ಮೂರು ತಿಂಗಳಿಂದ ಬರದ ಗೃಹಲಕ್ಷ್ಮಿ ಹಣ…

ಮೂರು ತಿಂಗಳಿಂದ ಬರದ ಗೃಹಲಕ್ಷ್ಮಿ ಹಣ..

ಗೃಹಲಕ್ಷ್ಮಿ ಹಣ ಕೊಡಿ ಇಲ್ಲಾಂದ್ರೆ ಮನೆಗೆ ಹೋಗಿ..

ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿ..

ಅಥಣಿ : ರಾಜ್ಯ ಸರ್ಕಾರ ದಿವಾಳಿಯಾಗಿದೆ ಗ್ಯಾರಂಟಿ ಯೋಜನೆಗಳನ್ನು ಜನತೆಗೆ ಮುಟ್ಟಿಸಲು ವರ್ಷಕ್ಕೆ 65 ಸಾವಿರ ಕೋಟಿ ರೂ. ಹಣ ಬೇಕು, 2 ಸಾವಿರ ಗೃಹಲಕ್ಷ್ಮೀ ಯೋಜನೆಯ ಹಣ ಕೂಡ 3 ತಿಂಗಳಿನಿಂದ ಬರುತ್ತಿಲ್ಲಾ. ಭಾಗ್ಯದ ಲಕ್ಷ್ಮಿ, ಲಕ್ಷ್ಮಿ ಅಕ್ಕಾ ಬೆಳಗಾವಿಯಲ್ಲೆ ಕೂತಿದ್ದಾರೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಚಿವೆ ಹೆಬ್ಬಾಳಕರ ವಿರುದ್ದ ಕಿಡಿ ಕಾರಿದರು.

ಜಿಲ್ಲೆಯ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು “ಅಕ್ಕಾ ರೊಕ್ಕಾ ಕೊಡವ್ವಾ ಇಲ್ಲಾಂದ್ರೆ ಮನೆಗೆ ಹೋಗವ್ವಾ” ಎಂದು ಹೋರಾಟ ಶುರು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮುಡಾ ಹಗರಣ ಕುರಿತು ಬಿಜೆಪಿಯ ಹೋರಾಟದ ವಿಚಾರದಲ್ಲಿ ಸ್ವಪಕ್ಷೀಯ ನಾಯಕರ ವಿರುದ್ದವೆ ಯತ್ನಾಳ ಕಿಡಿಕಾರಿ ಮಾತನಾಡಿ, ವಿಜಯೇಂದ್ರ ಮುಡಾ ಕುರಿತು ಹೋರಾಟ ಮಾಡುತ್ತಿದ್ದಾರೆ ಡಿ.ಕೆ.ಶಿವಕುಮಾರ್ ಆದೇಶದಂತೆ ವಿಜಯೇಂದ್ರ ಪಾದಯಾತ್ರೆ ಮಾಡುತ್ತಿದ್ದಾರೆ, ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿ ಡಿ.ಕೆ. ಶಿವಕುಮಾರ್ ಅವರನ್ನ ಮುಖ್ಯಮಂತ್ರಿ ಮಾಡಲು ಹೋರಾಟ ಮಾಡುತ್ತಿದ್ದಾರೆ ಇದನ್ನು ಬಹಿರಂಗ ಪಡಿಸಬೇಕೆಂದು ಆಗ್ರಹಿಸಿದರು.

ಸಿದ್ದರಾಮಯ್ಯರನ್ನು ಅಧಿಕಾರದಿಂದ ಕೆಳಗೆ ಇಳಿಸಲು ಈ ಪಾದಯಾತ್ರೆ ನಡೆಯುತ್ತಿದೆ. ಪಾದಯಾತ್ರೆಯು ಹೊಂದಾಣಿಕೆಯ ರಾಜಕಾರಣವಾಗಿದೆ ಡಿ.ಕೆ.ಶಿವಕುಮಾರ ಅವರ ಉಪಕಾರ ತೀರಿಸಲು ಈ ಪಾದಯಾತ್ರೆಯ ನಾಟಕವಾಡುತ್ತಿದ್ದಾರೆಂದು ಗಂಭೀರವಾಗಿ ಆರೋಪಿಸಿದರು.

ಇನ್ನೂ ಬಳ್ಳಾರಿಗೆ ಪಾದಯಾತ್ರೆ ವಿಚಾರವಾಗಿ ಮಾತನಾಡಿದ ಅವರು, ಕೇಂದ್ರದಿಂದ ಅನುಮತಿ ಪಡೆದು ಎಲ್ಲಿಂದ ಪಾದಯಾತ್ರೆ ಆರಂಭಿಸಬೇಕು ಅನ್ನೊಂದು ತೀರ್ಮಾನ ಮಾಡಬೇಕಾಗಿದೆ ಎಂದರಲ್ಲದೆ ವಾಲ್ಮೀಕಿ ಹಗರಣ ದೊಡ್ಡ ಹಗರಣ, ಸಮುದಾಯದ ಹಣ ನುಂಗಿದ್ದಾರೆ. ಯಾವುದೆ ಹೊಂದಾಣಿಕೆ ರಾಜಕಾರಣ ಮಾಡದೇ ನಾವು ಹೋರಾಟ ಮಾಡುತ್ತಿದ್ದೇವೆ ಎಂದರು.

ವರದಿ ಪ್ರಕಾಶ್ ಬಸಪ್ಪ ಕುರಗುಂದ..