ವೃದ್ಧೆಯೊಬ್ಬರ, ಮೃತ ಮಗನ ಅಂತ್ಯ ಸಂಸ್ಕಾರದ ನೆರವೇರಿಕೆ..
ಮೃತ್ಯುವಿನಲ್ಲಿ ಮಾನವೀಯತೆ ಮೆರೆದ “ಯಂಗ ಬೆಳಗಾವಿ ಫೌಂಡೇಶನ್”..
ಬೆಳಗಾವಿ: ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಶನಿವಾರ ಅನಾರೋಗ್ಯದಿಂದ ಸವದತ್ತಿ ತಾಲೂಕಿನ ಮರಕುಂಬಿ ಗ್ರಾಮದ ವಿಶ್ವನಾಥ ಗುರಕ್ಕನವರ ಎಂಬ ಯುವಕ ಮೃತಪಟ್ಟಿದ್ದು, ಆತನ ವೃದ್ದ ತಾಯಿ ತನ್ನ ಮಗನನ್ನು ಕಳೆದುಕೊಂಡ ನೋವಲ್ಲಿ ಹಾಗೂ ಮೃತ ಮಗನ ಅಂತ್ಯ ಸಂಸ್ಕಾರ ಮಾಡಲು ಅನಕೂಲವಿಲ್ಲದ ಪರಿಸ್ಥಿತಿಯಲ್ಲಿ ಸಂಕಟ ಪಡುವಂತಾಗಿತ್ತು..
ಆಗ ಸುದ್ದಿತಿಳಿದ ಬೆಳಗಾವಿಯ ಸಮಾಜ ಸೇವಕರಾದ ವಿಜಯ ಮೋರೆ ಅವರ ಸಾರಥ್ಯದಲ್ಲಿರುವ “ಯಂಗ್ ಬೆಳಗಾವಿ ಫೌಂಡೇಶನ್” ಎಂಬ ಸಂಸ್ಥೆಯು ಅಂತ್ಯಸಂಸ್ಕಾರಕ್ಕಾಗಿ ಹೆಣಗಾಡುತ್ತಿದ್ದ ತಾಯಿಗೆ ಸಹಾಯ ಮಾಡಿ ಮಾನವೀಯತೆ ಮೆರೆದಿದೆ..

ಮಗ ವಿಶ್ವನಾಥನ (34) ಸಾವಿನ ಸುದ್ದಿ ತಿಳಿದ ತಾಯಿಯು ಆಸ್ಪತ್ರೆಯ ಸಿಬ್ಬಂದಿ ನೆರವಿನಿಂದ ಅಂತ್ಯ ಸಂಸ್ಕಾರಕ್ಕೆ ಸಹಾಯ ಮಾಡುವಂತೆ ಮನವಿ ಮಾಡಿದ್ದರು, ಆಗ ಯಂಗ್ ಬೆಳಗಾವಿ ಫೌಂಡೇಶನ್ ನೆರವಿಗೆ ಬಂದಿದ್ದು, ಮಗನನ್ನು ಕಳೆದುಕೊಂಡು ನೋವಿನಲ್ಲಿದ್ದ ಅಜ್ಜಿಗೆ ಸಾಂತ್ವನ ಹೇಳಲು ನಿಮ್ಮೊಂದಿಗಿದ್ದೇವೆ, ಮುಂದೆ ನಿಂತು ನಿಮ್ಮ ಮಗನ ಅಂತಿಮ ಸಂಸ್ಕಾರ ಮಾಡುತ್ತೇವೆ ಎಂದು, ಅಂತ್ಯ ಸಂಸ್ಕಾರ ಮಾಡಿ, ಅಜ್ಜಿಯ ದುಃಖದಲ್ಲಿ ಭಾಗಿಯಾಗಿದ್ದಾರೆ..
ಯಂಗ್ ಬೆಳಗಾಂ ಪ್ರತಿಷ್ಠಾನದ ಯುವಕರು ಮಹಾನಗರ ಪಾಲಿಕೆಯ ಆಂಬ್ಯುಲೆನ್ಸ್ನಲ್ಲಿ ಮೃತದೇಹವನ್ನು ಸದಾಶಿವನಗರದ ಸ್ಮಶಾನಕ್ಕೆ ಕೊಂಡೊಯ್ಯುವ ಮೂಲಕ ವಿಧಿವಿಧಾನಗಳನ್ನು ನೆರವೇರಿಸಿದರು.

ನಂತರ ಮೃತ ದೇಹಕ್ಕೆ ತಾವೇ ಸ್ವತಃ ಅಗ್ನಿಸ್ಪರ್ಶ ಮಾಡಿ ಮಾದರಿಯಾದರು, ಈ ವೇಳೆ ಮೃತ ವಿಶ್ವನಾಥ್ ತಾಯಿ ಮಗನನ್ನು ನೆನೆದು ಕಣ್ಣೀರಿಟ್ಟಿದ್ದು, “ಯಂಗ್ ಬೆಳಗಾವಿ ಫೌಂಡೇಶನ್” ಯುವಕರ ಈ ಮಾನವೀಯ ಸಹಕಾರ ನೆನೆದು ಕೃತಜ್ಞತೆ ತಿಳಿಸಿದ್ದರು..
ವರದಿ ಪ್ರಕಾಶ ಕುರಗುಂದ.