ಮಹಿಳಾ ಸಚಿವರ ಸ್ವಂತ ಜಿಲ್ಲೆಯಲ್ಲೇ ಇಲಾಖಾ ಅಧಿಕಾರಿಗಳ ಅವ್ಯವಹಾರ…

ಮಹಿಳಾ ಸಚಿವರ ಸ್ವಂತ ಜಿಲ್ಲೆಯಲ್ಲೇ ಇಲಾಖಾ ಅಧಿಕಾರಿಗಳ ಅವ್ಯವಹಾರ.

ತಮ್ಮಿಷ್ಟದಂತೆ ಅಂಗನವಾಡಿ ಸಿಬ್ಬಂದಿಯ ವರ್ಗಾವಣೆ ಹಾಗೂ ನೇಮಕಾತಿ..

ಪಕ್ಕದಲ್ಲೇ ನಡೆದ ಈ ಘಟನೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಗಮನಕ್ಕೆ ಇಲ್ಲವೇ ??

ಬೆಳಗಾವಿ : ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಅಧಿಕಾರಿಗಳು ತಾವು ನಡೆದದ್ದೇ ದಾರಿ ಎಂದು, ಯಾವುದೇ ಅಂಜಿಕೆ ಅಳುಕಿಲ್ಲದೇ, ನೀತಿ ನಿಬಂಧನೆಗಳಿಲ್ಲದೇ ತಮಗಿಷ್ಟ ಬಂದಂತೆ ನಡೆದುಕೊಂಡು ಸಮಾಜಕ್ಕೆ ಕೆಟ್ಟ ಸಂದೇಶ ನೀಡುತ್ತಿದ್ದಾರೆಯೇ ಎಂಬ ಸಂಶಯ ಜನಸಾಮಾನ್ಯರಲ್ಲಿ ಮೂಡುವಂತಾಗಿದೆ..

ವಿಷಯ ಏನೆಂದರೆ, ಬೆಳಗಾವಿಗೆ ಸಮೀಪ ಇರುವ ಯಮಕನಮರಡಿ ವಿಧಾನಸಭಾ ಕ್ಷೇತ್ರದ ಒಂದು ಹಳ್ಳಿಯಲ್ಲಿ, ಕಳೆದ ನಾಲ್ಕೈದು ತಿಂಗಳ ಹಿಂದೆ, ಅಲ್ಲಿ ಕಾರ್ಯನಿರ್ವಹಿಸುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಇಬ್ಬರನ್ನೂ ಕೂಡಾ ಸ್ಪಷ್ಟ ಕಾರಣ ಇಲ್ಲದೇ ಏಕಾಏಕಿಯಾಗಿ ದೂರದ ತಾಲೂಕಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ಖಾಲಿ ಇರುವ ಸದರಿ ಅಂಗನವಾಡಿ ಕಾರ್ಯಕರ್ತೆ ಸ್ಥಾನಕ್ಕೆ ಅದೇ ಊರಿನ ಬೇರೆ ಯುವತಿಯನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಆ ನೇಮಕಾತಿಗೆ ಯಾವ ಅಧಿಸೂಚನೆಯಲ್ಲಿ ಮಾಡಿಕೊಂಡಿದ್ದಾರೆಂಬ ಸಂಶಯಕ್ಕೆ ಕಾರಣವಾಗಿದೆ, 2023 ಡಿಸೆಂಬರಿನಲ್ಲಿ ಯಾವುದೇ ನೇಮಕಾತಿ ನಡೆದಿಲ್ಲ.

