಮ ತಂತ್ರ ಎಲ್ಲಾ ಗೊತ್ತಿದೆ ಎಂದು ಕೋಪದಿಂದ ಅಧಿಕಾರಿಯ ಮೇಲೆ ರೆಗಿದಾಗ, ಜಿಲ್ಲಾ ಸಚಿವರು ಮಧ್ಯ ಪ್ರವೇಶಿಸಿದರು..

ಬಾಡಿಗೆ ಅಂಗನವಾಡಿ ಕಟ್ಟಡಗಳನ್ನು ಸ್ವಂತ ಕಟ್ಟಡಗಳಿಗೆ ಸ್ಥಳಾಂತರ ಮಾಡುವ ಕಾರ್ಯದಲ್ಲಿ ವಿಳಂಬ ಏಕೆ ಆಗಿದೆ? ಇನ್ನು 1200 ಅಂಗನವಾಡಿಗಳು ಬಾಡಿಗೆ ಕಟ್ಟದಲ್ಲಿವೆ, ನೀವು ಹೀಗೆ ಮಾಡಿದರೆ ಯಾವಾಗ ಸ್ವಂತ ಕಟ್ಟಡ ಆಗುತ್ತವೆ ಎಂದು ಪ್ರಶ್ನೆ ಮಾಡಿದರು, ಇನ್ನು ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ನೇಮಕಾತಿ ವಿಚಾರದಲ್ಲಿ ಇಲಾಖೆ ವಿಳಂಬ ಮಾಡುತ್ತಿದ್ದು, 8 -10 ತಿಂಗಳಾದರೂ ಇನ್ನೂ ಆಯ್ಕೆ ಪ್ರಕ್ರಿಯೆ ಮುಗಿದಿಲ್ಲ, ಎರಡು ಮೂರು ಅಂಗನವಾಡಿಗಳನ್ನು ಒಬ್ಬ ಕಾರ್ಯಕರ್ತೆ ನೋಡಿಕೊಳ್ಳುವ ಪರಿಸ್ಥಿತಿ ಇದೆ, ಇನ್ನು ಎರಡು ದಿನದಲ್ಲಿ ನೇಮಕಾತಿಯ ಆದೇಶ ಪತ್ರ ನೀಡಿ, ಕೆಲಸಕ್ಕೆ ಹಾಜರಾಗುವಂತೆ ಮಾಡಿ ಎಂದು ಎಚ್ಚರಿಕೆ ನೀಡಿದರು..

ಇನ್ನು ಮಕ್ಕಳಿಗೆ ಏನೇನು ಆಹಾರ ನೀಡುತ್ತೀರಿ ಎಂದು ಪ್ರಶ್ನೆಮಾಡಿ, ಆಹಾರದ ಪಾಕೇಟಗಳನ್ನು ಸ್ವಂತ ಸಭೆಯಲ್ಲಿ ತರಿಸಿ ಪರೀಕ್ಷೆ ಮಾಡಿದರು, ಮೊಟ್ಟೆಗಳ ಸರಿಯಾದ ಹಂಚಿಕೆ ಆಗುವುದರ ಬಗ್ಗೆ ವಿಚರಣೆ ಮಾಡಿ, ಕೆಲ ಸೂಚನೆ ನೀಡಿದ್ದು, ಬಾಣಂತಿಯರಿಗೆ ನೀಡುವ ಆಹಾರದಲ್ಲಿ ಯಾವುದೇ ಕೊರತೆ ಆಗಬಾರದು, ಮಕ್ಕಳಿಗೆ ಕೂಡಾ ಉತ್ತಮ ಪೌಷ್ಟಿಕ ಆಹಾರವನ್ನು ನೀಡುವ ಕಾರ್ಯದಲ್ಲಿ ಯಾವುದೇ ಕೊರತೆ ಆಗಬಾರದು ಎಂದು ಸೂಚನೆ ನೀಡಿದರು..
ವರದಿ ಪ್ರಕಾಶ ಕುರಗುಂದ..