ಮೃಣಾಲ್ ಹೆಬ್ಬಾಳ್ಕರ್ ಮನೆಗೆ ಅರಣ್ಯಾಧಿಕಾರಿಗಳ ಭೇಟಿ, ಪರಿಶೀಲನೆ..
ಬೆಳಗಾವಿ : ರಾಜ್ಯದಲ್ಲಿ ಇತ್ತೀಚೆಗೆ ರಾಷ್ಟ್ರೀಯ ಪ್ರಾಣಿ ಹುಲಿಯ ಉಗುರಿನ ಸುದ್ದಿಯೇ ಎಲ್ಲಾ ಕಡೆಗೆ ಪ್ರಚಲಿತವಾಗಿದ್ದು, ಬೆಳಗಾವಿಯಲ್ಲಿಯೂ ಕೂಡಾ ಅರಣ್ಯ ಅಧಿಕಾರಿಗಳು ಈ ವಿಷಯದಲ್ಲಿ ಕಾರ್ಯಪ್ರವರ್ತರಾಗಿದ್ದರೆ..
ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್ ಅವರು, ಹುಲಿ ಉಗುರು ಹೋಲುವ ಪೆಂಡೆಂಟ್ ಧರಿಸಿರುವ ಫೋಟೋಗಳು ಮಾಧ್ಯಮಗಳಲ್ಲಿ ಪ್ರಕಟವಾದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮೃಣಾಲ್ ಹೆಬ್ಬಾಳಕರ್ ಅವರ ಮನೆಗೆ ಇಂದು ಶುಕ್ರವಾರ ಆಗಮಿಸಿದ್ದರು.
ಈ ವೇಳೆ ಆ ಪೆಂಡೆಂಟ್ ನ್ನು ಮೃಣಾಲ್ ಅವರು ಅಧಿಕಾರಿಗಳಿಗೆ ಹಸ್ತಾಂತರಿಸಿದ್ದು, ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಇನ್ನು ಹೆಚ್ಚಿನ ಮಾಹಿತಿ ಸಿಕ್ಕಲ್ಲಿ, ಅದರ ಬಗ್ಗೆ ತನಿಖೆ ಮಾಡಿ, ಯಾರಾದರೂ ತಪ್ಪು ಮಾಡಿದ್ದು ಕಂಡು ಬಂದರೆ ಅಂತವರ ಮೇಲೆ ಕ್ರಮ ಕೈಗೊಳ್ಳುವ ಕಾರ್ಯ ಮಾಡುತ್ತೇವೆ ಎಂಬ ಮಾಹಿತಿ ಅಧಿಕಾರಿ ಮೂಲದಿಂದ ಬಂದಿದೆ..
ವರದಿ ಪ್ರಕಾಶ ಕುರಗುಂದ..