ಮಾರಕ ಆದೇಶಗಳನ್ನು ಹಿಂಪಡೆಯಿರಿ…
ಪದವಿಪೂರ್ವ ಉಪನ್ಯಾಸಕರಿಂದ ಆಗ್ರಹ..
ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ..
ಒಟ್ಟು 12 ಬೇಡಿಕೆಗಳನ್ನು ಈಡೇರಿಸಲು ಒತ್ತಾಯ..
ಬೆಳಗಾವಿ : ಸರ್ಕಾರವು ಪದವಿ ಪೂರ್ವ ಇಲಾಖೆಗೆ ಧಕ್ಕೆ ಬರುವಂತೆ ಹೊರಡಿಸುತ್ತಿರುವ ಆದೇಶಗಳನ್ನು ತಕ್ಷಣ ಹಿಂಪಡೆಯಬೇಕೆಂದು ಕರ್ನಾಟಕ ರಾಜ್ಯ ಪದವಿಪೂರ್ವ ಉಪನ್ಯಾಸಕರ ಸಂಘ, ಪ್ರಾಚಾರ್ಯರ ಸಂಘ ಮತ್ತು ಬೆಳಗಾವಿ ಜಿಲ್ಲಾ ಪದವಿಪೂರ್ವ ನೌಕರರ ಮಹಾಮಂಡಳವು ಆಗ್ರಹಿಸಿದೆ.
ಕರ್ನಾಟಕ ರಾಜ್ಯ ಪದವಿಪೂರ್ವ ಉಪನ್ಯಾಸಕರ ಸಂಘ, ಪ್ರಾಚಾರ್ಯರ ಸಂಘ ಮತ್ತು ಬೆಳಗಾವಿ ಜಿಲ್ಲಾ ಪದವಿಪೂರ್ವ ನೌಕರರ ಮಹಾಮಂಡಳದ ವತಿಯಿಂದ ಬೆಳಗಾವಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಪ್ರಧಾನ ಕಾರ್ಯದರ್ಶಿ ಡಾ. ನಾಗರಾಜ್ ಮರೆನ್ನವರ ಪದವಿ ಪೂರ್ವ ಇಲಾಖೆಗೆ ಧಕ್ಕೆ ಬರುವ ಆದೇಶಗಳನ್ನು ಹೊರಡಿಸಲಾಗುತ್ತಿದೆ. ಉಪನ್ಯಾಸಕರ ಕಾರ್ಯವೈಖರಿ ಪರೀಕ್ಷಿಸಲು ಡಯಟ್’ಗಳಿಗೆ ಒಪ್ಪಿಸುತ್ತಿದ್ದಾರೆ. 9ನೇ ಮತ್ತು 10ನೇ ತರಗತಿಗಳಿಗೆ ಪಾಠ ಮಾಡಲು ಸಿ ಆಂಡ್ ಆರ್. ನಲ್ಲಿ ಪರಿವರ್ತನೆಯನ್ನು ಮಾಡುತ್ತಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ. ರಾಜ್ಯಾದ್ಯಂತ ಇಂದು ಮನವಿಯನ್ನು ಸಲ್ಲಿಸಿ 12 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಲಾಗಿದೆ ಎಂದರು.
ಎನ್. ಬಿ ಶಿರಶಾಟ, ಎಂ.ಕೆ.ಭಜಂತ್ರಿ ಸೇರಿದಂತೆ ಕರ್ನಾಟಕ ರಾಜ್ಯ ಪದವಿಪೂರ್ವ ಉಪನ್ಯಾಸಕರ ಸಂಘ, ಪ್ರಾಚಾರ್ಯರ ಸಂಘ ಮತ್ತು ಬೆಳಗಾವಿ ಜಿಲ್ಲಾ ಪದವಿಪೂರ್ವ ನೌಕರರ ಮಹಾಮಂಡಳದ ಪದಾಧಿಕಾರಿಗಳು ಭಾಗಿಯಾಗಿದ್ಧರು.