“ಅಸ್ಮಿತೆ” ವ್ಯಾಪಾರ ಮೇಳ 2024..
ನಾಲ್ಕು ದಿನಗಳಲ್ಲಿ ದಾಖಲೆಯ ಒಂದು ಕೋಟಿ, ಚಿಲ್ಲರೆ ಮೊತ್ತದಷ್ಟು ಮಾರಾಟ..
ಮಹಿಳಾ ಸ್ವಸಹಾಯ ಸಂಘಗಳ ಹಾಗೂ ಖಾದಿ ಉತ್ಪನ್ನಗಳ ಬ್ರಹತ್ ಪ್ರದರ್ಶನ ಮತ್ತು ಮಾರಾಟ ಮೇಳ..
ಬೆಳಗಾವಿ : ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾಡಳಿತ ಮತ್ತು ಜಿಲ್ಲಾಪಂಚಾಯತಿ, ಮಹಾನಗರ ಪಾಲಿಕೆಯ ಸಹಯೋಗದಲ್ಲಿ ದಿನಾಂಕ 26/12/2024 ರಿಂದ 04/01/2025ರ ವರೆಗೆ ಬೆಳಗಾವಿಯ ಸರ್ದಾರ ಹೈಸ್ಕೂಲ್ ಮೈದಾನದಲ್ಲಿ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜನೆ ಮಾಡಲಾಗಿದೆ..
ಸೋಮವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಜಿಪಂ ಸಿಇಓ ರಾಹುಲ್ ಶಿಂಧೆ ಅವರು, ರಾಜ್ಯದ ಎಲ್ಲಾ ಜಿಲ್ಲೆಯ ಸುಮಾರು150 ಮಳಿಗೆಗಳನ್ನು ಸ್ಥಾಪಿಸಲಾಗಿದ್ದು, ಪ್ರತಿ ಜಿಲ್ಲೆಯ ಪ್ರಮುಖ ಸಾಂಪ್ರದಾಯಿಕ ಉತ್ಪನ್ನಗಳನ್ನು ಇಲ್ಲಿ ಮಾರಾಟ ಮತ್ತು ಪ್ರದರ್ಶನ ಮಾಡಲಾಗುತ್ತಿದೆ, 10 ಆಹಾರ ಮಳಿಗೆಗಳು, 50 ಖಾದಿ ಉತ್ಪನ್ನಗಳ ಮಳಿಗೆಗಳಿದ್ದು, ಈ ಮೇಳಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ಪ್ರತಿ ದಿನ ಬೆಳಿಗ್ಗೆ 10 30 ರಿಂದ ರಾತ್ರಿ 9-30ರ ವರೆಗೆ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಲಿದ್ದು ಸಾರ್ವಜನಿಕರು ಬಂದು ಇದರ ಪ್ರಯೋಜನೆ ಪಡೆಯಬೇಕು ಎಂದಿದ್ದಾರೆ.

ಈಗ ನಾಲ್ಕು ದಿನಗಳಲ್ಲಿ 50.67 ಲಕ್ಷ ಮಹಿಳಾ ಸ್ವ ಸಹಾಯ ಗುಂಪಿನ ಉತ್ಪನ್ನಗಳು ಮತ್ತು 50.06 ಲಕ್ಷ ಖಾದಿ ಉತ್ಪನ್ನಗಳ ಮಾರಾಟವಾಗಿದ್ದು, ಒಟ್ಟು 100.73 ಲಕ್ಷಗಳ ಮಾರಾಟದ ದಾಖಲೆಯಾಗಿದ್ದು, ಈ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಬೆಳಗಾವಿಯ ಜನರ ಸ್ಪಂದನೆ ಉತ್ತಮವಾಗಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ತಿಳಿಸಿದ್ದಾರೆ.
ಜನವರಿ 2 ಮತ್ತು 3ನೇ ತಾರೀಕು ಮೇಳದ ವೇದಿಕೆಯಲ್ಲಿ ಸಾಯಂಕಾಲ 6.30 ರಿಂದ 9.30ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ, ಈ ಮೇಳದಲ್ಲಿ ನಾಡಿನ ವಿವಿಧ ಜಿಲ್ಲೆಗಳ ವಿಶೇಷವಾದ ಸಾಂಪ್ರದಾಯಿಕ ಉತ್ಪನ್ನಗಳು ಮಾರಾಟಕ್ಕೆ ಲಭ್ಯವಿದ್ದು, ಸಾರ್ವಜನಿಕರು ಬಂದು ನಮ್ಮ ನಾಡಿನ ಸಂಸ್ಕೃತಿಯ ಸಂಕೇತವಾದ ಉತ್ಪನ್ನಗಳ ಬಗ್ಗೆ ತಿಳಿದುಕೊಳ್ಳಬೇಕು ಎಂಬ ಮನವಿ ಮಾಡಿದ್ದಾರೆ.
ಖಾದಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಉತ್ಪನ್ನ ಸೇರಿದಂತೆ, ದೇಶದ ವಿವಿಧ ರಾಜ್ಯಗಳ ಖಾದಿ ಉತ್ಪನ್ನಗಳು ಮಾರಾಟಕ್ಕೆ ಸಿದ್ದ ಇವೆ, ಅಕ್ಕ ಕೆಫೆ ಅಡಿಯಲ್ಲಿ 10 ಆಹಾರ ಮಳಿಗೆಗಳು ಸಿದ್ಧವಿದ್ದು, ಉತ್ತರ ಕರ್ನಾಟಕದ ಗಿರ್ಮಿಟ್ಟು, ಮಿರ್ಚಿ ಬಜಿ, ಚುರುಮುರಿ, ಜೋಳದ ರೊಟ್ಟಿ, ಹೋಳಿಗೆ, ಮಂಗಳೂರು ನಿರದೋಷೆ, ಮೈಸೂರು ಮಸಾಲ, ಆಲೂ ರೋಲ್, ಚಿಕನ್ ಬಿರಿಯಾನಿ, ಪ್ರೊಟ್ ಸಲಾಡ್, ಮುಂತಾದ ರುಚಿಕರವಾದ ಆಹಾರ ಪದಾರ್ಥಗಳಿಗೆ..
ಬೆಳಗಾವಿಯಲ್ಲಿ ಸತತವಾಗಿ 4 ನೇ ಬಾರಿಗೆ ಆಯೋಜನೆಗೊಂಡಿರುವ ಈ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಸಾರ್ವಜನಿಕರು ಮತ್ತಷ್ಟು ಆಗಮಿಸಿ ಮಹಿಳಾ ಸ್ವಸಹಾಯ ಸಂಘಗಗಳಿಗೆ ಹಾಗೂ ಖಾದಿ ಮಾರಾಟಗಾರರಿಗೆ ಉತ್ಪಾದಿಸಿದ ಉತ್ಪನ್ನಗಳಿಗೆ ಸಹಕಾರ ನೀಡುವ ಮೂಲಕ ಅವರ ಆರ್ಥಿಕ ಸಬಲತೆಗೆ ಬೆಂಬಲಿಸಬೇಕು ಎಂದು ಕೇಳಿಕೊಂಡಿದ್ದಾರೆ.
ವರದಿ ಪ್ರಕಾಶ ಬಸಪ್ಪ ಕುರಗುಂದ..