ಯುವಸಮೂಹದ ಆದರ್ಶ ರವಿ ಡಿ ಚೆನ್ನಣ್ಣನವರ್ ಬೆಳಗಾವಿಯ ಬೇಟಿ…

ಯುವಸಮೂಹದ ಆದರ್ಶ ರವಿ ಡಿ ಚೆನ್ನಣ್ಣನವರ್ ಬೆಳಗಾವಿಯ ಬೇಟಿ..

ಸ್ನೇಹಿತ ಅಧಿಕಾರಿಯ ಮನೆಯಲ್ಲಿ ಸ್ನೇಹಭೋಜನ..

ಬೆಳಗಾವಿಯ ನೆನಪು ಮೆಲಕು ಹಾಕುತ್ತಾ, ಗೌರವ ಸ್ವೀಕರಿಸಿದ ಮಾದರಿ ವ್ಯಕ್ತಿತ್ವ..

ಬೆಳಗಾವಿ : ಗುರುವಾರ ದಿನಾಂಕ 06/06/2024 ರಂದು, ಮದ್ಯಾಹ್ನ ಕುಂದಾನಗರಿ ಬೆಳಗಾವಿಗೆ, ಕನ್ನಡ ನಾಡಿನ ಹೆಮ್ಮೆಯ ಸುಪುತ್ರ, ಯುವಕರ ಆದರ್ಶ, ಬಡವರ ಸ್ಪೂರ್ತಿ, ಸಮಸ್ಯೆಗಳಿಗೆ ಸವಾಲೋಡ್ಡಿ ಸಾಧನೆಗೈದ ಸಹೃದಯದ ಸರಳಜೀವಿ, ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್ ಅವರು ಬೆಳಗಾವಿಯ ತಮ್ಮ ಸ್ನೇಹಿತ ಅಧಿಕಾರಿಯ ಮನೆಗೆ ಬೇಟಿ ನೀಡಿದ್ದಾರೆ..

ಇದೊಂದು ಖಾಸಗಿ ಬೇಟಿ ಆಗಿದ್ದು, ವಿಶ್ವೇಶ್ವರಯ್ಯ ನಗರದಲ್ಲಿ ಇರುವ, ಸರಳ ಸ್ನೇಹ ಜೀವಿ,ಕಾಳಜಿ ಕನಿಕರ ಗುಣದ, ಕೆಎಎಸ್ ಅಧಿಕಾರಿ ಪರಶುರಾಮ ದುಡಗುಂಟಿ ಅವರ ಮನೆಗೆ ಬೇಟಿ ನೀಡಿದ ರವಿ ಡಿ ಚನ್ನಣ್ಣನವರ್ ಅವರು, ಹಿಂದೆ ತಾವು ಬೆಳಗಾವಿಯಲ್ಲಿ 11 ತಿಂಗಳು ಕೆಲಸ ಮಾಡಿದ ನೆನಪನ್ನು ಮೆಲಕು ಹಾಕಿದರು..

ತಾವು ಕೂಡ ಹಿಂದೆ ಇದೇ ಮನೆಯಲ್ಲಿ ಇದ್ದಿದ್ದು, ಇಲ್ಲಿಯ ಜನರ ವಡನಾಟ, ಬೆಳಗಾವಿಯ ವಿಶೇಷತೆಗಳ ಬಗ್ಗೆ ಮಾತನಾಡಿದ ಅವರು, ಪರಶುರಾಮ ದುಡಗುಂಟಿ ಅವರ ಸ್ನೇಹದ ಆತಿಥ್ಯ, ಅವರು ಆಸಕ್ತಿಯಿಂದ ವಿಶೇಷತೆಗಳಿರುವ ಅವರ ಮನೆಯ ಬಗ್ಗೆ , ಅವರ ಸ್ನೆಹಬಳಗದ ಬಗ್ಗೆ, ಖುಷಿಯಾಗಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಲ್ಲದೇ, ಪ್ರತಿಯೊಬ್ಬರನ್ನೂ ಆತ್ಮೀಯವಾಗಿ ಪರಿಚಯ ಮಾಡಿಕೊಂಡದ್ದು ಅವರ ದೊಡ್ಡಗುಣ…

