ಮಾ ಮೀ ಹೋ ಸ ಯ ತಾಲ್ಲೂಕು ಮಟ್ಟದ ಪದಾಧಿಕಾರಿಗಳ ಆಯ್ಕೆ..
ಬೆಳಗಾವಿ : ಶುಕ್ರವಾರ ದಿನಾಂಕ 21.7.2023 ರಂದು ಬೈಲಹೊಂಗಲ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಪದಾಧಿಕಾರಿಗಳ ಸಭೆಯಲ್ಲಿ ಜಿಲ್ಲೆಯಲ್ಲಿ ಪ್ರತಿ ತಾಲೂಕಿನಲ್ಲಿ ಸಮಿತಿಯ ಸಂಘಟನೆಯನ್ನು ಚುರುಕುಗೊಳಿಸಲು ಯೋಜನೆಗಳನ್ನು ಹಾಕಿಕೊಳ್ಳಲಾಯಿತು..
ಇದೇ ಸಂದರ್ಭದಲ್ಲಿ ಯರಗಟ್ಟಿ ತಾಲ್ಲೂಕಿನ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದ್ದು, ಯರಗಟ್ಟಿ ತಾಲೂಕು ಗೌರವ ಅಧ್ಯಕ್ಷರಾಗಿ ಭಾಸ್ಕರ್ ಚೆನ್ನಮೇತ್ರಿ ಆಯ್ಕೆ ಆಗಿದ್ದಾರೆ. ತಾಲೂಕು ಅಧ್ಯಕ್ಷರಾಗಿ ಲಂಕೇಶ್ ಮೇತ್ರಿ,
ಉಪಾಧ್ಯಕ್ಷರಾಗಿ ಮಂಜುನಾಥ ನಿಲಪ್ಪನವರ ಆಯ್ಕೆಯಾದರು.
ಈ ಪದಾಧಿಕಾರಿಗಳ ಆಯ್ಕೆ ಸಂಧರ್ಭದಲ್ಲಿ ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ಶ್ರೀ ಬಸವರಾಜ ಅರವಳ್ಳಿ ಅವರು ಆಯ್ಕೆಯಾದ ನೂತನ ಪದಾಧಿಕಾರಿಗಳಗೆ ಆಯ್ಕೆ ಪ್ರಮಾಣ ಪತ್ರ ನೀಡಿ ಅಭಿನಂದಿಸಿದರು.
ಜೊತೆಗೆ ತಾಲೂಕು ಮಟ್ಟದಲ್ಲಿ ತಾವು ಮಾಡುವ ಕೆಲಸಕಾರ್ಯ, ಹಾಗೂ ಜವಾಬ್ದಾರಿಗಳ ಬಗ್ಗೆ ನಿರ್ದೇಶನ ನೀಡಿದರು..
ಜಿಲ್ಲಾ ಉಪಾಧ್ಯಕ್ಷ ಯಲ್ಲಪ್ಪ ಹುದಲಿ, ರಮೇಶ ರಾಯಪ್ಪಾಗೊಳ ಮಂಜುನಾಥ್ ಸಿದ್ಲಿಯೋಪ್ಪಗೊಳ ಹಾಗೂ ಸಮಾಜದ ಗಣ್ಯರು ಮುಖಂಡರು ಭಾಗವಹಿಸಿದ ಈ ಸಭಯು ಅತ್ಯಂತ ಯಶಸ್ವಿಯಾಗಿ ಜರುಗಿತು..
ವರದಿ ಪ್ರಕಾಶ ಕುರಗುಂದ..