ಮುರಾರ್ಜಿ ವಸತಿ ಶಾಲೆಗಳಿಗೆ ಸಮಾಲೋಚನೆಯ ಮೂಲಕ ಸ್ಥಾನ ಹಂಚಿಕೆ..
ಬೆಳಗಾವಿ : ಜಿಲ್ಲೆಯಲ್ಲಿರುವ ಮುರಾರ್ಜಿ ವಸತಿ ಶಾಲೆಗಳಿಗೆ ಆರನೆಯ ತರಗತಿಯ ಪ್ರವೇಶಾತಿಗಾಗಿ ಬಹುದಿನಗಳಿಂದ ಪರದಾಡುತ್ತಿರುವ ವಿಧ್ಯಾರ್ಥಿಗಳ, ಅವರ ಪಾಲಕರ, ಮತ್ತು ಪ್ರವೇಶಾತಿ ಉಸ್ತುವಾರಿ ಹೊತ್ತಿರುವ ಆಕಾಂಕ್ಷಿಗಳ ಕುತೂಹಲಕ್ಕೆ ಇಂದು ತೆರೆ ಬಿದ್ದಂತಾಗಿ, ಇಲಾಖೆಯ ಅಧಿಕಾರಿಗಳಿಗೆ ಇದ್ದ ಪ್ರವೇಶಾತಿಯ ಕಿರಿಕಿರಿಯೂ ತಪ್ಪಿದಂತಾಗಿದೆ..
ಇಂದು ಗುರುವಾರ, ನಗರದ ಸಮಾಜಕಲ್ಯಾಣ ಇಲಾಖೆಯ, ಜಂಟಿ ನಿರ್ದೇಶಕರ ಕಚೇರಿಯ ಹಿಂಭಾಗದಲ್ಲಿ ಇರುವ ವಸತಿ ನಿಲಯದಲ್ಲಿ, 2023 – 24ರ ಮುರಾರ್ಜಿ ವಸತಿ ಶಾಲೆಗಳಿಗೆ ಆರನೆಯ ತರಗತಿಯ ಪ್ರವೇಶಾತಿಗಾಗಿ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮತ್ತು ಆಯ್ಕೆಯ ಪ್ರಕ್ರಿಯೆ ನಡೆದಿದ್ದು, ಜಿಲ್ಲೆಯ ಮೂಲೆ ಮೂಲೆಯಿಂದ ನೂರಾರು ವಿಧ್ಯಾರ್ಥಿಗಳು ಅವರ ಪಾಲಕರೊಂದಿಗೆ ಸಮಾಲೋಚನೆಗೆ ಹಾಜರಾಗಿದ್ದರು..

ಜಿಲ್ಲೆಯಲ್ಲಿ ಆಯ್ಕೆಯಾಗಿ, ಪ್ರವೇಶಾತಿ ಪಡೆಯದೇ ಉಳಿದ ಸ್ಥಾನಗಳಿಗೆ, ವಿಧ್ಯಾರ್ಥಿಗಳು ಪ್ರವೇಶ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಅರ್ಹತೆಯ ಆಧಾರದ ಮೇಲೆ, ಹಾಗೂ ಯಾವ ಗುಂಪಿನ ಸ್ಥಾನಗಳು ಖಾಲಿ ಇರುವವೋ ಆ ಗುಂಪಿನ, ಹೆಚ್ಚು ಅಂಕ ಪಡೆದ ವಿಧ್ಯಾರ್ಥಿಗಳನ್ನು ಆಯ್ಕೆ ಮಾಡಿ, ಪ್ರವೇಶಾತಿಗೆ ಅವಕಾಶ ಮಾಡಿ ಕೊಡುವ ವ್ಯವಸ್ಥೆ ಆಗಿದೆ..
ಅದಲ್ಲದೇ ಪೌರ ಕಾರ್ಮಿಕ, ಅನಾಥ, ಆದಿವಾಸಿ, ಇತರ ವಿಶೇಷ ವರ್ಗದಲ್ಲಿ ಬರುವ ವಿದ್ಯಾರ್ಥಿಗಳಿಗಾಗಿ ಕೆಲ ಸ್ಥಾನ ಮೀಸಲಿಟ್ಟು, ಅಂತಹ ವರ್ಗಕ್ಕೂ ಪ್ರವೇಶಾತಿ ನೀಡಿ ನ್ಯಾಯ ಒದಗಿಸಲಾಗಿದೆ..

