ಮೇ 17ರಿಂದ ಮತ್ತೆ ಐಪಿಎಲ್ ಪುನರಾರಂಭ..

ಮೇ 17ರಿಂದ ಮತ್ತೆ ಐಪಿಎಲ್ ಪುನರಾರಂಭ..

ಮೊದಲ ಪಂದ್ಯದಲ್ಲಿ ಆರ್ಸಿಬಿ ಮತ್ತು ಕೆಕೆಆರ್ ಮುಖಾಮುಖಿ..

ಜೂನ್ 3ಕ್ಕೆ ಫೈನಲ್ ಪಂದ್ಯ..

ಬೆಳಗಾವಿ : ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧದ ಹಿನ್ನೆಲೆಯಲ್ಲಿ ಕಳೆದ ಶುಕ್ರವಾರದಿಂದ ಸ್ಥಗಿತಗೊಂಡ ಐಪಿಎಲ್ ಪಂದ್ಯಾವಳಿಗಳನ್ನು ಮತ್ತೆ ಮೇ 17ರಿಂದ ಪ್ರಾರಂಭ ಮಾಡಲಾಗುವದು ಎಂದು ಬಿಸಿಸಿಐ ಐಪಿಎಲ್ 2025ರ ಬಗೆಗಿನ ಪರಿಸ್ಕೃತ ಮಾಹಿತಿಯನ್ನು ಹಂಚಿಕೊಂಡಿದೆ.

ಆರು ನಗರಗಳಲ್ಲಿ 17 ಪಂದ್ಯಗಳನ್ನು ನಡೆಸುವ ಯೋಜನೆ ಇದ್ದು, ಇದರಲ್ಲಿ 13 ಲೀಗ್ ಪಂದ್ಯಗಳು ಹಾಗೂ 4 ಪ್ಲೇಆಫ್ ಪಂದ್ಯಗಳು ಒಳಗೊಂಡಿವೆ, ಕೆಲವೊಂದು ಕಡೆ ಒಂದೇ ದಿನ ಎರಡು ಮ್ಯಾಚ್ ಆಡಿಸಲಿದ್ದು, ಜೈಪುರ್ ಬೆಂಗಳೂರು ಹಾಗೂ ಇತರೆ ಆರು ನಗರಗಳಲ್ಲಿ ಲೀಗ್ ಮ್ಯಾಚಗಳು ನಡೆಯಲಿದ್ದು, ಪ್ಲೇ ಆಪ್ ಪಂದ್ಯಗಳಿಗೆ ಸ್ಥಳ ನಿಗದಿ ಆಗಿಲ್ಲ.

ಯುದ್ಧದ ಟೆನ್ಸನ್ ಅಲ್ಲಿ ಇದ್ದ ಕ್ರಿಕೆಟ್ ಹಾಗೂ ಐಪಿಎಲ್ ಅಭಿಮಾನಿಗಳಿಗೆ, ಯುದ್ಧ ವಿರಾಮದ ನಂತರ ಮತ್ತೆ ತಮ್ಮ ಇಷ್ಟದ ಐಪಿಎಲ್ ಮತ್ತೆ ಶುರುವಾಗಿ, ನೋಡುವುದು ಸಂತಸದ ವಿಷಯವಾಗಿದೆ, ಶನಿವಾರ ದಿನಾಂಕ 17 ರಂದು ಆರ್ಸಿಬಿ ಮತ್ತು ಕೆಕೆಆರ್ ಪಂದ್ಯ ನಡೆಯಲಿದ್ದು, ಲೀಗ್ ಹಂತದ ಕೊನೆಯಲ್ಲಿ ಆರ್ಸಿಬಿ ಮತ್ತು ಎಲ್ಎಸ್ಜಿ ಪಂದ್ಯ ನಡೆಯಲಿವೆ ಎಂಬ ಮಾಹಿತಿಯಿದೆ..

ವರದಿ ಪ್ರಕಾಶ್ ಬಸಪ್ಪ ಕುರಗುಂದ..