ಬಡತನದಲ್ಲಿ, ಸರ್ಕಾರಿ ಶಾಲೆಯಲ್ಲಿ ಓದಿ, ಕುಟುಂಬದ ಭಾರ, ಸಮಸ್ಯೆ ಎದುರಾದಾಗ ಹೊಲದಲ್ಲಿ ಕೆಲಸ ಮಾಡುತ್ತಾ, ಹೋಟೆಲುಗಳಲ್ಲಿ ಕೆಲಸ ಮಾಡುತ್ತಾ, ವಿಧ್ಯಾಭ್ಯಾಸ ಮಾಡಿ, ಮಧ್ಯದಲ್ಲಿ ಎದುರಾದ ಸಮಸ್ಯಗಳಿಂದ ಕಲಿಕೆಯನ್ನು ನಿಲ್ಲಿಸಿಬೀಡಬೇಕು ಎಂಬ ನಿರ್ಣಯಕ್ಕೆ ಬಂದಾಗ, ಗುರುಗಳು ಹಾಗೂ ಕೆಲ ಹಿರಿಯರ ಮಾರ್ಗದರ್ಶನ ಮತ್ತು ದಯೆಯಿಂದ ಮತ್ತೆ ಅಧ್ಯಯನ ಮಾಡಿ ಇಂದು ದೇಶವೇ ಮೆಚ್ಚುವಂತಹ ಅಧಿಕಾರಿಯಾಗಿ ಜನಸೇವೆ ಮಾಡುತ್ತಿರುವದು ಇಡೀ ನಾಡಿಗೆ ಹೆಮ್ಮೆ..

ರವಿ ಅವರು ಬಂದ ಸುದ್ದಿ ತಿಳಿದು, ಅವರನ್ನು ಬೇಟಿ ಆಗಳು ಬಂದ ನಗರದ ಅನೇಕ ವಿದ್ಯಾರ್ಥಿಗಳು, ಯುವಕರು, ವಸತಿ ನಿಲಯದ ವಿಧ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿ, ಕೆಲ ಸಂದೇಶ ನೀಡಿದರು, ಅವರು ವಿಧ್ಯಾರ್ಥಿ ಜೀವನನಲ್ಲಿ ಮಾಡಿದ ಕಠಿಣ ಪರಿಶ್ರಮ, ಸಾಮಾಜಿಕ ಅಸಮತೋಲನದ ಬಗ್ಗೆ ನಾವು ಹೇಗೆ ದ್ವನಿ ಎತ್ತಬೇಕು, ಪ್ರಯತ್ನಗಳ ಮೂಲಕ ಹೇಗೆ ಗುರಿ ಮುಟ್ಟಬೇಕು ಎಂಬ ವಿಚಾರಗಳನ್ನು ಹಂಚಿಕೊಂಡರು..

ಸೇರಿದಂತೆ ಎಲ್ಲರೊಂದಿಗೂ ಆತ್ಮೀಯತೆಯಿಂದ ಬೆರೆತ, ಸಾಧಕರ ಸ್ಪೂರ್ತಿ, ರವಿ ಡಿ ಚನ್ನಣ್ಣನವರ್ ಅವರು, ಪರಶುರಾಮ ದುಡಗುಂಟಿ ಅವರ ಸ್ನೇಹಸನ್ಮಾನ, ಸ್ನೇಹಭೋಜನ ಹಾಗೂ ಸಮಾನ ಮನಸ್ಕರ ಜೊತೆ ಕಳೆದ ಸುಂದರ ಸಮಯಕ್ಕೆ, ತುಂಬು ಹೃದಯದ ಮೆಚ್ಚುಗೆ ತಿಳಿಸಿದ ಅವರು, ಬೆಂಗಳೂರಿನ ತಮ್ಮ ಮನೆಗೂ ನೀವೆಲ್ಲರೂ ಖಂಡಿತ ಬರಲೇಬೇಕು ಎಂಬ ಕರೆಯನ್ನು ನೀಡಿದ್ದು ಅವರ ಆತ್ಮೀಯತೆಗೆ ಸಾಕ್ಷಿಯಾಗಿತ್ತು..

ವರದಿ ಪ್ರಕಾಶ್ ಬಸಪ್ಪ ಕುರಗುಂದ..