ಎಸ್, ಎಸ್ಟಿ, ಒಬಿಸಿ, ಸ್ತ್ರೀ, ಪುರುಷ ಎಂಬ ವರ್ಗಗಳಲ್ಲಿ ಖಾಲಿಯಿರುವ ಒಟ್ಟು 175 ಸ್ಥಾನಗಳನ್ನು ತುಂಬಿಕೊಳ್ಳುವ ಮೂಲಕ, ಇಂದು ಬಹುದಿನಗಳ ಬಾಕಿಯಿರುವ ಕಾರ್ಯಕ್ಕೆ ತೆರೆ ಎಳೆದಂತಾಗಿದ್ದು, ಪ್ರವೇಶಾತಿ ಪಡೆದ ವಿಧ್ಯಾರ್ಥಿ ಹಾಗೂ ಅವರ ಪಾಲಕರ ಮುಖದಲ್ಲಿಯ ಮಂದಹಾಸ, ಇಲಾಖೆ ಪಟ್ಟಿರುವ ಶ್ರಮಕ್ಕೆ ಸಾರ್ಥಕ ಎನ್ನುವಂತಿತ್ತು..
ಜನಪ್ರತಿನಿಧಿಗಳು, ಅವರ ಆಪ್ತರು, ಬೆಂಬಲಿಗರು, ಸಂಘ
ಸಂಸ್ಥೆಗಳ ಪದಾಧಿಕಾರಿಗಳು, ಸಮಾಜ ಸೇವಕರು, ಇತರ ವರ್ಗದ ಪ್ರಭಾವಿಗಳು ಎಲ್ಲರೂ ತಮ್ಮ ತಮ್ಮ ಅಭ್ಯರ್ಥಿಗಳ ಪ್ರವೇಶಾತಿಗಾಗಿ ಶಿಪಾರಸ್ಸು ಮಾಡಿದ್ದು, ಕೆಲಕಾಲ ಅಧಿಕಾರಿಗಳು ಒತ್ತಡದ ವಾತಾವರಣವನ್ನು ಎದುರಿಸಿ, ಕೊನೆಗೆ ಅರ್ಹ ವಿಧ್ಯಾರ್ಥಿಗಳ ಪರವಾಗಿ ಪ್ರವೇಶಾತಿ
ಪ್ರಕ್ರಿಯೆಯನ್ನು ಮಾಡಿದ್ದರಿಂದ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ..

ಮೆರಿಟ್ ಲಿಸ್ಟಿನಲ್ಲಿ ಇರುವಂತ ವಿಧ್ಯಾರ್ಥಿಗಳಿಗೆ ಮುಂಚೆಯೇ ಕರೆ ಮಾಡಿ ತಿಳಿಸಿದ್ದರಿಂದ, ವರ್ಗಾವಣೆ, ಪ್ರವೇಶಾತಿಗಾಗಿ ವಿಶೇಷ ವ್ಯವಸ್ಥೆ ಕಲ್ಪಿಸಿದ್ದರಿಂದ ಎಲ್ಲಾ ವಿಧ್ಯಾರ್ಥಿ ಹಾಗೂ ಪಾಲಕರು ಯಾವುದೇ ಗೊಂದಲವಿಲ್ಲದೇ ತಮ್ಮ ಪ್ರವೇಶಾತಿ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ..
ಈ ಸಮಾಲೋಚನೆಯ ವರ್ಗಾವಣೆ ಹಾಗೂ ಪ್ರವೇಶಾತಿಯ ಪ್ರಕ್ರಿಯೆಯಲ್ಲಿ ಇಲಾಖೆಯ ಅಧಿಕಾರಿಗಳೊಂದಿಗೆ, ಇಲಾಖೆಯ ಸಿಬ್ಬಂದಿ ಕೂಡಾ ಹಾಜರಿದ್ದು, ಅತ್ಯಂತ ವ್ಯವಸ್ಥಿತವಾಗಿ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ..
ವರದಿ ಪ್ರಕಾಶ ಕುರಗುಂದ..