ಮುದ್ದುಕಂದನ ಮಂದಹಾಸದಲ್ಲಿ ದೇಶಪ್ರೇಮದ ದಿವ್ಯಚೇತನ..

ಮುದ್ದುಕಂದನ ಮಂದಹಾಸದಲ್ಲಿ ದೇಶಪ್ರೇಮದ ದಿವ್ಯಚೇತನ..

ಬೆಳಗಾವಿ : “ನಮ ಮಣ್ಣಿಮಣ್ಣಿನ ಕಣಕಣಗಳಲಿ ಚಿನ್ನವ ಸೋಸಿದ ದೇಶ, ಜಯ ಭಾರತ ನಮ್ಮಯ ದೇಶ, ಜಯ ಭಾರತ ನಮ್ಮಯ ದೇಶ” ಎಂದು ಹೆಮ್ಮೆಯಿಂದ ಹಾಡುವ ಹಾಗೆ, ಭಾರತ ದೇಶದಲ್ಲಿ ಜನಿಸಿದ ಪ್ರತಿಯೊಬ್ಬರೂ ಈ ದೇಶದ ಬಗ್ಗೆ ಗೌರವದಿಂದ, ಪ್ರೀತಿಯಿಂದ ಹೊಗಳಿಕೆಯ ಮಾತುಗಳನ್ನು ಆಡಿಯೇ ಆಡುತ್ತಾರೆ..

ಏಕೆಂದರೆ, ಭಾರತ ದೇಶದ ವೈಶಿಷ್ಟ್ಯಗಳೇ ಅಂತಹವು, ಇಲ್ಲಿಯ ಪ್ರಕೃತಿ, ನೈಸರ್ಗಿಕ ಸಂಪನ್ಮೂಲ, ಜನಾಂಗೀಯ ವೈವಿಧ್ಯತೆ, ವಾತಾವರಣ, ಆಹಾರ ಪದ್ಧತಿ, ಉಡುಗೆ ತೊಡುಗೆ, ಕಲೆ ಸಂಸ್ಕೃತಿ, ಜನಜೀವನ, ವೇಷ ಭಾಷೆ, ಧಾರ್ಮಿಕ ಆಚರಣೆ, ಹೀಗೆ ಹಲವಾರು ವಿಷಯಗಳಲ್ಲಿ ದೇಶದ ಉದ್ದಗಲಕ್ಕೂ ವಿವಿಧತೆ ಕಂಡರೂ, ಕೊನೆಗೆ ನಾವೆಲ್ಲರೂ ಭಾರತೀಯರು ಎಂಬ ಭಾವನೆ ನಮ್ಮನ್ನೆಲ್ಲ ಒಗ್ಗೂಡಿಸಿ, ವಿವಿಧತೆಯಲ್ಲಿ ಏಕತೆಯಿಂದ ಬಾಳುವ ಭಾವನೆ ಮೂಡಿಸಿದ್ದು ನಮ್ಮ ಭಾರತ ದೇಶ..

ಅದಕ್ಕಾಗಿಯೇ ದೇಶದ ಪ್ರತಿ ಮೂಲೆಯಲ್ಲಿರುವ, ಯಾವುದೇ ಸ್ಥಾನಮಾನದಲ್ಲಿರುವ ಭಾರತಿಯ ದೇಶದ ಸ್ವಾತಂತ್ರ್ಯ ದಿನವನ್ನು ಅತ್ಯಂತ ಹೆಮ್ಮೆಯಿಂದ, ಗೌರವದಿಂದ ಆಚರಣೆ ಮಾಡುವನು, ಭಾರತ ದೇಶದ ವೈಶಿಷ್ಟ್ಯ ಹಾಗೂ ಮಹತ್ವವನ್ನು ಪ್ರತಿ ಪ್ರಜೆಯೂ ತನ್ನದೇಯಾದ ರೀತಿಯಲ್ಲಿ ವರ್ಣಿಸುತ್ತಾ, ಈ ಜನ್ಮಭೂಮಿ, ಪುಣ್ಯಭೂಮಿಗೆ ತನ್ನ ಕೃತಜ್ಞತೆ ತಿಳಿಸುತ್ತಾನೆ..

ಅದೇ ರೀತಿ ಬೆಳಗಾವಿಯ ಒಬ್ಬ ಪುಟ್ಟ ಬಾಲಕಿ ತೊಟ್ಟ ಉಡುಗೆ ಗಮನ ಸೆಳೆದಿದ್ದು, 78ನೇ ಸ್ವಾತಂತ್ರ್ಯೋತ್ಸವ ಸಂಭ್ರಮದ ಮೆರಗನ್ನು ಹೆಚ್ಚಿಸಿದೆ, ಮಹಾಂತೇಶ ನಗರದ “ಶ್ರಾವಿ ವೀರನಗೌಡ ಇಮಾಮತಿ” ಎಂಬ ಪುಟ್ಟ ಬಾಲಕಿ ದೇಶಪ್ರೇಮದ ಮುದ್ದಾದ ಉಡುಗೆ ತೊಟ್ಟು, ಮಂದಹಾಸ ಬೀರಿದ್ದು, ಪುಟ್ಟ ಮಗುವಿನ ನಗುವಿನಲ್ಲಿ ಭಾರತ ಮಾತೆಯ ಸಂತಸದ ಛಾಯೆ ಕಾಣುವಂತಿದೆ..

ಭಾರತ ದೇಶ ಎಂದರೆ, ಸ್ವಾತಂತ್ರ್ಯ ದಿನಾಚರಣೆ ಎಂದರೆ, ಪುಟ್ಟ ಮಕ್ಕಳಿಂದ ವಯೋವೃದ್ಧರವರೆಗೂ ಆ ದೇಶಭಕ್ತಿ, ಗೌರವ ಇದ್ದೆ ಇರುತ್ತದೆ, ಈ ಮಣ್ಣಿನ ಗುಣ ತಾಯಿಯಂತೆ ಎಲ್ಲರನ್ನೂ ರಕ್ಷಿಸುತ್ತದೆ, ಆ ರಕ್ಷಣೆಯೇ ನಮ್ಮೆಲ್ಲರ ಶಕ್ತಿ ಎನ್ನುತ, ಎಲ್ಲರಿಗೂ ಆ ಪುಟ್ಟ ಬಾಲಕಿಯ ಕಡೆಯಿಂದ ಸ್ವಾತಂತ್ರ್ಯ ದಿನದ ಹಾರ್ದಿಕ ಶುಭಾಷಯಗಳು…

ವರದಿ ಪ್ರಕಾಶ್ ಬಸಪ್ಪ ಕುರಗುಂದ..