ಮೋಹಕತಾರೆ ರಮ್ಯಾಗೆ ಅಂತರಾಷ್ಟ್ರೀಯ ಕನ್ನಡ ಕಣ್ಮಣಿ ಪ್ರಶಸ್ತಿ…

ಮೋಹಕತಾರೆ ರಮ್ಯಾಗೆ ಅಂತರಾಷ್ಟ್ರೀಯ ಕನ್ನಡ ಕಣ್ಮಣಿ ಪ್ರಶಸ್ತಿ…

ನಾನು ಏನೇ ಆಗಿದ್ದರು ಅಣ್ಣಾವ್ರ ಮನೆತನದಿಂದ..

ಶಿವಣ್ಣ ಗೀತಕ್ಕ ಜೋಡಿ ನೋಡಿ, ಮದುವೆ ಆಗೋ ಆಸೆ ಆಗಿದೆ..

ಬೆಳಗಾವಿ : ಇವತ್ತು ನಾನು ಒಬ್ಬ ನಟಿಯಾಗಿ ವಿದೇಶದಲ್ಲಿ ಬಂದು ಇಂತಹ ಪ್ರಶಸ್ತಿ ಪಡೆಯುತ್ತಿದ್ದೇನೆ ಎಂದರೆ ಅದಕ್ಕೆ ಅಣ್ಣಾವ್ರ ಅಂದರೆ ಡಾ ರಾಜಕುಮಾರ ಕುಟುಂಬವೇ ಕಾರಣ, ನಾನು ಏನೇ ಸಾಧನೆ ಮಾಡಿದರು, ಹೆಸರು ಪಡೆದರೂ ಅದು ಆ ಕುಟುಂಬಕ್ಕೆ ಸಲ್ಲುತ್ತದೆ, ಅಪ್ಪು ಅವರ ಜೊತೆ ನಾಯಕಿಯಾಗಿ ನನಗೆ ಅವಕಾಶ ನೀಡಿದ್ದರಿಂದ ನಾನು ಇಂದು ಈ ಸ್ಥಾನದಲ್ಲಿರುವೆ ಎಂದು ಕನ್ನಡದ ಮೋಹಕ ತಾರೆ ರಮ್ಯಾ ಹೇಳಿದ್ದಾರೆ..

ಶನಿವಾರ ದಿನಾಂಕ 08/11/2025ರಂದು ದುಬೈನ ಕನ್ನಡಿಗರ ಕೂಟ ಹಾಗೂ ಗಲ್ಪ್ ಕನ್ನಡ ಮೂವೀಸ್ ಸಹಯೋಗದಲ್ಲಿ ಜರುಗಿದ 69ನೇ ಕನ್ನಡ ರಾಜ್ಯೋತ್ಸವದ ಆಚರಣೆ ಸಂದರ್ಭದಲ್ಲಿ, “ಅಂತಾರಾಷ್ಟ್ರೀಯ ಕನ್ನಡದ ಕಣ್ಮಣಿ 2025” ಪ್ರಶಸ್ತಿ ಪಡೆದ ನಂತರ ಸ್ಯಾಂಡಲವುಡ್ ಕ್ವಿನ ರಮ್ಯಾ ಅವರು ಈ ಮೇಲಿಂನಂತೆ ಹೇಳಿದ್ದಾರೆ..

