ಮಾಡುವ ಕೆಲಸ ಹಾಗೂ ಯೋಚನೆ ಸರಿ ಇದ್ದರೆ ಜಪತಪ ಏಕೆ ಬೇಕು??
ಕನಕದಾಸರ ತತ್ವಾದರ್ಶ ಪ್ರಸ್ತುತ ಸಮಾಜಕ್ಕೆ ಅತ್ಯವಶ್ಯಕ..
ಯುವ ಸ್ಪೂರ್ತಿ ರಾಹುಲ ಜಾರಕಿಹೊಳಿ ಅಭಿಮತ..
ಬೆಳಗಾವಿ : ಸಮೀಪದ ಯಮಕನಮರಡಿ ಮತಕ್ಷೇತ್ರದ ಕಾಕತಿ ಗ್ರಾಮದಲ್ಲಿ ಆಯೋಜನೆ ಮಾಡಲಾದ ಶ್ರೀ ಕನಕದಾಸರ ಜಯಂತಿಯ ಕಾರ್ಯಕ್ರಮದಲ್ಲಿ ಯುವ ನಾಯಕರಾದ ರಾಹುಲ ಜಾರಕಿಹೊಳಿಯವರುಈ ಮೇಲಿನಂತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ..

ಜಯಂತಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ, ಮಾತನಾಡಿದ ಅವರು, ಜಪವ ಮಾಡಿದರೇನು ತಪವ ಮಾಡಿದರೇನು ವಿಪರೀತ ಕಪಟಗುಣ ಕಲುಷಿತವಿದ್ದವರು, ಎಂಬ ದಸರಾ ವಚನವನ್ನು ಮೆಲುಕು ಹಾಕುತ್ತಾ, ಇಂದಿನ ಸಮಾಜದ ಕೆಲವು ಸಮಾಜಘಾತುಕ ಶಕ್ತಿಗಳ ಷ್ಯಡ್ಯoತ್ರದ ವಿರುದ್ಧ ಮಾತನಾಡಿದರು..
ಮಾನವೀಯತೆ ಇಲ್ಲದೇ ಸಮಾಜದಲ್ಲಿ ಒಡಕು ಉಂಟು ಮಾಡಿ, ಬೇಧ ಭಾವ ಆಚರಣೆ ಮಾಡಿ, ಜಪ ತಪವನ್ನು ಮಾಡಿದರೆ ಏನು ಲಾಭ ಎಂದು ಮಾರ್ಮಿಕವಾಗಿ ಮಾತನಾಡಿದರು..

ದಾಸ ಸಾಹಿತ್ಯದ ಮೇರು ಶಿಖರವಾದ ಕನಕದಾಸರು, ಕನ್ನಡ ಸಾಹಿತ್ಯಕ್ಕೆ ತಮ್ಮ ಕೀರ್ತನೆಗಳ ಮೂಲಕ ಅನರ್ಘ್ಯ ಕೊಡುಗೆ ನೀಡಿದ್ದಾರೆ, ಆ ಮೂಲಕ ಸಮಾಜದಲ್ಲಿ ಹೊಸ ಚೈತನ್ಯ ಹಾಗೂ ಉಪಯುಕ್ತ ಜ್ಞಾನವನ್ನು ನೀಡಿದ್ದಾರೆ ಎಂದರು..
16ನೇ ಶತಮಾನದಲ್ಲಿಯೇ ಜಾತಿವ್ಯವಸ್ಥೆ, ಮೌಢ್ಯದ ವಿರುದ್ಧ ಧ್ವನಿಯೆತ್ತಿ ತಮ್ಮ ಅನೇಕ ಕೀರ್ತನೆಗಳ ಮುಖಾಂತರ ಅರಿವು ಮೂಡಿಸಿದ ದಾಸ ಶ್ರೇಷ್ಠ ಕನಕದಾಸರ ಜಯಂತಿಯಂದು ಅವರಿಗೆ ಗೌರವಪೂರ್ವಕ ನಮನಗಳನ್ನು ಸಲ್ಲಿಸಿ, ಕನಕದಾಸರ ತತ್ವ ಹಾಗೂ ಆದರ್ಶಗಳು ಇಂದಿನ ಸಮಾಜಕ್ಕೆ ಅತೀ ಅವಶ್ಯಕವಾಗಿವೆ ಎಂದಿದ್ದಾರೆ..

ಈ ಕಾರ್ಯಕ್ರಮದಲ್ಲಿ ರಾಹುಲ್ ಜಾರಕಿಹೊಳಿ ಅವರೊಂದಿಗೆ, ಸ್ಥಳೀಯ ಜನಪ್ರತಿನಿಧಿಗಳು, ಪಕ್ಷದ ಪ್ರಮುಖರು, ಪದಾಧಿಕರಿಗಳು ಹಾಗೂ ಸಾರ್ವಜನಿಕರು ಭಾಗಿಯಾಗಿದ್ದರು..
ವರದಿ ಪ್ರಕಾಶ ಕುರಗುಂದ….