ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ಡಾ ಸತೀಶ್ ಜಾರಕಿಹೊಳಿ ಕ್ರಿಕೆಟ್ ಪಂದ್ಯಾವಳಿ.
ನಾಲ್ಕನೇ ದಿನದ ಭರ್ಜರಿ ಆಟಕ್ಕೆ ಸಾಕ್ಷಿಯಾದ ಸರ್ದಾರ ಮೈದಾನ..
ಬೆಳಗಾವಿ : ನಗರದ ಸರ್ದಾರ ಮೈದಾನದಲ್ಲಿ ನಾಲ್ಕನೆಯ ದಿನವೂ ತನ್ನ ಭರ್ಜರಿ ಓಟವನ್ನು ಮುಂದುವರೆಸಿದ ಡಾ ಸತೀಶ್ ಜಾರಕಿಹೊಳಿ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಯು ದಿನದಿಂದ ದಿನಕ್ಕೆ ಕ್ರಿಕೆಟ್ ಆಸಕ್ತರನ್ನು ತನ್ನತ್ತ ಸೆಳೆಯುತ್ತಿದೆ.
ಒಟ್ಟು ನಲವತ್ತು ತಂಡಗಳು ಭಾಗಿಯಾದ ಈ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಗುರುವಾರ ನಾಲ್ಕನೆಯ ದಿನದಾಟದ ಕೊನೆಯಲ್ಲಿ ಹದಿನೇಳು ಪಂದ್ಯಗಳು ಮುಕ್ತಾಯಗೊಂಡಿದ್ದು, ಅತ್ಯಂತ ಉತ್ಸಾಹ ಹಾಗೂ ಕ್ರೀಡಾಸ್ಪೂರ್ತಿಯಿಂದ ಆಟಗಾರರು ತಮ್ಮ ಪ್ರದರ್ಶನ ನೀಡುತ್ತಿದ್ದಾರೆ.

ರಾಜ್ಯದ ರಾಜಧಾನಿ ಬೆಂಗಳೂರು, ಕಾರವಾರ, ಹುಬ್ಬಳ್ಳಿ, ಧಾರವಾಡ, ಬಿಜಾಪುರ, ಬಾಗಲಕೋಟೆ, ಕೊಪ್ಪಳ ಇನ್ನೂ ಮುಂತಾದ ಜಿಲ್ಲೆಗಳಿಂದ ಕ್ರಿಕೆಟ್ ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗಿಯಾಗಿದ್ದು, ಬೆಳಗಾವಿ ಜಿಲ್ಲೆಯ ಸುಮಾರು ಮೂವತ್ತು ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗಿಯಾಗಿವೆ ಎಂಬ ಮಾಹಿತಿಯಿದೆ.
ನಾಲ್ಕನೆಯ ದಿನದ ಪಂದ್ಯಾವಳಿ ವೀಕ್ಷಣೆಯಲ್ಲಿ ವೇದಿಕೆ ಮೇಲೆ ಬೆಳಗಾವಿ ಜಿಲ್ಲಾ ಪಂಚಾಯತಿಯ ಮುಖ್ಯ ಲೆಕ್ಕಾಧಿಕಾರಿಗಳಾದ ಪರಶುರಾಮ ದುಡಗುಂಟಿ, ಜಿಲ್ಲಾ ವಾಲ್ಮೀಕಿ ಸಮಾಜದ ಅಧ್ಯಕ್ಷರಾದ ರಾಜಶೇಖರ ತಳವಾರ, ಆಯೋಜಕಾರದ ಮೀಲಿಂದ ಬಾತಕಂಡೆ, ಶಿಕ್ಷಕರಾದ ಮಂಜುನಾಥ ದೇಗಾನಟ್ಟಿ, ಸಮಾಜ ಸೇವಕರಾದ ರವಿ ತಿಳಗಂಜಿ, ಪಂದ್ಯಾವಳಿ ವಿಶ್ಲೇಷಕರಾದ ಸಂತೋಷ ದೊಡ್ಡಮನಿ ಮತ್ತಿತರರು ಉಪಸ್ಥಿತರಿದ್ದರು..
ವರದಿ ಪ್ರಕಾಶ್ ಬಸಪ್ಪ ಕುರಗುಂದ.