ದುಬೈನ ಕನ್ನಡ ಕೂಟದ ಹಾಗೂ ಗಲ್ಪ್ ಕನ್ನಡ ಮೂವೀಸ್ ತಂಡದ ಪಧಾಧಿಕಾರಿಗಳಾದ ರವಿ ಕಣ್ಣನ ರೋನಾಲ್ಡ್ ಕೋಲಾಸೋ ಹಾಗೂ ಆರತಿ ಕೃಷ್ಣ ಅವರು ರಮ್ಯಾ ಅವರಿಗೆ ಈ ಪ್ರಶಸ್ತಿ ಪ್ರಧಾನ ಮಾಡಿದ್ದು, ಮೊದಲಿಗೆ ದುಬೈ ಕನ್ನಡಿಗರಿಗೆ ಧನ್ಯವಾದ ಅರ್ಪಿಸುತ್ತ ಮಾತು ಆರಂಭಿಸಿದ ರಮ್ಯಾ ಅವರು, ಶಿವಣ್ಣ ಹಾಗೂ ಗೀತಕ್ಕ ಅವರ ಸಮ್ಮುಖದಲ್ಲಿ ಪ್ರಶಸ್ತಿ ಪಡೆದಿದ್ದು ಸಂತಸ ತಂದಿದೆ ಯಾಕಂದ್ರೆ ಇಂದು ನಾನು ಈ ವೇದಿಕೆ ಮೇಲೆ ನಿಂತುಕೊಳ್ಳಲು ಕಾರಣ ಡಾ ರಾಜಕುಮಾರ ಫ್ಯಾಮಿಲಿ ಅವರು ಎಂದಿದ್ದಾರೆ..

ನನಗೆ ಅಪ್ಪು ಅವರ ಜೊತೆ ಅಭಿ ಸಿನಿಮಾದಲ್ಲಿ ಅವಕಾಶ ನೀಡಿದ್ದರಿಂದ ನಾನಿಲ್ಲಿ ಇದೀನಿ, ಇಂದು ನಾನೇನೇ ಸಾಧನೆ ಮಾಡಿದ್ದರು ಅದು ಆ ಕುಟುಂಬಕ್ಕೆ ಸಲ್ಲುತ್ತದೆ, ನಿಮ್ಮ ಕನ್ನಡದ ಪ್ರೀತಿಗೆ ನಾನು ಸದಾ ಋಣಿ, ದುಬೈನಲ್ಲಿ ಇಷ್ಟು ಅಭಿಮಾನದಿಂದ ಕನ್ನಡದ ಹಬ್ಬವನ್ನು ಆಚರಣೆ ಮಾಡುತ್ತಿರುವದು ತುಂಬಾ ಖುಷಿ ನೀಡಿದೆ, ಅಭಿಮಾನಿಗಳೊಂದಿದೆ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂದು ಸಂಭ್ರಮಿಸಿದರು..

ನಂತರ ಅಭಿಮಾನಿಗಳ ಜೊತೆ ಸಂವಾದ ಮಾಡುವಾಗ ಮದುವೆ ಬಗ್ಗೆ ಮಾತನಾಡಿದ ರಮ್ಯಾ ಅವರು, ಮೊದಮೊದಲು ಕೆಲ ಮದುವೆಯಾದ ದಂಪತಿಗಳನ್ನು ಭೇಟಿ ಆದಾಗ ಸಿಂಗಲ್ ಆಗಿ ಇರೋದೇ ಒಳ್ಳೆಯದು ಎಂದು ಅನಿಸಿತ್ತು, ಆದರೆ ಶಿವಣ್ಣ ಹಾಗೂ ಗೀತಕ್ಕ ದಂಪತಿಗಳನ್ನು ನೋಡಿದಾಗ ಅವರ ಜೊತೆ ಮಾತನಾಡುತ್ತಾ ಕುಳಿತಾಗ ತಿಳಿಯಿತು, ಈ ರೀತಿಯಾದ ಸ್ನೇಹಮಯಿ, ಪರಸ್ಪರ ಕಾಳಜಿಯ ಗುಣವಿರುವ ಜೋಡಿಗಳನ್ನು ನೋಡಿ, ಇಂತಹ ಜೋಡಿ ಸಿಕ್ಕರೆ ನಾನು ಮದುವೆ ಆಗಬೇಕು ಎಂಬ ಆಸೆ ನನಗೆ ಮೂಡಿದೆ ಎಂದು ನಗುತ್ತಲೇ ಹೇಳಿದ್ದಾರೆ..

ವರದಿ ಪ್ರಕಾಶ ಬಿ ಕುರಗುಂದ..