ಯುವರಾಜ್ ಜಾಧವ ಅವರ 44ನೇ ಜನ್ಮ ದಿನಕ್ಕೆ ಸ್ನೇಹಿತರ ಶುಭಾಶಯ..
ಭವಿಷ್ಯದಲ್ಲಿ ಮತ್ತಷ್ಟು ಯಶಸ್ಸು, ಆಯಸ್ಸು, ಕೀರ್ತಿ, ಸ್ಥಾನಮಾನ ಸಿಗಲೆಂದು ಸ್ನೇಹಿತರ ಹಾರೈಕೆ..
ಬೆಳಗಾವಿ : ತಾಲೂಕಿನ ಜನಪ್ರಿಯ ವ್ಯಕ್ತಿತ್ವದ ಹಾಗೂ ಸದಾ ಜನಪರವಾದ ಕಾರ್ಯಗಳಲ್ಲಿ ಭಾಗಿಯಾಗಿ ಸಮಾಜ ಕಟ್ಟುವ ಕಾರ್ಯ ಮಾಡುತ್ತಿರುವ ಯುವ ಧುರಿಣರಾದ ಯುವರಾಜ ಜಾಧವ ಅವರ ಜನ್ಮ ದಿನವನ್ನು ಸ್ನೇಹಿತರು ಸಂತೋಷದಿಂದ ಆಚರಣೆ ಮಾಡಿದ್ದಾರೆ..
ಗುರುವಾರ ದಿನಾಂಕ 09/10/2025ರಂದು ನಗರದ ಖಾಸಗಿ ಹೋಟೆಲಿನಲ್ಲಿ ಬಿಜೆಪಿಯ ಬೆಳಗಾವಿ ಗ್ರಾಮೀಣ ಮಂಡಲದ ಅಧ್ಯಕ್ಷರಾದ, ಯುವ ನೇತಾರ ಯುವರಾಜ ಜಾಧವ ಅವರ 44ನೆಯ ಜನ್ಮದಿನವನ್ನು ಆತ್ಮೀಯತೆಯಿಂದ ಸರಳವಾಗಿ ಆಚರಣೆ ಮಾಡಿದ್ದಾರೆ.

ಬೆಳಗಾವಿ ಗ್ರಾಮೀಣ ಮತ ಕ್ಷೇತ್ರದಲ್ಲಿ ಸದಾ ಸಾರ್ವಜನಿಕರ ಸೇವೆಯಲ್ಲಿ ಹಾಗೂ ಅಭಿವೃದ್ಧಿಪರ ಕಾರ್ಯಗಳಲ್ಲಿ ಭಾಗಿಯಾಗಿರುವ ಯುವರಾಜ ಜಾಧವ ಅವರು ಉತ್ತಮ ಜನನಾಯಕರಾಗಿದ್ದು, ಬರುವ ದಿನಗಳಲ್ಲಿ ಬಿಜೆಪಿ ಪಕ್ಷದಿಂದ ಈ ಭಾಗದ ಶಾಸಕರಾಗಿ ಮತ್ತಷ್ಟು ಜನಸೇವೆ ಮಾಡುವಂತಾಗಲಿ ಎಂದು ಸ್ನೇಹಿತರೆಲ್ಲ ತುಂಬು ಹೃದಯದಿಂದ ಆಸಿಸಿದ್ದಾರೆ..

ಈ ಸಂದರ್ಭದಲ್ಲಿ ಡಿಎಸ್ಎಸ್ ಪ್ರಮುಖರಾದ ಸಿದ್ದಪ್ಪ ಕಾಂಬಳೆ, ಚಿತ್ರ ನಿರ್ಮಾಪಕರಾದ ಶೇಖರ್ ಕಾಲೇರಿ, ಬಿಜೆಪಿಯ ಬೆಳಗಾವಿ ಮಹಾನಗರ ಎಸ್ಟಿ ಮೋರ್ಚಾದ ಜನರಲ್ ಸೆಕ್ರೆಟರಿಯಾದ ಸಂತೋಷ್ ಚಿಕ್ಕಲದಿನ್ನಿ, ಖ್ಯಾತ ಉದ್ಯಮಿಗಳಾದ ವಿಠ್ಠಲ್ ಅಂಕಲಗಿ, ಸಮಾಜ ಸೇವಕರಾದ ಶಿವಾನಂದ ಸುಣಗಾರ, ನ್ಯಾಯವಾದಿಗಳಾದ ರವಿ ತಳ್ಳಿಮನಿ ಮತ್ತಿತರ ಸ್ನೇಹಿತರು ಭಾಗಿಯಾಗಿದ್ದರು..
ವರದಿ ಪ್ರಕಾಶ್ ಬಸಪ್ಪ ಕುರಗುಂದ..