ಮಾನವೀಯ ಮೌಲ್ಯವುಳ್ಳ, ಶೋಷಿತರ ಧ್ವನಿಯಾಗಿ ನಿಂತ ಸಚಿವ ಸತೀಶ್ ಜಾರಕಿಹೊಳಿಯವರ ಜನ್ಮದಿನದ ಸಂಭ್ರಮ..
ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಉಪಾಧ್ಯಕ್ಷರಾದ ಬಸವರಾಜ ನಾಯಕ ಅವರಿಂದ ಗೌರವೀಯ ಶುಭಾಶಯಗಳು.
ಬೆಳಗಾವಿ : ಜನನಾಯಕ ಎಂಬ ಪದಕ್ಕೆ ಅಕ್ಷರಶಃ ಸೂಕ್ತ ಅರ್ಥವೆಂದರೆ ಅದು ಸಚಿವ ಸತೀಶ ಜಾರಕಿಹೊಳಿ ಅವರು, ಯಾವುದೇ ಜಾತಿ, ಧರ್ಮ, ಜನಾಂಗ, ಲಿಂಗ, ಭಾಷೆ, ಗಡಿಗಳ ಬೇದಬಾವವಿಲ್ಲದೇ ತಮಗೆ ಪರಿಚಯ ಇದ್ದರೂ, ಇಲ್ಲದಿದ್ದರೂ ಯಾರೇ ಕಷ್ಟ ಅಂತ ಬಂದರೆ ಅದಕ್ಕೆ ಸ್ಪಂದಿಸುವ ಮಿಡಿಯುವ ಮಾನವೀಯ ಹೃದಯ ಇರುವಂತ ರಾಜಕಾರಣಿ, ಸಮಾಜ ಸುಧಾರಕರು ಆದ ಸತೀಶ ಜಾರಕಿಹೊಳಿ ಅವರ ಜನ್ಮದಿನವನ್ನು ಇಂದು ನಾಡಿನಾದ್ಯಂತ ಅವರ ಅನುಯಾಯಿಗಳು ಅರ್ಥಪೂರ್ಣವಾಗಿ ಆಚರಣೆ ಮಾಡುತ್ತಿದ್ದಾರೆ.
ಬೆಳಗಾವಿ ಜಿಲ್ಲೆಯಷ್ಟೇ ಅಲ್ಲದೇ ರಾಜ್ಯದಲ್ಲಿಯೇ ಅಭಿವೃದ್ಧಿಯ ಹರಿಕಾರರು, ಶಿಕ್ಷಣ ಪ್ರೋತ್ಸಾಹಕರು, ರೈತರ ಆಶಾಕಿರಣ, ಬಡವರ ಬಂದು, ದಿನ ದಲಿತರ ದ್ವನಿಯೆಂದು, ಯುವ ಸಮೂಹದ ದಾರಿದೀಪವೆಂದು, ಕಲೆ ಸಾಹಿತ್ಯ ಸಂಸ್ಕೃತಿಗಳ ಪ್ರೋತ್ಸಾಹಕರೆಂದು, ವೈಚಾರಿಕ ಚಿಂತನೆಗಳ ಮೂಲಕ ಸಾಮಾಜಿಕ ಜಾಗೃತಿ ಮೂಡಿಸುವ ಆ ಮೂಲಕ ಸಾಮಾಜಿಕ ಕ್ರಾಂತಿಯಿಂದ ಸಮಾಜ ಸುಧಾರಿಸುವ ನಾಯಕರೆಂದು ಜೊತೆಗೆ ಅಭಿಮಾನಿಗಳ ಆತ್ಮೀಯ ಸಾಹುಕಾರರೆಂದು ಹೆಸರುವಾಸಿಯಾಗಿರುವ ನಗುಮುಖದ ಅಜಾತಶತ್ರು ಸತೀಶ್ ಜಾರಕಿಹೊಳಿ ಅವರ ಜನ್ಮದಿನವನ್ನು ಇಂದು ಎಲ್ಲಾ ಕಡೆಗೆ ಅವರ ಅಭಿಮಾನಿ, ಅನುಯಾಯಿಗಳು ವಿಭಿನ್ನವಾಗಿ ಆಚರಣೆ ಮಾಡುತ್ತಿದ್ದಾರೆ.
ಅದೇ ರೀತಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾರ್ಮಿಕರ ಘಟಕದ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷರು ಹಾಗೂ ಸಚಿವ ಸತೀಶ್ ಜಾರಕಿಹೊಳಿ ಅವರ ಅಪ್ಪಟ ಅನುಯಾಯಿ ಹಾಗೂ ಅಭಿಮಾನಿಗಳು ಆದ ಬಸವರಾಜ ನಾಯಕ ಅವರು ಸಚಿವರಿಗೆ ಜನ್ಮದಿನದ ಗೌರವೀಯ ಶುಭಾಶಯಗಳನ್ನು ತಿಳಿಸುತ್ತಾ, ದೇವರು ಅವರಿಗೆ ಮತ್ತಷ್ಟು ಆರೋಗ್ಯ, ಆಯಸ್ಸು, ಯಶಸ್ಸು ನೀಡಿ ಹರಸಲಿ ಎಂಬ ತಮ್ಮ ನೆಚ್ಚಿನ ನಾಯಕರಿಗೆ ಶುಭಾಶಯಗಳ ನಮನಗಳನ್ನು ತಿಳಿಸಿದ್ದಾರೆ.
ವರದಿ ಪ್ರಕಾಶ್ ಬಸಪ್ಪ ಕುರಗುಂದ..