ಮೋದಿ ಅಲೆ ಮಾಯವಾಗಿ, ಕಾಂಗ್ರೆಸ್ಸಿನ ಗ್ಯಾರೆಂಟಿಗಳ ಅಲೆ ಜನಮನದಲ್ಲಿವೆ..
ಕಾಂಗ್ರೆಸ್ಸಿನಲ್ಲಿಯೂ ರಾಮನಿದ್ದಾನೆ…
ಸಚಿವ ಸತೀಶ ಜಾರಕಿಹೊಳಿ..
ಬೆಳಗಾವಿ : ಸೋಮವಾರ ನಗರದ ಶಿವಬಸವ ನಗರದ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಲೋಕಸಭಾ ಚುನಾವಣೆಯಲ್ಲಿ ಯಾವ ಮೋದಿ ಅಲೆಯೂ ಪರಿಣಾಮ ಬೀರುವುದಿಲ್ಲ, ಏನೇ ಇದ್ದರೂ ರಾಜ್ಯ ಸರ್ಕಾರ ನೀಡಿದ ಜನಪರ ಯೋಜನೆಗಳು ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ಪಲಿತಾಂಶ ತರುತ್ತವೆ ಎಂದಿದ್ದಾರೆ..

ಲೋಕಸಭಾ ಚುನಾವಣೆಯಲ್ಲಿ ಮೋದಿ ಅಲೆ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅದು ಬಿಜೆಪಿಯ ಸ್ಟ್ಯಾಟರ್ಜಿ, ಮೋದಿ ಮತ್ತು ರಾಮ ಇಬ್ಬರು ಅವರ ಕಡೆ ಇದ್ದಾರೆ, ನಾವು ಮಾಡಿದ ಕೆಲಸದ ಅಸ್ತ್ರ ನಾವು ಬಳಸುತ್ತೇವೆ, ಅವರು ಏನೇ ಮಾಡಿದರೂ ನಾವು ಪ್ರತಿಯಾಗಿ ಮಾಡಬೇಕಾಗುತ್ತದೆ ಅದು ರಾಜಕೀಯ ಆಟ ಎಂದರು..
ಇನ್ನು ನಾಲ್ಕು ಕ್ಷೇತ್ರಗಳ ಸಭೆಗಳು ಬಾಕಿ ಇವೆ, ಶಾಸಕರು, ಪದಾಧಿಕಾರಿಗಳು ಕಾರ್ಯಕರ್ತರು ಎಲ್ಲರೂ ತಮ್ಮ ಅಭಿಪ್ರಾಯ ತಿಳಿಸುತ್ತಿದ್ದಾರೆ, ಅದಾದ ಮೇಲೆ ಅಭ್ಯರ್ಥಿಗಳ ಬಗ್ಗೆ ಘೋಷಣೆ ಮಾಡುತ್ತೇವೆ, ಕಾರ್ಯಕರ್ತರಿಗೆ ಅಥವಾ ಕುಟುಂಬದವರಿಗೆ ಯಾರಿಗೆ ಟಿಕೆಟ್ ನೀಡಿದರೂ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ ಎಂಬ ಅಭಿಪ್ರಾಯ ಬಂದಿದೆ..

ರಮೇಶ ಕತ್ತಿ ಅವರು ಪಕ್ಷ ಸಿದ್ದಾಂತ ಒಪ್ಪಿಕೊಂಡು ಬಂದರೆ ಯಾವುದೇ ತೊಂದರೆ ಇಲ್ಲಾ, ಇನ್ನು ಟಿಕೆಟ್ ವಿಚಾರಕ್ಕೆ ಬಂದರೆ ಅದನ್ನು ವರಿಷ್ಠರು ನೋಡಿಕೊಳ್ಳುತ್ತಾರೆ, ಬಿಜೆಪಿ ಅಭ್ಯರ್ಥಿಯ ಘೋಷಣೆಗೆ ಕಾಯುವುದಿಲ್ಲ, ನಮ್ಮ ಅಭ್ಯರ್ಥಿಯನ್ನು ಸರಿಯಾದ ಸಮಯಕ್ಕೆ ಘೋಷಿಸುತ್ತೇವೆ.

ಕಳೆದ ವಿಧಾನ ಸಭೆ ಚುನಾವಣಾ ಸಂದರ್ಭಲ್ಲಿ ಇದ್ದಂತೆ ಈಗಲೂ ಬಿಜೆಪಿಯಲ್ಲಿ ಹೊಂದಾಣಿಕೆಯ ಸಮಸ್ಯ ಇದೆ, ಬಿಜೆಪಿಯಲ್ಲಿ ಬಂಡಾಯವೆದ್ದು, ನಮ್ಮ ಕಡೆ ಬರುವವರಿಗೆ ಸ್ವಾಗತ, ರಾಮ ಬರೀ ಬಿಜೆಪಿಗೆ ಸಿಮಿತವಲ್ಲ, ಕಾಂಗ್ರೆಸ್ಸಿನಲ್ಲಿಯೂ ರಾಮನಿದ್ದಾನೆ, ಅದನ್ನು ಅತಿಯಾಗಿ ರಾಜಕೀಯವಾಗಿ ಬಳಸಬಾರದು ಎಂದರು..
ವರದಿ ಪ್ರಕಾಶ ಕುರಗುಂದ..