ಯುವ ಘಟಕದ ಜಿಲ್ಲಾ ಅಧ್ಯಕ್ಷರಾಗಿ ಚೇತನ ಅಂಗಡಿ ಆಯ್ಕೆ..

ಯುವ ಘಟಕದ ಜಿಲ್ಲಾ ಅಧ್ಯಕ್ಷರಾಗಿ ಚೇತನ ಅಂಗಡಿ ಆಯ್ಕೆ..

ವೀರಶೈವ ಲಿಂಗಾಯತ ಮಹಸಭವನ್ನು ಮತ್ತಷ್ಟು ಬಲಪಡಿಸುವ ಜವಾಬ್ದಾರಿ ಇದೆ..

ಚೇತನ ಅಂಗಡಿ, ಜಿಲ್ಲಾಧ್ಯಕ್ಷರು ವೀರಶೈವ ಲಿಂಗಾಯತ ಮಹಾಸಭಾ ಬೆಳಗಾವಿ..

ಬೆಳಗಾವಿ : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾವನ್ನು ಮತ್ತಷ್ಟು ಬಲಪಡಿಸುವ ಮಹತ್ತರ ಜವಾಬ್ದಾರಿಯನ್ನು ಸಮುದಾಯದ ಹಿರಿಯರು ನನಗೆ ನೀಡಿದ್ದು ಅದನ್ನು ಅತ್ಯಂತ ಯಶಸ್ವಿಯಾಗಿ ನಡೆಸುವ ಶತಪ್ರಯತ್ನ ಮಾಡುತ್ತೇನೆ ಎಂದು ಜಿಲ್ಲಾಧ್ಯಕ್ಷರಾಗಿ ಮರುನೇಮಕವಾದ ಚೇತನ ಅಂಗಡಿ ಅವರು ಹೇಳಿದ್ದಾರೆ.

ಕೆಲ ದಿನಗಳ ಹಿಂದೆಯಷ್ಟೇ ಲಿಂಗಾಯತ ಮಹಾಸಭೆಯು ಲಿಂಗಾಯತ ಮಹಾಭವನದಲ್ಲಿ ಯುವ ಘಟಕದ ಸಭೆಯನ್ನು ಆಹ್ವಾನ ಮಾಡಿತ್ತು, ಸಭಾ ಸದಸ್ಯರ ಸರ್ವ ಸಮ್ಮತದ ಒಪ್ಪಿಗೆಯ ಮೇರೆಗೆ ಯುವ ಧುರೀಣ ಚೇತನ ಅಂಗಡಿ ಅವರನ್ನು ಯುವ ಘಟಕದ ಜಿಲ್ಲಾ ಅಧ್ಯಕ್ಷರನ್ನಾಗಿ ಮರುನೇಮಕ ಮಾಡಲಾಯಿತು ಈ ಸಂದರ್ಭದಲ್ಲಿ ತಮ್ಮ ಜವಾಬ್ದಾರಿ ಕುರಿತು ಚೇತನ ಅಂಗಡಿ ಅವರು ಮೇಲಿನಂತೆ ಮಾತನಾಡಿದ್ದಾರೆ.

ಈ ವೇಳೆ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಅಧ್ಯಕ್ಷರಾದ ರತ್ನಪ್ರಭಾ ಬೆಲ್ಲದ ಅವರು ಮಾತನಾಡಿ, ಮುಂಬರುವ ದಿನಗಳಲ್ಲಿ ಎಲ್ಲಾ ತಾಲೂಕು ಘಟಕಗಳ ಯುವಕರನ್ನು ವಿಶ್ವಾಸಕ್ಕೆ ಪಡೆದುಕೊಂಡು, ಮಹಸಭೆಯನ್ನು ಬಲಪಡಿಸುವಂತೆ ಹಾಗೂ ಹೆಚ್ಚಿನ ಕಾರ್ಯಕ್ರಮಗಳನ್ನು ಸಂಯೋಜನೆ ಮಾಡುವಂತೆ ಚೇತನ ಅಂಗಡಿ ಅವರಿಗೆ ಮಾರ್ಗದರ್ಶನ ನೀಡಿ ಅಭಿನಂದಿಸಿದರು.

ಈ ವೇಳೆ ತಾಲೂಕು ಘಟಕದ ಹಲವಾರು ಪದಾಧಿಕಾರಿಗಳು ಹಾಗೂ ಸಮುದಾಯದ ಪ್ರಮುಖರು ಉಪಸ್ಥಿತರಿದ್ದರು.

ವರದಿ ಪ್ರಕಾಶ್ ಬಸಪ್ಪ ಕುರಗುಂದ..

Leave a Reply

Your email address will not be published. Required fields are marked *