ಮುಂಬರುವ ರಾಜ್ಯ ಬಜೆಟ್ಟಿನಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿಗೆ ಆಧ್ಯತೆ ನೀಡಿ.
ಬಜೆಟ್ಟಿನಲ್ಲಿ ವಿಶೇಷ ಅನುದಾನ ಮೀಸಲಿಡುವುದು ಅತ್ಯವಶ್ಯಕ..
ಕಿತ್ತೂರು ಕರ್ನಾಟಕ ಸೇನೆಯಿಂದ ಸಿಎಂಗೆ ಮನವಿ..
ಬೆಳಗಾವಿ : ಈಗಾಗಲೇ ಉತ್ತರ ಕರ್ನಾಟಕವು ಅಭಿವೃದ್ಧಿ ದೃಷ್ಟಿಯಿಂದ ದಕ್ಷಿಣ ಕರ್ನಾಟಕಕ್ಕಿಂತ ಭಾರಿ ಪ್ರಮಾಣದಲ್ಲಿ ಹಿಂದೆ ಉಳಿದಿದ್ದು, ಇದು ತಮ್ಮ ಗಮನಕ್ಕೂ ಇರುವದು, ನಾಡಿನ ಮುಖ್ಯಮಂತ್ರಿ ಆಗಿ ತಾವು ಮುಂಬರುವ ಬಜೆಟ್ ಅಧಿವೇಶನದಲ್ಲಿ ನಮ್ಮ ಬೇಡಿಕೆಗಳನ್ನು ಅತೀ ಅವಶ್ಯಕವಾಗಿ ಈಡೇರಿಸಬೇಕು ಹಾಗೂ ಬಜೆಟನಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿಗೆ ವಿಶೇಷ ಅನುದಾನ ಮೀಸಲಿಡಬೇಕು ಎಂದು ಕಿತ್ತೂರು ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷರಾದ ಮಹಾದೇವ ತಳವಾರ ಅವರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ..

ಶುಕ್ರವಾರ ದಿನಾಂಕ 09/01/2025ರಂದು ನಗರದ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ಮನವಿ ನೀಡಿದ ಕಿತ್ತೂರು ಕರ್ನಾಟಕ ಸೇನೆಯ ಪದಾಧಿಕಾರಿಗಳು ಮತ್ತು ಸದಸ್ಯರು, ಉತ್ತರ ಕರ್ನಾಟಕ ಅಭಿವೃದ್ಧಿ ದೃಷ್ಟಿಯಲ್ಲಿ ಹಲವು ಬೇಡಿಕೆಯುಳ್ಳ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ನೀಡಿದ್ದು, ವಿಶೇಷ ಅನುದಾನದಡಿ ಆದಷ್ಟು ಬೇಗ ಉತ್ತರ ಕರ್ನಾಟಕ ಅಭಿವೃದ್ಧಿ ಆಗಬೇಕೆಂದು ಆಗ್ರಹಿಸಿದ್ದಾರೆ.
ಈ ವೇಳೆ ಕಿತ್ತೂರು ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷರಾದ ಮಹದೇವ್ ತಳವಾರ ಅವರು ಮಾತನಾಡಿ, ರಾಜ್ಯ ಸರ್ಕಾರ ಕಿತ್ತೂರು ಪ್ರದೇಶಾಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಿ, ಅದಕ್ಕೆ ವಿಶೇಷ ಅನುದಾನ ನೀಡಬೇಕು, ವಾಯುವ್ಯ ಸಾರಿಗೆ ಬದಲಾಗಿ ಕಿತ್ತೂರು ಕರ್ನಾಟಕ ಸಾರಿಗೆ ಆಗಬೇಕು, ಸುವರ್ಣ ಸೌಧಕ್ಕೆ ವಿಭಾಗೀಯ ಕಚೇರಿಗಳು ಸ್ಥಳಾಂತರ ಆಗಬೇಕು, ಸುವರ್ಣ ಸೌಧದ ಎದುರು ಇನ್ನು ಅನೇಕ ಮಹಾಪುರುಷರ ಪ್ರತಿಮೆಗಳು ನಿರ್ಮಾಣವಾಗಬೇಕು, ರಾಜ್ಯದ ಎಲ್ಲಾ ರೇಲ್ವೆ ಯೋಜನೆಗಳು ಪೂರ್ಣವಾಗಬೇಕು, ನಂಜುಡಪ್ಪ ವರದಿ ಜಾರಿಯಾಗಿ, ಹಿಂದುಳಿದ ತಾಲೂಕುಗಳಿಗೆ ವಿಶೇಷ ಅನುದಾನ ಸಿಗಬೇಕು ಎನ್ನುವ ನಮ್ಮ ಹತ್ತು ಹಲವು ಬೇಡಿಕೆಗಳು ಆದಷ್ಟು ಬೇಗ ಇಡೆರಬೇಕು ಎಂದು ಸರ್ಕಾರದ ಬಳಿ ಕೇಳಿಕೊಳ್ಳುತ್ತಿದ್ದೇವೆ ಎಂದಿದ್ದಾರೆ.

ಈ ವೇಳೆ ಜಿಲ್ಲಾಧ್ಯಕ್ಷರಾದ ಶಿವಾನಂದ ಕೋಲಕಾರ, ದೇವೇಂದ್ರ ತಳವಾರ, ಲಕ್ಷ್ಮಿ ಗೋಟುರ, ರವಿ ಪಾಟೀಲ, ಸಂತೋಷ ತಳ್ಳಿಮನಿ, ಕಸ್ತೂರಿ ಭಾವಿ, ಭರಮಾ ಕಾಂಬ್ಳೆ, ಶಶಿಕಾಂತ ಅಷ್ಟೇಕರ್, ನಾಗೇಶ ಮಾಳಿ, ರಾಜು ಬೊಳನ್ನವರ್, ವಾಸು ಬಸನಾಯ್ಕರ್, ಶಂಕರ್ ಪಾಟೀಲ್, ಬಸವರಾಜ ಹುಲಕುಂದ, ರವಿ ಪಾಟೀಲ್, ಮುಂತಾದವರು ಉಪಸ್ಥಿತರಿದ್ದರು..
ವರದಿ ಪ್ರಕಾಶ ಬಸಪ್ಪ ಕುರಗುಂದ..