ಮೊದಲು ಕಾರ್ಯನಿರ್ವಹಿಸುತ್ತಿದ್ದ ಅಂಗನವಾಡಿ ಕಾರ್ಯಕರ್ತೆ 2020ರ ಅಧಿಸೂಚನೆಯಂತೆ ಅರ್ಜಿ ಹಾಕಿ, 2022ರ ಕೊನೆಯಲ್ಲಿ ನೇಮಕಾತಿ ಆದೇಶ ಪಡೆದಿದ್ದರೆಂಬ ಮಾಹಿತಿ ಇದ್ದು, 2023ರ ಡಿಸೆಂಬರ್ ಹೊತ್ತಿಗೆ ಕಾರ್ಯನಿರ್ವಹಿಸುತ್ತಿದ್ದ ಯುವತಿಯನ್ನು ವರ್ಗಾವಣೆ ಮಾಡಿ, ಆ ಸ್ಥಾನಕ್ಕೆ ಬೇರೆ ಯುವತಿಯನ್ನು ಯಾವ ಆಧಾರದಲ್ಲಿ ಆಯ್ಕೆ ಮಾಡಿದ್ದಾರೆ? ಅದೇರೀತಿ ಈಗ ನಿಯೋಜನೆಗೊಂಡ ಯುವತಿ ದ್ವಿತೀಯ ಪಿಯುಸಿ ಕೂಡಾ ಮುಗಿಸಿಲ್ಲ ಎನ್ನುವದು ದೊಡ್ಡ ವಿಪರ್ಯಾಸ,, ಇಂತವರನ್ನು ಯಾವ ಕಾರಣಕ್ಕೆ ನೇಮಕ ಮಾಡಿಕೊಳ್ಳಲಾಗಿದೆ ?? ಮೊದಲಿನ ಕಾರ್ಯಕರ್ತೆಯರನ್ನು ಯಾವ ಕಾರಣಕ್ಕೆ ವರ್ಗಾವಣೆ ಮಾಡಲಾಗಿದೆ ?? ಎಂಬ ಕೆಲವು ಪ್ರಶ್ನೆಗಳಿಗೆ ಬೆಳಗಾವಿ ಮಹಿಳಾ ಇಲಾಖೆಯ ಉಪನಿರ್ದೇಶಕರು ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹೇಳುವ ವಿವರಣೆ ನಂಬಲಾರದಂತಿದೆ..

ಹೀಗೆ ಸರ್ಕಾರದ ಯಾವುದೇ ಆದೇಶ, ಅಧಿಸೂಚನೆ, ನೀತಿ ನಿಬಂಧನೆಗಳಿಲ್ಲದೇ ತಮ್ಮಿಷ್ಟದಂತೆ ವರ್ಗಾವಣೆ ಹಾಗೂ ನೇಮಕಾತಿಗಳನ್ನು ಈ ಅಧಿಕಾರಿಗಳು ಮಾಡುತ್ತಾ ಹೋದರೆ, ಉದ್ಯೋಗಕ್ಕಾಗಿ ನಿರೀಕ್ಷೆಯಿಂದ ಕಾದು ಕುಳಿತ ಜನಸಾಮಾನ್ಯರ ಗತಿ ಏನು?? ಸ್ವಂತ ಜಿಲ್ಲೆಯಲ್ಲೇ ಮಹಿಳಾ ಸಚಿವರು ಇರುವಾಗ ಈ ವಿಷಯ ಅವರ ಗಮನಕ್ಕೆ ಇನ್ನು ಬಂದಿಲ್ಲವೇ?? ಇಲಾಖೆಯಿಂದ ಸಮಾಜಕ್ಕೆ ಯಾವ ಸಂದೇಶ ಹೋಗುತ್ತಿದೆ?? ಇಂತ ಅಧಿಕಾರಿಗಳ ಮೇಲೆ ಇಲಾಖೆ ಹಾಗೂ ಉನ್ನತಾಧಿಕಾರಿಗಳು ಯಾವ ಕ್ರಮ ಜರುಗಿಸುವರು ??

ಯಾರ ಒತ್ತಡವೂ, ಪ್ರಭಾವವೋ, ಅಥವಾ ಯಾವುದಾದರೂ ಆಮಿಶವೋ ಗೊತ್ತಿಲ್ಲ, ಒಟ್ಟಿನಲ್ಲಿ ಅಧಿಕಾರಿಗಳು ಇಂತಹ ದುರ್ಮಾರ್ಗದ ಕಾರ್ಯ ಮಾಡಿದರೆ, ಇಡೀ ಆಡಳಿತ ವ್ಯವಸ್ಥೆಯ ಮೇಲೆ ಜನಸಾಮಾನ್ಯರು ಇಟ್ಟ ನಂಬಿಕೆ ಉಳಿಯುವುದಿಲ್ಲ, ಸರಿಯಾದ ಉದ್ಯೋಗ , ಆದಾಯ ಇಲ್ಲದ ಜನರೇ ಪ್ರಾಮಾಣಿಕವಾಗಿ ಜೀವನ ಮಾಡುವಾಗ, ಅಧಿಕಾರಿಗಳಾದ ಇವರಿಗೆ ಎಲ್ಲಾ ಸೌಲಭ್ಯ ಇದ್ದೂ ಕೂಡಾ ಇಂತಹ ಅಪ್ರಾಮಾಣಿಕ ಕಾರ್ಯ ಇವರು ಮಾಡಿದ್ದೇ ಆದರೆ ಇಂತವರಿಗೆ ಕ್ಷಮೆಯುಂಟೆ..???

ವರದಿ ಪ್ರಕಾಶ ಕುರಗುಂದ..