ಮಾರಿಹಾಳ ಪಿಕೆಪಿಎಸ್ ಉತ್ತಮ ಸಂಘವೆಂದು ಗುರ್ಥಿಸಿದ ಸಹಕಾರ ಸಚಿವರು..

ಮಾರಿಹಾಳ ಪಿಕೆಪಿಎಸ್ ಉತ್ತಮ ಸಂಘವೆಂದು ಗುರ್ಥಿಸಿದ ಸಹಕಾರ ಸಚಿವರು..

ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮಾದಮ್ಮನವರಿಗೆ ಸನ್ಮಾನ..

ಬೆಳಗಾವಿ : ಬುಧವಾರ ದಿನಾಂಕ 29/11/2024ರಂದು ನಗರದ ಜಿರ್ಗೆ ಸಭಾ ಭವನದಲ್ಲಿ ನಡೆದ ರಾಜ್ಯ ಮಟ್ಟದ 71ನೇ ಸಹಕಾರಿ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಸಮೀಪದ ಮಾರಿಹಾಳ ಗ್ರಾಮದ ವಿವಿಧೋದ್ದೇಶ ಸಹಕಾರಿ ಸಂಘವನ್ನು ರಾಜ್ಯದಲ್ಲಿ ಉತ್ತಮ ಸಹಕಾರಿ ಸಂಘವೆಂದು ಘೋಷಣೆ ಮಾಡಲಾಗಿದೆ..

ಈ ವೇಳೆ ರಾಜ್ಯ ಸಹಕಾರಿ ಸಮೂಹಗಳ ಪ್ರಮುಖರು ಈ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಿದ್ದು, ರಾಜ್ಯ ಸಹಕಾರಿ ಸಚಿವರಾದ ರಾಜಣ್ಣ ಅವರು ಮಾರಿಹಾಳ ಪಿಕೆಪಿಎಸ್ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮಾದಮ್ಮನವರ ಅವರನ್ನು ಸತ್ಕರಿಸಿ, ಸ್ಮರಣಿಕೆ ನೀಡಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಮಾಹದೇವ ಧನಾಯಿ, ಸಂಘದ ಮುಖ್ಯಕಾರ್ಯದರ್ಶಿ ರುದ್ರಪ್ಪ ಚಂದನ್ನವರ, ಗುರುನಾಥ ಅಕ್ಕತಂಗೆರಹಳ್ಳ, ಶಂಕರಗೌಡ ನಿರ್ವಾಣಿ,ರಾಮ ಹುಣ್ಣುರ, ಸುಗಂಧಾ ಪುಜಾರ, ಸವಿತಾ ಧರ್ಮೋಜಿ, ಸಂಜಯ ಚಾಟೆ, ವಿನೋದ ಚೌಹಾನ, ಸಮೀರ ಮುಲ್ಲಾ, ಗಿರಿಜಾ ಪಾಟೀಲ, ಕಲಗೌಡ ಪಾಟೀಲ ಜಿಲ್ಲೆಯ ಶಾಸಕರು, ರಾಜ್ಯದ ಸಹಕಾರಿಗಳು ಇದ್ದರು.

ಉತ್ತಮ ಸಹಕಾರಿ ಸಂಘದ ಆಯ್ಕೆಗೆ ಮಾಜಿ ಶಾಸಕ ಸಂಜಯ ಪಾಟೀಲ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುಭಾಷ ಪಾಟೀಲ, ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜು ಅಂಕಲಗಿ, ರಾಜ್ಯ ಬಿಜೆಪಿ ಮಾಧ್ಯಮ ಸಮಿತಿ ಸದಸ್ಯರಾದ ಎಫ್.ಎಸ್.ಸಿದ್ದನಗೌಡರ ಮಾರಿಹಾಳ, ಕರಡಿಗುದ್ದಿ, ಸುಳೆಭಾಂವಿ ಯದ್ದಲಭಾವಿಂಹಟ್ಟಿ ಗ್ರಾಮದ ರೈತರು ಹರ್ಷವ್ಯಕ್ತಪಡಿಸಿದ್ದಾರೆ.

ವರದಿ ಪ್ರಕಾಶ್ ಬಸಪ್ಪ ಕುರಗುಂದ..